ಕುಣಿಗಲ್, ಕದ್ದುಮುಚ್ಚಿ ಸಿಗರೇಟ್ ಸೇದಲು ಹೋದ ಬಾಲಕರ ಮೇಲೆ ಇಟ್ಟಿಗೆ ಗೂಡು ಕುಸಿದು ಸಾವನ್ನಪ್ಪಿರುವ ಘಟನೆ ಅಮೃತೂರು ಪೊಲೀಸ್ ಠಾಣಾವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ,
ಸೂಯಾನ್(15) ಹಾಗೂ ಪರ್ವೆಜ್(17) ಮೃತಪಟ್ಟ ಬಾಲಕರು. ಗ್ರಾಮದ ಹೊರವಲಯಲ್ಲಿರುವ ಇಟ್ಟಿಗೆ ಗೂಡಿನಲ್ಲಿ ಯಾರಿಗೂ ಕಾಣದಂತೆ ಸಿಗರೇಟ್ ಸೇದಲು ಹೋಗಿದ್ದು, ಇಟ್ಟಿಗೆ ಗೂಡಿನೊಳಗೆ ಸಿಗರೇಟ್ ಸೇದುತ್ತಿದ್ದ ಸಂದರ್ಭದಲ್ಲಿ ಮಳೆಯಿಂದ ತೇವವಾಗಿದ್ದ ಉಳಿದ ಇಟ್ಟಿಗೆಗಳು ಬಾಲಕರ ಮೇಲೆ ಕುಸಿದು ಬಿದ್ದಿವೆ. ಪರಿಣಾಮ ಇಟ್ಟಿಗೆಗಳ ಮಧ್ಯೆ ಸಿಲುಕಿ ಉಸಿರು ಗಟ್ಟಿ ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಾಲಕರ ಚಿರಾಟ ಗಮನಿಸಿದ ಸ್ಥಳಿಯರು ಕೂಡಲೆ ಪೋಷಕರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಜೆಸಿಬಿ ಯಂತ್ರವನ್ನು ತಂದು ಬಾಲಕರನ್ನು ರಕ್ಷಿಸಲು ಯತ್ನಿಸಿದ್ದಾರೆ. ಇಟ್ಟಿಗೆಗೂಡಿನ ಮಧ್ಯದಲ್ಲಿ ಸಿಲುಕಿದ್ದ ಬಾಲಕರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಅಮೃತೂರು ಠಾಣೆಯ ಪಿಎಸ್‍ಐ ಮಂಜುನಾಥ್ ಭೇಡಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಕೂಲಿಕಾರ್ಮಿಕರ ಕೊರತೆಯಿಂದ ಇಟ್ಟಿಗೆಗೂಡಿನ ಕೆಲಸ ಸ್ಥಗಿತಗೊಂಡಿದ್ದು ಆ ಕಡೆ ಯಾರೂ ಸುಳಿಯುತ್ತಿರಲಿಲ್ಲ ಇದನ್ನೆ ಬಂಡವಾಳ ಮಾಡಿಕೊಂಡ ಗ್ರಾಮದ ಕೆಲ ಯುವಕರು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಗ್ರಾಮಸ್ಥರು
ದೂರಿದ್ದಾರೆ.