Breaking News

5000+ ಕೋಟಿ ಠೇವಣಿ ಸಂಗ್ರಹಿಸಿದ ಯಕ್ಸಂಬಾದ ಶ್ರೀ ಬೀರೇಶ್ವರ ಸಂಸ್ಥೆ

Spread the love

ಚಿಕ್ಕೋಡಿ: ಕರ್ನಾಟಕ ಗಡಿ ಭಾಗದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ( ಮಲ್ಟಿ ಸ್ಟೇಟ್) 5 ಸಾವಿರ ಕೋಟಿ ರೂಪಾಯಿ ಠೇವು ಸಂಗ್ರಹಿಸುವ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಹಾಗೂ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ.

ಜೊಲ್ಲೆ ಗ್ರೂಪ್ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ 1991ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ.

ಸೊಸಾಯಿಟಿಯು ಫೆಬ್ರವರಿ 13, 2026ರ ಸ್ಥಿತಿಗೆ 4.37 ಲಕ್ಷ ಸದಸ್ಯರನ್ನು ಹೊಂದಿದ್ದು, ಒಟ್ಟು 5033 ಕೋಟಿ ಠೇವು ಸಂಗ್ರಹಿಸಿದೆ. 3,675 ಕೋಟಿ ರೂಪಾಯಿ ಸಾಲವನ್ನು ವಿತರಿಸಿದ್ದು, ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. “ಸದಸ್ಯರ ವಿಶ್ವಾಸವೇ ನಮ್ಮ ಸಂಸ್ಥೆಯ ಶಕ್ತಿ” ಎಂದು ಜೊಲ್ಲೆ ಗ್ರೂಪ್ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ

ಬೀರೇಶ್ವರ ಸಂಸ್ಥೆ ಕರ್ನಾಟಕದಲ್ಲಿ 178, ಮಹಾರಾಷ್ಟ್ರದಲ್ಲಿ 48 ಹಾಗೂ ಗೋವಾದಲ್ಲಿ 5 ಸೇರಿ ಒಟ್ಟು 231 ಶಾಖೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಸಹಕಾರ, ಕೃಷಿ, ಹಣಕಾಸು, ಶಿಕ್ಷಣ, ಹೈನುಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಜೊಲ್ಲೆ ಗ್ರೂಪ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಸಿರು ಶಕ್ತಿ ಉತ್ಪಾದನೆ, ಆರೋಗ್ಯ ಸೇವೆ, ಕಟ್ಟಡ ನಿರ್ಮಾಣ ಹಾಗೂ ಐಟಿಸಿ ಸಹಭಾಗಿತ್ವದಲ್ಲಿ ‘ವೆಲ್‌ಕಮ್’ ಫೈವ್ ಸ್ಟಾರ್ ಹೋಟೆಲ್ ಸ್ಥಾಪನೆಯಂತಹ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ.


Spread the love

About Laxminews 24x7

Check Also

ಬೆಳಗಾವಿ: ಶಹಾಪುರದ ಸಂಕಟ ವಿಮೋಚನ ಹನುಮಾನ್ ಮಂದಿರದಲ್ಲಿ ಮಾರುತಿ ಜಯಂತಿ ಸಮಾರೋಪ; ಭಕ್ತ ಸಾಗರಕ್ಕೆ ಮಹಾಪ್ರಸಾದ ವಿನಿಯೋಗ!

Spread the loveಬೆಳಗಾವಿ ಶಹಾಪುರದ ಕಚೇರಿ ಗಲ್ಲಿ, ಮಹಾತ್ಮಾ ಫೂಲೆ ರಸ್ತೆಯಲ್ಲಿರುವ ಸಂಕಟ ವಿಮೋಚನ ಹನುಮಾನ ಮಂದಿರದಲ್ಲಿ ಶನಿವಾರ ಸಂಜೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ