Breaking News

ಕಾಂಗ್ರೆಸ್ಸ ಮುಖಂಡ ಚಿಂಟು ನೀಲನಾಯಕ ಬಿಜೆಪಿ ಸೇರ್ಪಡೆ

Spread the love

ಬಾಗಲಕೋಟೆ : ಪ್ರಾಮಾಣಿಕರನ್ನು ಶಾಸನ ಸಭೆಗೆ ಆಯ್ಕೆ ಮಾಡುವುದೆ ಪ್ರಜಾಪ್ರಭುತ್ವ ಮುಖ್ಯ ಆಸೆಯ, ಅಂತ ಪ್ರಾಮಾಣಿಕ ರಾಜಕಾರಣಿ ವೀರಣ್ಣ ಚರಂತಿಮಠರು, ಅವರನ್ನು ಮತ ನೀಡಿ ಶಾಸನ ಸಭೆ ಆಯ್ಕೆ ಮಾಡಿ ಕಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಎನ್. ಮಹೇಶ ಹೇಳಿದರು.
ಅವರು ನಗರದ ಶಿವಾನಂದ ಜೀನ್ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಬಾಬಾಸಾಹೇಬರ ಆಸೆಯದಂತೆ ಪ್ರಾಮಾಣಿಕರನ್ನು ಶಾಸನ ಸಭೆಗೆ ಆಯ್ಕೆ ಮಾಡದೆ ಇದ್ದರೆ ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದಂತೆ, ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಾಮಾಣಿಕ ಸರಳ ಸಜ್ಜನಿಕೆಯ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠರಿಗೆ ಮತ ನೀಡಿ ಎಂದರು.
ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ ದೇಶದಲ್ಲಿ 60 ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ಸ ¸ಹಿಂದೂಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಲೆ ಬಂದಿದೆ, ದಲಿತರ ಏಳಿಗೆ ಸಹಿಸದ ಕಾಂಗ್ರೆಸ್ಸ ಪಕ್ಷಕ್ಕೆ ಪಾಠ ಕಲಿಸಿರಿ ಎಂದರು.
ವೇದಿಕೆ ಮೇಲೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಮುತ್ತಣ್ಣ ಬೇಣ್ಣೂರ, ದೇವರಾಜ ಪಾಟೀಲ, ಶಿವಾನಂದ ಟವಳಿ, ಯಲ್ಲಪ್ಪ ನಾರಾಯಣಿ, ಸಾಗರ ಬಂಡಿ ಸೇರಿದಂತೆ ಅನೇಕರು ಇದ್ದರು. ಪಕ್ಷಕ್ಕೆ ಸೇರ್ಪಡೆಗೊಂಡವರು. ಕಾಂಗ್ರೆಸ್ಸ ಮುಖಂಡ ಚಿಟ್ಟು ನೀಲನಾಯಕ, ನವೀನ ನೀಲನಾಯಕ್,ಲೋಕೇಶ ನೀಲನಾಯಕ್, ಸುನೀಲ ನೀಲನಾಯಕ, ಶರಣು ಅಂಬಿಗೇರ, ಈಶ್ವರ ಬಡಿಗೇರ, ದಿನೇಶ ಅಂಬಿಗೇರ, ರಾಜು ನೀಲನಾಯಕ್, ಶ್ರೀಕಾಂತ ಕೊಪ್ಪದ, ಸೇರಿದಂತೆ 50ಕ್ಕೂ ಹೆಚ್ಚು ಜನ ಕಾಂಗ್ರೆಸ್ಸ ತೊರೆದು ಬಿಜೆಪಿ ಸೇರ್ಪಡೆಗೊಂಡರು.


Spread the love

About Laxminews 24x7

Check Also

ಬಾಗಲಕೋಟೆಯಲ್ಲಿ ಕಮಲ ಅರಳಲಿದೆ: ವಿಜಯೇಂದ್ರ ವಿಶ್ವಾಸ

Spread the loveಬಾಗಲಕೋಟೆ: ನಾಮಪತ್ರ ಸಲ್ಲಿಕೆಗೆ ಮುನ್ನ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ