Breaking News

ಬೆಳಗಾವಿಯ ನಾಗಸುಧಾ ಸಂಗೀತ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Spread the love

ಬೆಳಗಾವಿ: ಸಂಗೀತ ಮನಃಶಾಂತಿ ನೀಡುವ ಜಗತ್ತಿನ ಏಕೈಕ ಶಾಶ್ವತ ಕಲಾ ಮಾಧ್ಯಮವಾಗಿದೆ. ಇದಕ್ಕೆ ಎಂದಿಗೂ ಸಾವಿಲ್ಲ. ಆದರೆ ಇಂದು ಎಐ ಪ್ರವೇಶದಿಂದ ಈ ಕ್ಷೇತ್ರಕ್ಕೂ ಭಯ ಆವರಿಸಿಕೊಂಡಿದ್ದು, ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ ಎಂದು ಲೇಖಕಿ ಆಶಾ ಯಮಕನಮರಡಿ ಹೇಳಿದರು.
ಟಿಳಕವಾಡಿಯ ನಾದಸುಧಾ ಸುಗಮ ಸಂಗೀತ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶಭಕ್ತಿ ಗೀತೆ, ಭಕ್ತಿ ಗೀತೆ, ಭಾವಗೀತೆ ಮುಂತಾದ ಎಲ್ಲಾ ಪ್ರಕಾರದ ಗೀತೆಗಳನ್ನು ಮಕ್ಕಳಿಗೆ ಕಲಿಸಬೇಕಿದೆ. ಈ ಕ್ಷೇತ್ರದಲ್ಲೂ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆದರೆ ಎಷ್ಟೇ ಬದಲಾವಣೆಗಳಾದರೂ ಮೂಲ ಸಂಗೀತವನ್ನು ಉಳಿಸಿಕೊಂಡು ಹೋಗುವ ಕಾರ್ಯವಾಗಬೇಕು ಎಂದರು.
ಬಹುಭಾಷಾ ಸಂಗೀತ ಸಾಧಕಿ ಶ್ರೇಯಾ ಮನವಾಡಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್ ಎಂ.ಜಿ.ರಾವ್, ನಾದ ಸುಧಾ ಸಂಗೀತ ಶಾಲೆ ಸಂಸ್ಥಾಪಕ ಎಂ.ಎಸ್.ಸತ್ಯನಾರಾಯಣ, ಪೂರ್ಣಿಮಾ ಪತ್ತಾರ ಇತರರಿದ್ದರು.

Spread the love

About Laxminews 24x7

Check Also

ಏ.14ರ ಅಂಬೇಡ್ಕರ್ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ

Spread the loveಬೆಳಗಾವಿ: ಪ್ರತಿ ವರ್ಷದಂತೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆ ಅಂಬೇಡ್ಕರ್ ಉದ್ಯಾನವನದಲ್ಲಿ ಏಪ್ರಿಲ್ 14 ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ