ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳು ಮಂಗಳವಾರದಿಂದ (ನ.1) ಧ್ವನಿ-ಬೆಳಕಿನಲ್ಲಿ ಮಿಂದೇಳಲಿವೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಹಂಪಿ ಬೈ ನೈಟ್‌ಗೆ ಪುನಃ ಚಾಲನೆ ಕೊಡಲಾಗುತ್ತಿದೆ. ಇದಕ್ಕಾಗಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಹಂಪಿ ಬೈ ನೈಟ್‌ಗೆ ಪುನಃ ಚಾಲನೆ ಕೊಡಲಾಗುತ್ತಿದೆ. ಇದಕ್ಕಾಗಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ಒಟ್ಟು 20 ಸ್ಮಾರಕಗಳನ್ನು ಆಯ್ಕೆ ಮಾಡಲಾಗಿದೆ. ಹಂಪಿ ವಿಜಯ ವಿಠಲ ದೇವಸ್ಥಾನದ ಸಪ್ತಸ್ವರ ಮಂಟಪ, ಕಲ್ಲಿನ ರಥ, ಅದಕ್ಕೆ ಹೊಂದಿಕೊಂಡಿರುವ ಸಾಲು ಮಂಟಪಗಳು ಸೇರಿದಂತೆ ಇತರೆ ಸ್ಮಾರಕಗಳು ಬಣ್ಣದ ಬೆಳಕಿನಲ್ಲಿ ಮಿಂದೇಳಲಿವೆ.
16 ಸ್ಮಾರಕಗಳು ದೀಪಾಲಂಕಾರದಿಂದ ಕಂಗೊಳಿಸಲಿವೆ. ಎರಡು ಸ್ಮಾರಕಗಳ ಬಳಿ ಆಡಿಯೋ ಮತ್ತು ಡೈನಮಿಕ್ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು, ವಿರೂಪಾಕ್ಷ ದೇವಸ್ಥಾನ ಹಾಗೂ ವಿಜಯ ವಿಠಲ ಬಜಾರ್‌ನಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.