Breaking News

ಜಲಾಶಯಕ್ಕೆ ಸಿಎಂ ಭೇಟಿ : ಬಿಗಿ ಭದ್ರತೆ, ಶೃಂಗಾರಗೊಂಡ ಆಲಮಟ್ಟಿ ಜಲಾಶಯ

Spread the love

ವಿಜಯಪುರ: ಇಂದು ಸಿ ಎಮ್ ಯಡಿಯೂರಪ್ಪನವರು ಆಲಮಟ್ಟಿ ಜಲಾಶಯಕ್ಕೆ ಇಂದು ಮದ್ಯಾಹ್ನ ಆಗಮಿಸುವ ಹಿನ್ನಲೆಯಲ್ಲಿ ಆಲಮಟ್ಟಿ ತಳಿರು ತೋರಣಗಳು, ಪುಷ್ಪಗಳಿಂದ ಶೃಂಗಾರಗೊಂಡಿದೆ. ಈಗಾಗಲೇ ಜಿಲ್ಲಾಡಳಿತ ಮತ್ತು ಕೆ.ಬಿ.ಜಿ ಎನ್.ಎಲ್ ಅಧಿಕಾರಿಗಳು ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಪತ್ರಕರ್ತರಿಗೂ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ ಒಳ ಬಿಡಲಾಗುತ್ತಿದೆ. ಸಿಎಂ ಸ್ವಾಗತ ಕೋರಿ ಆಲಮಟ್ಟಿ ಜಲಾಶಯ, ಪ್ರವೇಶ ದ್ವಾರ, ವೃತ್ತ ಸೇರಿದಂತೆ ಪಟ್ಟಣದಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿವೆ.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳನ್ನು ಮುಖ್ಯ ಮಂತ್ರಿ ವೈಮಾನಿಕ ಸಮೀಕ್ಷೆ ಮಾಡಿದ ಬಳಿಕ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಅಧಿಕಾರಿಗಳು, ಸಚಿವರು, ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ಬೆಳಗಾವಿ ಐಜಿಪಿ, ಬಾಗಲಕೋಟೆ ಜಿಲ್ಲಾ ಎಸ್ಪಿ ಖುದ್ದು ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ‌.

ಬಾಗಲಕೋಟೆ, ವಿಜಯಪುರ ಪೋಲಿಸ್ ಅಧಿಕಾರಿಗಳು ಶಾಸ್ತ್ರಿ ಜಲಾಶಯದ ಹಾಗೂ ಹೆಲಿಪ್ಯಾಡ ಸ್ಥಳಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಯನ್ನ ಕೈಗೊಂಡು ಪರಿಶೀಲನೆಯನ್ನ ನಡೆಸಿದ್ದಾರೆ. ಇನ್ನೂ ಸಿ.ಎಂ. ಅವರ ಭದ್ರತೆಗಾಗಿ 2ಎಸ್ಪಿ, 3ಡಿವೈಎಸ್ಪಿ, 7ಸಿಪಿಐ, 26 ಪಿಎಸೈ, ೨೫ಎಎಸೈ, 64 ಮುಖ್ಯಪೇದೆ, 158 ಪೇದೆ, 18 ಮಹಿಳಾ ಪೇದೆ, 4ಡಿಎಆರ್, 2 ಐಆರ್ಬಿ ಪಡೆ, ಕೆಎಸ್.ಐ.ಎಸ್.ಎಫ್ ಪಡೆಗಳನ್ನು ನಿಯೋಜಿಸಲಾಗಿದೆ. ಸಿಎಂ ಆಗಮಿಸುವ ಹಿನ್ನೆಲೆ ನಿನ್ನೆ ಬೆಳಗಾವಿಯಿಂದ ಒಂದು ಸೇನಾ ಹೆಲಿಕಾಪ್ಟರ್ ಬಂದು ಹೆಲಿಪ್ಯಾಡ ಸ್ಥಳವನ್ನ ಪರಿಶೀಲನೆ ಮಾಡಿದೆ.


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ