Breaking News

ಕಾಗವಾಡ ತಾಲ್ಲೂಕಿಗೆ ಬೇಕಿದೆ ವಿಶೇಷ ಅನುದಾನ

Spread the love

ಕಾಗವಾಡ: ಕಾಗವಾಡ ಹೊಸ ತಾಲ್ಲೂಕೆಂದು ಘೋಷಣೆಯಾಗಿ ಎಂಟು ವರ್ಷ ಕಳೆದಿದೆ ಆದರೆ ಈವರೆಗೂ ಎಲ್ಲ ಇಲಾಖೆಗಳ ಕಚೇರಿ ಬಂದಿಲ್ಲ.

ಇನ್ನೂ ಕೆಲವೇ ಕಚೇರಿಗಳೂ ಬಾಡಿಗೆ ಕಟ್ಟಡಗಳಲ್ಲಿ ಇಕ್ಕಟ್ಟಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ವಿವಿಧ ಕೆಲಸಗಳ ಅಂಗವಾಗಿ ಅಲ್ಲಿಗೆ ಬರುವವರು ತೊಂದರೆ ಅನುಭವಿಸುವಂತಾಗಿದೆ. ಈ ಬಜೆಟ್‌ನಲ್ಲಿ ತಾಲ್ಲೂಕಿಗೆ ಅನುದಾನ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಇಲ್ಲಿ ತಹಶೀಲ್ದಾರ್‌ ಕಚೇರಿಯೂ ಆರಂಭಗೊಂಡಿದೆ. ಆದರೆ ಈ ಕಚೇರಿಗೆ ಸಂಬಂಧಿಸಿದ ಹಲವು ಶಾಖೆಗಳು ಅಥಣಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಜನ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

‘ಕಾಗವಾಡದಿಂದ ಅಥಣಿ 35 ಕಿ.ಮೀ ದೂರದಲ್ಲಿದೆ. ನಾವು ಯಾವುದಾದರೂ ಕೆಲಸಕ್ಕಾಗಿ ಇಡೀ ದಿನ ಕಳೆಯಬೇಕು. ಸದ್ಯ ಇಲ್ಲಿ ತಹಶೀಲ್ದಾರ್‌ ತಾಲ್ಲೂಕು ಪಂಚಾಯಿತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಾಖೆ ನ್ಯಾಯಾಲಯ ಮತ್ತು ಉಪಖಜಾನೆ ಕಚೇರಿ ಆರಂಭಗೊಂಡಿವೆ. ಅವೂ ಬಾಡಿಗೆ ಕಟ್ಟಡದಲ್ಲಿವೆ. ಎಲ್ಲ ಇಲಾಖೆ ಕಚೇರಿ ಆರಂಭಗೊಳ್ಳದರಿಂದ ಸಾರ್ವಜನಿಕರು ಎರಡು ತಾಲ್ಲೂಕು ಕೇಂದ್ರಗಳಿಗೆ ಅಲೆಯುವಂತಾಗಿದೆ. ಸರ್ಕಾರ ಬರುವ ಬಜೆಟ್‌ನಲ್ಲಿ ತಾಲ್ಲೂಕಿಗೆ ಅನುದಾನ ನೀಡಿ ಸ್ವತಂತ್ರ ತಾಲ್ಲೂಕು ಆಗಿ ಪರಿವರ್ತನೆ ಮಾಡಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಡಿ.ಎಸ್. ಸಾವಂತ.


Spread the love

About Laxminews 24x7

Check Also

ಕಾಗವಾಡ ತಹಶೀಲ್ದಾರರಾಗಿ ರವೀಂದ್ರ ಅಧಿಕಾರ ಸ್ವೀಕಾರ

Spread the love ಕಾಗವಾಡ ತಹಶೀಲ್ದಾರರಾಗಿ ರವೀಂದ್ರ ಅಧಿಕಾರ ಸ್ವೀಕಾರ ವಿವಿಧ ಸರ್ಕಾರಿ ಕಟ್ಟಡಗಳ ಸ್ಥಳ ಮಂಜೂರಿಗಾಗಿ ಪ್ರಯತ್ನ ಕಾಗವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ