Breaking News

ಮಾ.15ರಿಂದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

Spread the love

ಬೆಂಗಳೂರು: ನೈರುತ್ಯ ರೈಲ್ವೆಯು ವಂದೇ ಭಾರತ್ ರೈಲುಗಳ ವೇಳಾಪಟ್ಟಿಯನ್ನು ನಿಗದಿತ ನಿಲ್ದಾಣಗಳಲ್ಲಿ ಪರಿಷ್ಕರಿಸಿದೆ. ಇದು ಮಾ.15ರಿಂದ ಜಾರಿಗೆ ಬರಲಿದ್ದು, ಮಾಹಿತಿ ಕೆಳಗಿನಂತಿದೆ.

1. ರೈಲು ಸಂಖ್ಯೆ 20669:
ಎಸ್‌ಎಸ್‌ಎಸ್ ಹುಬ್ಬಳ್ಳಿ  -ಪುಣೆ  ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿಯಲ್ಲಿ ಬೆಳಿಗ್ಗೆ 7:05ರಿಂದ 07:10 ಗಂಟೆ ಮತ್ತು ಘಟಪ್ರಭಾದಲ್ಲಿ ಬೆಳಿಗ್ಗೆ 07:48ರಿಂದ 07:50ರವರೆಗೆ ನಿಲುಗಡೆಯಾಗಲಿದೆ. 

2. ರೈಲು ಸಂಖ್ಯೆ 20661:
ಕೆಎಸ್‌ಆರ್ ಬೆಂಗಳೂರು -ಧಾರವಾಡ  ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ದಾವಣಗೆರೆಯಲ್ಲಿ ಬೆಳಿಗ್ಗೆ 09:30ರಿಂದ 09:32ರವರೆಗೆ ಹಾಗೂ ಹಾವೇರಿಯಲ್ಲಿ ಬೆಳಿಗ್ಗೆ 10:20ರಿಂದ 10:22ರವರೆಗೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಬೆಳಿಗ್ಗೆ 11:15ರಿಂದ 11:20ರವರೆಗೆ ನಿಲುಗಡೆಯಾಗಲಿದೆ.

3. ರೈಲು ಸಂಖ್ಯೆ 20662:
ಧಾರವಾಡ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹಾವೇರಿಯಲ್ಲಿ 14:48ರಿಂದ 14:50ರವರೆಗೆ ಮತ್ತು ದಾವಣಗೆರೆಯಲ್ಲಿ 15:33ರಿಂದ 15:35ರವರೆಗೆ ನಿಲುಗಡೆಯಾಗಲಿದೆ. ತುಮಕೂರು ನಿಲ್ದಾಣದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಯಶವಂತಪುರ ನಿಲ್ದಾಣಕ್ಕೆ 19:21ರಿಂದ 19:23ರವರೆಗೆ ತಲುಪಿ, ನಿರ್ಗಮಿಸಲಿದೆ.

4. ರೈಲು ಸಂಖ್ಯೆ 26751:
ಬೆಳಗಾವಿ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹಾವೇರಿಯಲ್ಲಿ ಬೆಳಿಗ್ಗೆ 08:42ತಿಂದ 08:44 ಗಂಟೆಗೆ, ದಾವಣಗೆರೆಯಲ್ಲಿ ಬೆಳಿಗ್ಗೆ 09:28ರಿಂದ 09:30ವರೆಗೆ, ತುಮಕೂರಿನಲ್ಲಿ 12:15ರಿಂದ 12:17ವರೆಗೆ ಮತ್ತು ಯಶವಂತಪುರದಲ್ಲಿ 13:23ರಿಂದ 13:25ರವರೆಗೆ ನಿಲುಗಡೆಯಾಗಲಿದೆ.

5. ರೈಲು ಸಂಖ್ಯೆ 20704:
ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹಿಂದೂಪುರ ನಿಲ್ದಾಣದಲ್ಲಿ 15:55ರಿಂದ 15:57ರವರೆಗೆ ನಿಲುಗಡೆಗೊಳ್ಳಲಿದೆ. ಅದೇ ರೀತಿ ರೈಲು ಸಂಖ್ಯೆ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ ಹಿಂದೂಪುರದಲ್ಲಿ 12:17ರಿಂದ 12:19ವರೆಗೆ ನಿಲುಗಡೆಯಾಗಲಿದೆ.

6. ರೈಲು ಸಂಖ್ಯೆ 22231:
ಕಲಬುರಗಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಬೆಳಿಗ್ಗೆ 11:13ರಿಂದ 11:15ರವರೆಗೆ ಮತ್ತು ಯಲಹಂಕದಲ್ಲಿ 12:58ರಿಂದ 13:00ರವರೆಗೆ ನಿಲುಗಡೆಯಾಗಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 22232 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಯಲಹಂಕದಲ್ಲಿ 15:09ರಿಂದ 15:11ರವರೆಗೆ ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ 16:45ರಿಂದ 16:47ರವರೆಗೆ ನಿಲುಗಡೆಯಾಗಲಿದೆ.

7. ರೈಲು ಸಂಖ್ಯೆ 20642:
ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹೊಸೂರು ನಿಲ್ದಾಣದಲ್ಲಿ 12:13ರಿಂದ 12:15 ರವರೆಗೆ ನಿಲುಗಡೆಯಾಗಲಿದೆ.


Spread the love

About Laxminews 24x7

Check Also

ಡಿಕೆಶಿ ಪರವಾಗಿ ನಾವಿದ್ದೇವೆ, ದೆಹಲಿಯಿಂದ ನಾಳೆನೇ ಬರಲಿ ತೊಂದ್ರೆ ಇಲ್ಲ: ಸತೀಶ್ ಜಾರಕಿಹೊಳಿ

Spread the loveಬೆಂಗಳೂರು: ದೆಹಲಿಗೆ  ತೆರಳಿರುವ ಡಿಸಿಎಂ ಡಿಕೆಶಿ  ಪರವಾಗಿ ನಾವಿದ್ದೇವೆ. ಅವರು ನಾಳೆನೇ ಬರಲಿ ತೊಂದರೆ ಇಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ