ತಿರುಪತಿ,ಅ.6- ಕೆಲವು ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ವಿಶ್ವ ಪ್ರಸಿದ್ದ ತಿರುಪತಿ ದೇವಾಲಯವನ್ನು ಮತ್ತೆ ತೆರೆದಿರುವುದರಿಂದ ಭಾರೀ ಪ್ರಮಾಣದ ಭಕ್ತರು ಆಗಮಿಸುತ್ತಿದ್ದು, ಇದರಿಂದ ತಿಮ್ಮಪ್ಪನ ಹುಂಡಿಯಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆಗಳು ಸಂಗ್ರಹವಾಗುತ್ತಿದೆ.
ವಿಶ್ವ ಪ್ರಸಿದ್ದ ತಿರುಪತಿ ಶ್ರೀ ವೆಂಕಟೇಶ್ವರನಿಗೆ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುತ್ತಾರೆ. ಅಕ್ಟೋಬರ್ 2ರಂದು ಗಾಂ ಜಯಂತಿಗೆ ರಜೆ ಇದ್ದ ಕಾರಣ ಅಸಂಖ್ಯಾತ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಆ ದಿನ ಸುಮಾರು 2.14 ಕೋಟಿ ರೂ.ಹುಂಡಿ ಹಣ ಸಂಗ್ರಹವಾಗಿದೆ.
ಒಂದೇ ದಿನ ಇಷ್ಟು ಮೊತ್ತದ ಹಣ ಸಂಗ್ರಹವಾಗಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ. ಕೊರೋನಾ ಮಹಾಮಾರಿ ಕಾಲಿಟ್ಟಾಗಿನಿಂದ ದೇಶದ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗಿತ್ತು.
ಮತ್ತೆ ಲಾಕ್‍ಡೌನ್ ಸಡಿಲಿಕೆಯಲ್ಲಿ ಜೂನ್ 11ರಂದು ತಿರುಪತಿ ದೇವಾಲಯವನ್ನು ತೆರೆಯಲಾಗಿತ್ತು. ಅದೂ ಸಹ ಇಂತಿಷ್ಟು ಭಕ್ತರು ಬರಬೇಕೆಂಬ ನಿರ್ಬಂಧದ ಮೇಲೆ. ಹಾಗಾಗಿ ನಿರ್ಬಂಧಗಳ ಅನ್ವಯ ಇತಿ-ಮಿತಿಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸ ತೊಡಗಿದ್ದರು. ಅ.28ರಂದು ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ, ನಾಮಪತ್ರ ಸಲ್ಲಿಸಲು ಅ.8 ಕೊನೆಯ ದಿನವಾಗಿದೆ.
ಸೆಪ್ಟೆಂಬರ್ 6ರಂದು ಸುಮಾರು 13,486 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಲಾಕ್ಡೌನ್ ಬಳಿಕ ಮೊದಲ ಬಾರಿಗೆ ದೇವಾಲಯದ ಆದಾಯ 1 ಕೋಟಿ ರೂ.ಗೂ ಮೀರಿತ್ತು. ದಿನ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೇವಾಲಯದ ಆದಾಯವೂ ಹೆಚ್ಚಾಗುತ್ತಿದೆ.
ಇನ್ನು, ಅಕ್ಟೋಬರ್ 2 ಗಾಂೀ ಜಯಂತಿಯಂದು ಸುಮಾರು 20,228 ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಮರುದಿನ ಅಂದರೆ ಅ.3ರಂದು ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಸುಮಾರಿ 2.14 ಕೋಟಿ ರೂ. ಸಂಗ್ರಹವಾಗಿದೆ.
ತಿರುಪತಿ ಶ್ರೀ ವೆಂಕಟೇಶ್ವರನ ದೇವಾಲಯ ದಲ್ಲಿ ಅ.16ರಿಂದ 24ರ ತನಕ ಬ್ರಹ್ಮೋತ್ಸವ ನಡೆಯಲಿದೆ. ಈ ವೇಳೆ ಹೆಚ್ಚಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಹೀಗಾಗಿ ಹೆಚ್ಚಿನ ಆದಾಯದ ನಿರೀಕ್ಷೆ ಇದೆ.
Laxmi News 24×7