ನವದೆಹಲಿ: ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ನಿಮ್ಮ ಒತ್ತಡಗಳಿಗೆ ನಾವು ಬಗ್ಗುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಹಾರ ಅಜಿತ್ ದೋವಲ್ ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಸೆಪ್ಟೆಂಬರ್ನಲ್ಲಿ ಮೋದಿ (Narendra Modi) ಅವರು ಚೀನಾದಲ್ಲಿ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದ ನಂತರ ಅಜಿತ್ ದೋವಲ್ ಅಮೆರಿಕಕ್ಕೆ ತೆರಳಿದ್ದರು.
ವ್ಯಾಪಾರ ಒಪ್ಪಂದ ಮಾತುಕತೆಗೆ ಸಂಬಂಧಿಸಿದಂತೆ ದೋವಲ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಸಭೆ ನಡೆಸಿದರು.
ಮಾತುಕತೆಯ ವೇಳೆ ಅಮೆರಿಕದ ಒತ್ತಡಕ್ಕೆ ಭಾರತ ಜಗ್ಗುವುದಿಲ್ಲ. ಈ ಹಿಂದೆಯೂ ಮೋದಿ ಸರ್ಕಾರದ ಅಮೆರಿಕದ ಸರ್ಕಾರ ಯಾವ ರೀತಿ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ಒಂದು ವೇಳೆ ಈ ಅವಧಿಯ ಒಳಗಡೆ ವ್ಯಾಪಾರ ಒಪ್ಪಂದ ಆಗದೇ ಇದ್ದರೆ ಟ್ರಂಪ್ ಅವಧಿ ಮುಗಿಯವವರೆಗೂ ಕಾಯುವುದಾಗಿ ಖಡಕ್ ಆಗಿ ತಿಳಿಸಿದ್ದರು ಎಂದು ಮಧ್ಯಮ ವರದಿ ಮಾಡಿದೆ.
ವ್ಯಾಪಾರ ಒಪ್ಪಂದದಲ್ಲಿರುವ ಷರತ್ತುಗಳನ್ನು ಪರಿಶೀಲಿಸಿ. ಟ್ರಂಪ್ ಮತ್ತು ಅವರ ಸಹಾಯಕರು ಟೀಕೆ ಮಾಡುವುದನ್ನು ಕಡಿಮೆ ಮಾಡಬೇಕು. ಆಗ ಮಾತ್ರ ಸಂಬಂಧ ಹಳಿಗೆ ಬರಬಹುದು ಎಂದು ಹೇಳಿದ್ದರು.
ಯುರೋಪಿಯನ್ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದ ಬೆನ್ನಲ್ಲೇ ಅಮೆರಿಕ ಭಾರತದ ಮೇಲೆ ವಿಧಿಸಿದ್ದ ಸುಂಕವನ್ನು ಕಡಿತ ಮಾಡಿದೆ.
ಟ್ರಂಪ್ ಹಾಕಿದ್ದ ಸುಂಕಗಳು ಯಾವುದು?
10% ಮೂಲ ಸುಂಕ: ಏಪ್ರಿಲ್ 2025 ರಿಂದ ಬಹುತೇಕ ಎಲ್ಲಾ ಅಮೆರಿಕದ ಆಮದುಗಳಿಗೆ ಅನ್ವಯಿಸಲಾದ ಸಾಮಾನ್ಯ ಸುಂಕ.
15% ಪ್ರತಿ ಸುಂಕ: ಅಮೆರಿಕ ಉತ್ಪನ್ನಗಳ ಮೇಲೆ ಭಾರತವು ತನ್ನದೇ ಆದ ಹೆಚ್ಚಿನ ಸುಂಕ ಹಾಕಿದ್ದಕ್ಕೆ ವಿಧಿಸಿದ ಸುಂಕ.
25% ದಂಡ ಸುಂಕ: ಆಗಸ್ಟ್ 27, 2025 ರಂದು ಹೆಚ್ಚುವರಿ ಸುಂಕವನ್ನು ಹಾಕಲಾಗುತ್ತಿದೆ. ನಿರ್ದಿಷ್ಟವಾಗಿ ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸಲು ಭಾರತ ನಿರಾಕರಿಸಿದ್ದಕ್ಕೆ ದಂಡದ ರೂಪದಲ್ಲಿ ಹಾಕಲಾಗುತ್ತಿದೆ. ಹೀಗಾಗಿ ಒಟ್ಟು 50% ಸುಂಕವನ್ನು ಅಮೆರಿಕ ಭಾರತದ ಕೆಲ ವಸ್ತುಗಳಿಗೆ ವಿಧಿಸಿತ್ತು.
Laxmi News 24×7