ಧಾರವಾಡ : ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಿಬಿಐ ಬಿಗ್ ಶಾಕ್ ನೀಡಿದ್ದು, ಇಂದು ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿಯನ್ನು ಸಿಬಿಐ ಬಂಧಿಸಿದೆ.
ಸುಪ್ರೀಂಕೋರ್ಟ್ ನಲ್ಲಿ ಇಂದು ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಲಿದ್ದು, ಈ ಹೊತ್ತಲ್ಲೇ ವಿನಯ್ ಕುಲಕರ್ಣಿಗೆ ಬಿಗ್ ಶಾಕ್ ನೀಡಿದ್ದು, ಆಪ್ತ ಕಾರ್ಯದರ್ಶಿ ಸೋಮುನ್ನು ಸಿಬಿಐ ಬಂಧಿಸಿದೆ.
ವಿನಯ್ ಕುಲಕರ್ಣಿ ಸಚಿವರಾಗಿದ್ದ ವೇಳೆ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಈ ವೇಳೆ ಸೋಮು ಮೂರು ವರ್ಷಗಳ ಕಾಲ ವಿನಯ್ ಕುಲಕರ್ಣಿ ಆಪ್ತ ಕಾರ್ಯರ್ಶಿಯಾಗಿದ್ದರು. ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಸೋಮನನ್ನು ಬಂಧಿಸಿದ್ದಾರೆ.
Laxmi News 24×7