Breaking News

ಪಾರ್ಕ್ ಗಳಲ್ಲಿ ನಡೆಯಲಿದೆ ಅಂತ್ಯಸಂಸ್ಕಾರ

Spread the love

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರಿದಿದೆ. ಸ್ಮಶಾನಗಳಲ್ಲಿ ಅಂತ್ಯಕ್ರಿಯೆಗೆ ಸ್ಥಳ ಇಕ್ಕಟ್ಟಾದ ಹಿನ್ನೆಲೆ ಅಂತ್ಯಸಂಸ್ಕಾರಕ್ಕೆ ಪಾರ್ಕ್ ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.

ದೆಹಲಿಯ ಸರಾಯ ಕಾಲೇಂ ಖಾಂ ಪಾರ್ಕ್ ಸ್ಮಶಾನವಾಗಿ ಬದಲಾಗಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹ ಬರುತ್ತಿರೋದರಿಂದ ಜನರು ಕ್ಯೂ ಹಚ್ಚುವಂತಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವ ದೆಹಲಿ ಸರ್ಕಾರ ಅಲ್ಲಿರುವ ಪಾರ್ಕ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ. ಸರಾಯ ಕಾಲೇಂ ಖಾಂನಲ್ಲಿ ಏಕಕಾಲದಲ್ಲಿ 20 ಶವಗಳನ್ನು ದಹಿಸುವ ವ್ಯವಸ್ಥೆಗೊಳಿಸಲಾಗುತ್ತಿದೆ. ಮತ್ತೊಂದು ಭಾಗದಲ್ಲಿ 50 ಶವಗಳನ್ನ ಸುಡಲು ಕಟ್ಟೆಗಳನ್ನ ನಿರ್ಮಿಸಲಾಗುತ್ತಿದೆ.

ಸದ್ಯ ಸ್ಮಶಾನದಲ್ಲಿ ಸ್ಥಳ ತುಂಬಾ ಇಕ್ಕಟ್ಟು ಆಗ್ತಿದೆ. ಹೆಣಗಳನ್ನು ಸುಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇತ್ತ ಮೃತದೇಹಗಳು ಒಂದಾದ ನಂತರ ಒಂದು ಬರುತ್ತಿವೆ. ಹೆಣ ಸುಡಲು ಕಟ್ಟಿಗೆಗಳ ಕೊರತೆ ಉಂಟಾಗಿದೆ. ಎಂಎಸ್‍ಡಿ ಕೆಲ ಕಟ್ಟಿಗೆಗಳು ಪೂರೈಕೆ ಮಾಡುತ್ತಿದ್ರೆ, ಸಾರ್ವಜನಿಕರು ಕಟ್ಟಿಗೆ ನೀಡುತ್ತಿದ್ದಾರೆ ಎಂದು ಸ್ಮಶಾನದ ಸಿಬ್ಬಂದಿ ಹೇಳಿದ್ದಾರೆ.

ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಲಾಕ್‍ಡೌನ್‍ಅನ್ನು ದೆಹಲಿಯಲ್ಲಿ ಇನ್ನು ಒಂದು ವಾರಗಳ ಕಾಲ ಮೇ 3ರವರೆಗೆ ಮುಂದುವರಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಮಂಗಳೂರು ಏರ್ಪೋರ್ಟ್‌ನಲ್ಲಿ ಕೆ.ಸಿ.ವೇಣುಗೋಪಾಲ್ ಎದುರು ಡಿಕೆಶಿ​ ಪರ ಘೋಷಣೆ

Spread the loveಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ