Breaking News

ಹಿಂದೂಗಳು ಒಂದಾಗಿ ಬಿಜೆಪಿ ಮತ ನೀಡಿ ಹಿಂದೂತ್ವ ಗೆಲ್ಲಿಸಿ : ಯತ್ನಾಳ

Spread the love

ಬಾಗಲಕೋಟೆ: ಹಿಂದೂಗಳು ಒಂದಾಗಿ ಬಿಜೆಪಿ ಗೆಲ್ಲಿಸಿದರೆ ಹಿಂದುತ್ವ ಗೆಲ್ಲುತ್ತದೆ. ಉಪಚುನಾವಣೆಯಲ್ಲಿ ಬಾಗಲಕೋಟೆಯನ್ನು ಆರಿಸಿ ತಂದರೆ ಕರ್ನಾಟಕದ ರಾಜಕೀಯವೇ ಬದಲಾಗುತ್ತದೆ ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದರು.

ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಭಗವತಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ಹಿಂದೂ ಸಮಾಜಗಳೆಲ್ಲವೂ ಒಗ್ಗಟ್ಟಾಗಿ ಮತದಾನ ಮಾಡಿದರೆ ಬಿಜೆಪಿಗೆ ಬೃಹತ್ ಶಕ್ತಿ ಬರುತ್ತದೆ. ಇಲ್ಲಿಯವರೆಗೂ ಏನು ಕೆಲಸ ಮಾಡದ ಕಾಂಗ್ರೆಸ್ ಎರಡು ವರ್ಷದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಾಗಲಕೋಟೆಯಲ್ಲಿ ಅದನ್ನು ಸೋಲಿಸಿ ಮುಂದಿನ ಭಯವನ್ನು ಇಂದೇ ಹುಟ್ಟಿಸುವ ಕೆಲಸವನ್ನು ಮತದಾರರು ಮಾಡಬೇಕು. ಬಿಜೆಪಿ ಗೆದ್ದರೂ ಸರಕಾರಕ್ಕೆ ದಕ್ಕೆಯಾಗುವುದಿಲ್ಲ ಆದರೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗುವುದು ನಿಶ್ಚಿತ. ಮುಸ್ಲಿಂರ ತುಷ್ಠಕರಣ ಹಿಂದುಗಳ ಮೇಲೆ ಹಲ್ಲೆ ನಡೆಸುತ್ತಿರುವ ತಾಲಿಬಾನ ಸರಕಾರವನ್ನು ಸೋಲಿಸಿ ಹಿಂದೂ ನಾಯಕ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಿ ಎಂದರು.

ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ ರಾಜ್ಯದಲ್ಲಿ ತುಗಲಕ್ ಸರಕಾರ ಆಡಳಿತ ನಡೆಸುತ್ತಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡುವ ಸರಕಾರಕ್ಕೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ಬಿಜೆಪಿ ಗೆದ್ದರೆ ಹಿಂದೂ ರಕ್ಷಕರಿಗೆ ಮತ್ತು ನಾಯಕರಿಗೆ ಮತ್ತಷ್ಟು ಶಕ್ತಿ ಬರುತ್ತದೆ ಆದ್ದರಿಂದ ಕಾಂಗ್ರೆಸ್ ಕೊಡುವ ಚಿಲ್ಲರೆ ಹಣಕ್ಕೆ ಮರುಳಾಗದೆ ಚರಂತಿಮಠರನ್ನು ಗೆಲ್ಲಿಸಿ ಎಂದರು.

ಗ್ರಾಮದಲ್ಲಿ ತರೆದ ವಾಹನದಲ್ಲಿ ಅದ್ದೂರಿ ರೋಡ್ ಶೋ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ್ ಕೊಣ್ಣೂರ, ರಾಜು ಮುದೆನ್ನವರ, ರೋಹಣ ಜಾದವ್, ಚಂದ್ರು ರಾಮೋಡಗಿ,ಮಹಾಂತೇಶ ಮಮದಾಪೂರ ಸೇರಿದಂತೆ ಬಿಜೆಪಿ ಮುಖಂಡರು ಭಾಗವಹಿಸಿದ್ದರು


Spread the love

About Laxminews 24x7

Check Also

ಎರಡು ಕ್ಷೇತ್ರಗಳ ಉಪ ಚುಣಾವಣೆಯಲ್ಲಿ ನಮ್ಮ‌ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಾದಿಸಲಿದ್ದಾರೆ. ಆಹಾರ ಸಚಿವ ಕೆಹೆಚ್. ಮುನಿಯಪ್ಪ

Spread the loveಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಹುಲ್ಲಪ್ಪ ಮೇಟಿ ರವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ