Breaking News

ವೈದ್ಯರ ನಿರ್ಲಕ್ಷ್ಯದಿಂದ ನನ್ನ ಪತ್ನಿ ಮೃತಪಟ್ಟಿದ್ದಾಳೆ -ವೈದ್ಯರ ವಿರುದ್ಧ BJP ಮುಖಂಡನ ಆರೋಪ

Spread the love

ಉಡುಪಿ: ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಮೃತಪಟ್ಟಿರುವ ಆರೋಪ ಉಡುಪಿ ನಗರದ ಮಿಷನ್‌ ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿ ಬಂದಿದೆ. ಸ್ಥಳೀಯ ಬಿಜೆಪಿ ಮುಖಂಡನ ಪತ್ನಿ ಶ್ರೀರಕ್ಷಾ(26) ಮೃತ ಮಹಿಳೆ.

 

ಬಿಜೆಪಿ ಮುಖಂಡನ ಪತ್ನಿ ಶ್ರೀರಕ್ಷಾ ತಲೆನೋವೆಂದು ಮಿಷನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ವೈದ್ಯರು ಅಸ್ವಸ್ಥ ಮಹಿಳೆಗೆ ಇಂಜೆಕ್ಷನ್ ಕೊಟ್ಟು ಕಳುಹಿಸಿದ್ದರು. ಮನೆಗೆ ತೆರಳುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ಶ್ರೀರಕ್ಷಾ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡ, ಪತಿ ಶಿವಪ್ರಸಾದ್ ಆರೋಪಿಸಿದ್ದಾರೆ.

.

 ಜೊತೆಗೆ ಮೃತ ಮಹಿಳೆಯ ಕೊರೊನಾ ವರದಿಯಲ್ಲೂ ಗೊಂದಲ ಉಂಟಾಗಿದೆ.

ಱಪಿಡ್‌ ಟೆಸ್ಟ್‌ನಲ್ಲಿ ವರದಿ ನೆಗೆಟಿವ್ ಬಂದಿದ್ದ ಮಾಹಿತಿ ಇದೆ. ಆದ್ರೆ ತಡರಾತ್ರಿ ಬಂದ ಮತ್ತೊಂದು ವರದಿಯಲ್ಲಿ ಪಾಸಿಟಿವ್ ಬಂದಿದೆ. ವರದಿ ಪ್ರತಿ ಮೇಲೆ ಸರ್ಕಾರಿ ವೈದ್ಯರ ಸಹಿಯೂ ಇಲ್ಲ, ಸೀಲೂ ಇಲ್ಲ. ಪಾಸಿಟಿವ್ ಎಂದು ವರದಿ ಕೊಟ್ಟು ಖಾಸಗಿ ಆಸ್ಪತ್ರೆ ಸೇಫ್ ಆಗುತ್ತಿದೆ ಎಂಬ ಆರೋಪ ಕೂಡ ಮೃತಳ ಪತಿ ಮಾಡಿದ್ದಾರೆ.

ಹೀಗಾಗಿ ಉಡುಪಿ ಜಿಲ್ಲಾಸ್ಪತ್ರೆಯ ಮುಂದೆ ಸಂಬಂಧಿಕರು ಸೇರಿದ್ದಾರೆ. ಪಾಸಿಟಿವ್ ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಳ್ಳು ಹೇಳ್ತಿದ್ದಾರೆ. ಶವ ಕೊಡಿ ನಾವೇ ಅಂತ್ಯಸಂಸ್ಕಾರ ಮಾಡ್ತೀವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ