Breaking News

Tag Archives: school

ಲ್ಲೊಂದು ಖಾಸಗಿ ಶಾಲೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಶಾಲೆಯ ತರಗತಿಗಳನ್ನು ಆರಂಬಿಸಿದೆ.

ಕೊಪ್ಪಳ: ಕೊರೊನಾ ಹಿನ್ನೆಲೆ ಶಾಲೆಗಳನ್ನು ಆರಂಭಿಸಬೇಕೆ, ಬೇಡವೇ ಎಂಬ ಗೊಂದಲದಲ್ಲಿ ಸರ್ಕಾರ ಇದ್ದರೆ, ಇಲ್ಲೊಂದು ಖಾಸಗಿ ಶಾಲೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಶಾಲೆಯ ತರಗತಿಗಳನ್ನು ಆರಂಬಿಸಿದೆ. ಇದರಿಂದಾಗಿ ಪೋಷಕರು ಭಯಭೀತರಾಗಿದ್ದು, ಮಕ್ಕಳಿಗೆ ಸೋಂಕು ತಗುಲಿದರೆ ಏನು ಗತಿ ಎಂಬ ಆತಂಕದಲ್ಲಿದ್ದಾರೆ. ಜಿಲ್ಲೆಯ ಗಂಗಾವತಿಯ ಸೇಂಟ್ ಫಾಲ್ಸ್ ಖಾಸಗಿ ಶಾಲೆಯಲ್ಲಿ ತರಗತಿಗಳನ್ನು ಆರಂಭಿಸಲಾಗಿದ್ದು, ಸರ್ಕಾರದ ನಿಯಮ ಉಲ್ಲಂಘಿಸಿ ಖಾಸಗಿ ಶಾಲೆಯನ್ನು ಆಡಳಿತ ಮಂಡಳಿ ತೆರೆದಿದೆ. ಅಲ್ಲದೆ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ …

Read More »

ಅಕ್ಟೋಬರ್ 15ರ ನಂತರ ದೇಶದಲ್ಲಿ ಶಾಲೆಗಳನ್ನು ತೆರೆಯಬಹುದು– ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

ನವದೆಹಲಿ: ಅನ್‌ಲಾಕ್‌ 5ರ ಮಾರ್ಗಸೂಚಿಯಲ್ಲಿ ಅಕ್ಟೋಬರ್ 15ರ ನಂತರ ದೇಶದಲ್ಲಿ ಶಾಲೆಗಳನ್ನು ತೆರೆಯಬಹುದು ಎಂದು ಕೇಂದ್ರ ಸರ್ಕಾರ ಆರು ದಿನಗಳ ಹಿಂದೆಯೇ ಹೇಳಿತ್ತು. ಈಗ ಗೃಹ ಸಚಿವಾಲಯ ಶಾಲೆಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪೋಷಕರ ಒಪ್ಪಿಗೆ ಮೇರೆಗೆ ಮಕ್ಕಳು ಶಾಲೆಗೆ ತೆರಳಬಹುದು. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಆನ್‍ಲೈನ್ ತರಗತಿಗಳನ್ನು ಆಯ್ಕೆಯಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ. ಮಾರ್ಗಸೂಚಿಯಲ್ಲಿ ಏನಿದೆ? ಶಾಲಾ ಕೊಠಡಿಗಳನ್ನು ನಿತ್ಯವೂ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಎಲ್ಲಾ ಸಂದರ್ಭಗಳಲ್ಲಿಯೂ …

Read More »

ಇನ್ನು ಎರಡು ತಿಂಗಳು ಶಾಲೆ ಆರಂಭಿಸೋದು ಬೇಡಾ:

ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಯಾವುದೇ ಧಾವಂತ ಇಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಶಾಲೆ ಆರಂಭಿಸುವ ವಿಚಾರವಾಗಿ ಎಲ್ಲ ಶಾಸಕರ ಜತೆ ಮಾತುಕತೆ ನಡೆಸುತ್ತೇವೆ. ಅದಾದ ಮೇಲಷ್ಟೆ ಶಾಲೆ ರೀ ಓಪನಿಂಗ್​ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದ್ರೆ ಸದ್ಯಕ್ಕೆ ಶಾಲೆ ಆರಂಭಿಸುವ ಬಗ್ಗೆ ಯಾವುದೇ ಶಾಸಕರೂ ಒಲವು ತೋರಿಲ್ಲ. ಸಂಸದರು, ಶಾಸಕರು, ಪರಿಷತ್ ಸದಸ್ಯರಿಗೂ ಪತ್ರ ಬರೆದಿದ್ದೇನೆ. ಶಾಲೆ ಆರಂಭದ ಬಗ್ಗೆ …

Read More »

ಸೆಪ್ಟೆಂಬರ್ ಅಂತ್ಯದವರೆಗೆ ಶಾಲಾ-ಕಾಲೇಜು ಪ್ರಾರಂಭ ಇಲ್ಲ…

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಾಲಾ-ಕಾಲೇಜುಗಳನ್ನು ತೆರೆಯದಿರಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ತಿಂಗಳಾಂತ್ಯದವರೆಗೆ ಯಥಾ ಸ್ಥಿತಿ ಮುಂದುವರಿಸಲು ಇಲಾಖೆ ತಿಳಿಸಿದೆ ಸೆಪ್ಟೆಂಬರ್ ಅಂತ್ಯದವರೆಗೆ ಶಾಲಾ-ಕಾಲೇಜು ಪ್ರಾರಂಭ ಮಾಡದಿರುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ. ತಿಂಗಳಾಂತ್ಯದವರೆಗೂ ಶಾಲಾ-ಕಾಲೇಜು ಆರಂಭಿಸದಂತೆ ಸರ್ಕಾರ ಸೂಚಿಸಿದೆ. ಸೂಕ್ತ …

Read More »

ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು: ಕೊರೊನಾ ಸ್ಫೋಟದ ಮಧ್ಯೆ, ರಾಜ್ಯದಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜೂನ್ 8ರಿಂದಲೇ ದಾಖಲಾತಿ ಪ್ರಕ್ರಿಯೆಗಳು ಶುರುವಾಗಲಿವೆ. ಮೊದಲು ರಾಜ್ಯದಲ್ಲಿ ಶಾಲೆ ಪ್ರಾರಂಭ ಮಾಡುವ ಸಂಬಂಧ ಜೂನ್ 10ರಿಂದ ಮೂರು ದಿನಗಳ ಕಾಲ ಎಲ್ಲ ಶಾಲೆಗಳಲ್ಲಿ ಪೋಷಕರ, ಎಸ್‍ಡಿಎಂಸಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಶಾಲೆಗಳ ಪ್ರಾರಂಭಕ್ಕೆ ಚಾಲನೆ ಕೊಟ್ಟಿರುವ ಸರ್ಕಾರ ಮೊದಲ ಹಂತವಾಗಿ ಶಾಲೆಗಳ ಕಚೇರಿ …

Read More »