Breaking News

ಇನ್ಮುಂದೆ ಕ್ರಿಕೆಟ್​ನಲ್ಲಿ ‘ಬ್ಯಾಟ್ಸ್​ಮನ್’​ ಎನ್ನುವಂತಿಲ್ಲ: ಲಿಂಗ ಸಮಾನತೆಗಾಗಿ ‘ಬ್ಯಾಟರ್’ ಪದ ಬಳಕೆಗೆ ಆದೇಶ

Spread the love

ಕ್ರಿಕೆಟ್ ಆಟದಲ್ಲಿ ಇನ್ನು ಬ್ಯಾಟಿಂಗ್ ಮಾಡುವವರನ್ನು “ಬ್ಯಾಟ್ಸ್‌ಮನ್” (Batsman) ಎಂದು ಕರೆಯಲಾಗುವುದಿಲ್ಲ. ಕ್ರಿಕೆಟ್ ​ಅನ್ನು ಅಂತರ್ಗತ ಆಟವಾಗಿ ಬಲಪಡಿಸುವ ಪ್ರಯತ್ನವಾಗಿ ಬ್ಯಾಟ್ಸ್​ಮನ್​ ಎಂಬ ಪದದ ಬದಲು ಇನ್ನು ಮುಂದೆ ಲಿಂಗ ತಟಸ್ಥ ಪದ “ಬ್ಯಾಟರ್”​ (Batter) ಎಂಬ ಪದವನ್ನು ಕ್ರಿಕೆಟ್ ನಿಯಮಾವಳಿಯಲ್ಲಿ ಅಳವಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ನಿಯಮ ರೂಪಿಸಲಾಗಿದ್ದು ಬದಲಾವಣೆ ತಕ್ಷಣದಿಂದ ಜಾರಿಯಾಗಿದೆ ಎಂದು ಮೆರಿಲ್‌ಬಾರ್ನ್‌ ಕ್ರಿಕೆಟ್ ಕ್ಲಬ್‌ (MCC) ತಿಳಿಸಿದೆ. ಎಂಸಿಸಿ ಕ್ರಿಕೆಟ್ ನಿಯಮಗಳ ರಕ್ಷಕನಾಗಿದ್ದು, ಐಸಿಸಿ (ICC) ಕೂಡ ಅದು ಜಾರಿಗೊಳಿಸುವ ನಿಯಮಗಳನ್ನೇ ಪಾಲಿಸುತ್ತದೆ. ಕ್ರಿಕೆಟ್‌ನ ಮೂಲ ನಿಯಮಗಳನ್ನು ಬದಲಾಯಿಸುವ ಹಕ್ಕು ಐಸಿಸಿಗೂ ಇರುವುದಿಲ್ಲ. ಅದು ಎಂಸಿಸಿ ತರುವ ಬದಲಾವಣೆಯನ್ನಷ್ಟೇ ಅಳವಡಿಸಿಕೊಳ್ಳಬಹುದಾಗಿದೆ. ಎಂಸಿಸಿಯ ಕಾನೂನು ಉಪ-ಸಮಿತಿಯ ಜತೆ ಚರ್ಚಿಸಿ ಎಂಸಿಸಿ ಸಮಿತಿ ಈ ಪದ ಬದಲಾವಣೆಯನ್ನು ಅಂಗೀಕರಿಸಿದೆ.

“ಲಿಂಗ-ತಟಸ್ಥ ಪದಜ್ಞಾನದ ಬಳಕೆಯು ಎಲ್ಲರನ್ನೂ ಒಳಗೊಂಡ (ಪುರುಷ ಮತ್ತು ಮಹಿಳೆ) ಆಟವಾಗಿ ಕ್ರಿಕೆಟ್ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಎಂಸಿಸಿ ನಂಬುತ್ತದೆ” ಎಂದು MCC ಉಸ್ತುವಾರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ಯಾಟ್ಸ್‌ಮನ್‌ ಪದ ಪುಲ್ಲಿಂಗ, ಇದು ಪುರುಷರಿಗೆ ಬಳಸುವಂಥದ್ದು. ಮಹಿಳೆಯರಿಗೆ ಯಾವ ಪದ ಬಳಸುವುದು ಎಂಬ ಬಗ್ಗೆ ನಿರಂತರ ಚರ್ಚೆಯಾಗುತ್ತಿತ್ತು. 2017ರಲ್ಲಿ ಇದೇ ವಿಚಾರ ಚರ್ಚೆಗೆ ಬಂದಾಗ ಐಸಿಸಿ ಮತ್ತು ಎಂಸಿಸಿ ಪರಸ್ಪರ ಚರ್ಚಿಸಿ ಬ್ಯಾಟ್ಸ್‌ಮನ್‌ ಪದವನ್ನೇ ಉಳಿಸಿಕೊಂಡಿದ್ದವು. ಕೆಲವರು “ಬ್ಯಾಟ್ಸ್‌ವುಮನ್‌’ ಎಂದು ಬಳಸಿದ್ದೂ ಇದೆ. ಈ ಬಾರಿ ಮಾತ್ರ “ಬ್ಯಾಟರ್‌’ ಪದಕ್ಕೆ ಸಮ್ಮತಿಯ ಮುದ್ರೆಯನ್ನೊತ್ತಲಾಗಿದೆ. ಆದರೆ ಬೌಲರ್‌, ಫೀಲ್ಡರ್‌ ಪದಗಳು ನಿಯಮಗಳ ವ್ಯಾಪಿತ್ತಯಲ್ಲೇ ಬರುತ್ತವೆ, ಇಲ್ಲಿ ಬದಲಾವಣೆ ಅಗತ್ಯವಿಲ್ಲ ಎಂದು ಎಂಸಿಸಿ ಹೇಳಿದೆ.

ಮಹಿಳಾ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಹೆಸರು ಗಳಿಸಿದ್ದರೂ ಬ್ಯಾಟಿಂಗ್ ಮಾಡುವವರನ್ನು ಸೂಚಿಸಲು ಸಮಾನ ಪದ ಜಾರಿಯಲ್ಲಿ ಇರಲಿಲ್ಲ. ಮಹಿಳಾ ಕ್ರಿಕೆಟ್‌ನಲ್ಲಿ ಬ್ಯಾಟರ್ ಎಂದು ಬಳಸಲಾಗುತ್ತಿದ್ದರೂ ಬ್ಯಾಟ್ಸ್‌ಮನ್ ಎಂಬ ಪದವೇ ವಿಜೃಂಭಿಸುತ್ತಿತ್ತು. ಹೀಗಾಗಿ ಒಂದೇ ಪದವನ್ನು ಬಳಕೆಗೆ ತರಲು ನಿರ್ಧರಿಸಲಾಗಿದೆ.

ಪುರುಷ ಮತ್ತು ಮಹಿಳಾ ಕ್ರಿಕೆಟ್​ನಲ್ಲಿ ಚೆಂಡನ್ನು ಎಸೆಯುವವರಿಗೆ ಬೌಲರ್​​, ಕ್ಷೇತ್ರ ರಕ್ಷಣೆ ಮಾಡುವವರಿಗೆ ಫೀಲ್ಡರ್​ ಮತ್ತು ಗೂಟ ರಕ್ಷಕರಿಗೆ ವಿಕೆಟ್​ ಕೀಪರ್​ ಎಂಬ ಸಾಮಾನ್ಯಪದ ಬಳಕೆಯಾಗುತ್ತಿದೆ. ಆದರೆ ದಾಂಡಿಗರಿಗೆ ಮಾತ್ರ ಬ್ಯಾಟ್ಸ್​ಮನ್​ ಎನ್ನಲಾಗುತ್ತಿತ್ತು. ಇದೀಗ ಆ ಪದದ ಬದಲಿಗೆ ಬ್ಯಾಟರ್​ ಎಂಬ ಪದವನ್ನು ಲಿಂಗ ತಟಸ್ಥವಾಗಿ ಬಳಸಲು ಎಂಸಿಸಿ ಕ್ರಿಕೆಟ್​ ಕಾನೂನಿನಲ್ಲಿ ಬದಲಾವಣೆ ತಂದಿದೆ.​


Spread the love

About Laxminews 24x7

Check Also

ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ ಅಮೂಲ್ಯ – ಸಚಿವ ಸತೀಶ್ ಜಾರಕಿಹೊಳಿ

Spread the loveಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ