Breaking News

ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನ

Spread the love

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ವಾರ ಹಮ್ಮಿಕೊಂಡಿರುವ ‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನದ ಭಾಗವಾಗಿ ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

‘ಮಾತಾಡ್ ಮಾತಾಡ್ ಕನ್ನಡ’ ಘೋಷವಾಕ್ಯದಡಿ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರು, ಶಿವಮೊಗ್ಗ, ಕಲಬುರಗಿ ಹಾಗೂ ದಾವಣಗೆರೆ ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ.

ಅ.24ರಂದು (ಭಾನುವಾರ) ಬೆಳಿಗ್ಗೆ 10ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಪರ್ವ’ ನಾಟಕ ಪ್ರದರ್ಶನ ಕಾಣಲಿದೆ. ಜಾಲಹಳ್ಳಿಯ ಬಿ.ಇ.ಎಲ್ ರಂಗಮಂದಿರದಲ್ಲಿ ‘ಗುಲಾಬಿ ಗ್ಯಾಂಗ್’ ನಾಟಕವನ್ನು ರಂಗ ಪಯಣ ತಂಡವು ಪ್ರಸ್ತುತಪಡಿಸಲಿದೆ. ಅ.25ರಂದು (ಸೋಮವಾರ) ಸಂಜೆ 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮೂಕನ ಮಕ್ಕಳು’ ನಾಟಕ ಪ್ರದರ್ಶನವಾಗಲಿದೆ. ಮಲ್ಲೇಶ್ವರದ ಎಂ.ಇ.ಎಸ್ ಕಾಲೇಜಿನ ಸಭಾಭವನದಲ್ಲಿ ‘ಮಾಯಾಬೇಟೆ’ ನಾಟಕವನ್ನು ದೃಶ್ಯಕಾವ್ಯ ಪ್ರಸ್ತುತಪಡಿಸಲಿದೆ.

ಅ.26ರ ಸಂಜೆ 6.30ಕ್ಕೆ ಕಲಾ
ಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಚಾಣಕ್ಯ ಪ್ರಪಂಚ’, ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ರಾಶಿ ಚಕ್ರ’, ಶೇಷಾ
ದ್ರಿಪುರ ಸಂಜೆ ಕಾಲೇಜಿನಲ್ಲಿ ‘ಶಿವರಾತ್ರಿ’ ನಾಟಕ ಹಾಗೂ ಪೀಣ್ಯದ ಬಿ.ಇ.ಎಲ್‌ನಲ್ಲಿ ‘ಮೂಕನ ಮಕ್ಕಳು’ ನಾಟಕಗಳು ಪ್ರದರ್ಶನ ಕಾಣಲಿವೆ.

ಅ.27ರಂದು ಸಂಜೆ 6.30ಕ್ಕೆ ಕಲ್ಯಾಣ ನಗರದ ಡಾ. ಶಿವಕುಮಾರಸ್ವಾಮಿ ಜ್ಞಾನಸೌಧದಲ್ಲಿ ‘ಮೂಕನ ಮಕ್ಕಳು’, ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕನ್ನಡ ಕಲಿಯೋಣ ಬಾ’ ನಾಟಕ, ಮಲ್ಲೇಶ್ವರದ ಕುವೆಂಪು ಸಭಾಂಗಣದಲ್ಲಿ ‘ಕತ್ತಲೆಯ ಕೊರೊನಾ’ ನಾಟಕ, ಮೆಜೆಸ್ಟಿಕ್‌ನ ಆರ್.ಎಂ.ಎಸ್. ಕನ್ನಡ ಸಂಘದಲ್ಲಿ ಮಹದೇವಯ್ಯ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಅ.28ರಂದು ಸಂಜೆ 6.30ಕ್ಕೆ ಕುರುಬರಹಳ್ಳಿಯ ರಾಜಕುಮಾರ ಸಭಾಂಗಣದಲ್ಲಿ ‘ಕತ್ತಲೆ ಕರೊನಾ’ ನಾಟಕ, ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ ‘ಶ್ರದ್ಧಾ ಮತ್ತು ಸ್ಟೈನ್‌ಲೆಸ್‌ ಸ್ಟೀಲ್‌ ಪಾತ್ರೆಗಳು’ ನಾಟಕ, ಆರ್‌ಪಿಸಿ ಬಡಾವಣೆಯ ಗ್ರಂಥಾಲಯ ಸಭಾಂಗಣದಲ್ಲಿ ‘ಸಿರಿ ಪುರಂದರ’ ನಾಟಕ ಹಮ್ಮಿಕೊಳ್ಳಲಾಗಿದೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ