Breaking News

ನುಡಿದಂತೆ ನಡೆದ ಕಾಂಗ್ರೆಸ್ ಬೆಂಬಲಿಸಿ

Spread the love

ಬಾಗಲಕೋಟೆ: ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳ ಮೂಲಕ ಜನ ಸಾಮಾನ್ಯರ ಬದುಕಿಗೆ ಆಸರೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಸಿಸುವAತೆ ಉಪ ಚುನಾವಣೆ ಅಭ್ಯರ್ಥಿ ಉಮೇಶ ಮೇಟಿ ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಆಲೂರ, ಆಲೂರ ಎಲ್‌ಟಿ ಗ್ರಾಮದಲ್ಲಿ ಗುರುವಾರ ಪ್ರಚಾರ ಸಭೆ ನಡೆಸಿದ ಅವರು, ಗ್ರಾಮೀಣ ಜನರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ನಮ್ಮ ತಂದೆ ದಿ.ಎಚ್.ವೈ.ಮೇಟಿ ಅವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆಲೂರ ಅಗಸಿಯಿಂದ ಮಾಸ್ತಿಹಾಳವರೆಗೆ ರಸ್ತೆ ನಿರ್ಮಾಣ, ಆಲೂರ ಎಲ್‌ಟಿ, ಸೀತಿಮನಿ, ಹಿರೇಗುಳಬಾಳ, ಮುತ್ತತ್ತಿ ಗ್ರಾಮದ ಹಿಂದುಳಿದ ವರ್ಗದವರ ಕಾಲೊನಿಗಳಲ್ಲಿ ಸಿಸಿ ರಸ್ತೆ, ಲವಳೇಶ್ವರ ತಾಂಡಾದಿAದ ಸಿದ್ದೇಶ್ವರ ಗುಡಿವರೆಗೆ ರಸ್ತೆ, ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಣ ಇತ್ಯಾದಿ ಕಾಮಗಾರಿಗಳನ್ನು ಗ್ರಾಮಸ್ಥರ ಬೇಡಿಕೆಯಂತೆ ಈಡೇರಿಸಲು ಶ್ರಮಿಸಿದ್ದಾರೆ. ಅವರ ನಿಧನದ ನಂತರ ಅವರ ಕನಸಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಪಕ್ಷದ ಮುಖಂಡರು ನನಗೆ ಆದೇಶಿಸಿದ್ದಾರೆ. ಹೀಗಾಗಿ ತಮ್ಮ ಆಶೀರ್ವಾದ ಬೇಕು ಎಂದು ಕೋರಿದರು.
ನಂತರ ಚಿಕ್ಕಗುಳಬಾಳ, ಹಿರೇಗುಳಬಾಳ, ಮುತ್ತತ್ತಿ, ಹಿರೇಗುಳಬಾಳ ಎಲ್‌ಟಿ, ಜಡ್ರಾಮಕುಂಟಿ, ಹೊದ್ಲೂರು, ಲವಳೇಶ್ವರ ಎಲ್‌ಟಿ, ಕಡ್ಲಿಮಟ್ಟಿ ಸ್ಟೇಷನ್ ಭಾಗದಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ಕೈಗೊಂಡು ಮತಯಾಚಿಸಿದರು. ವಿವಿಧ ಗ್ರಾಮಗಳ ಮುಖಂಡರ ಜೊತೆ ಸಭೆಗಳನ್ನು ನಡೆಸಿದರು.
ತಿಪ್ಪಣ್ಣ ಬೀಳಗಿ, ಯಮನಪ್ಪ ನಿಂಗಾಪುರ, ಸಂಗಪ್ಪ ಕುರಿ, ದ್ಯಾಮಣ್ಣ ತೇಜಿ, ಹಣಮಂತ ಮೋಸಗೇರಿ, ಬಲರಾಮ ನಾಯಕ, ಸಂತೋಷ ಲಮಾಣಿ, ರಮೇಶ ಕೇಸಪ್ಪ, ಅಡಿವೆಪ್ಪ ಸರೂರ, ಹೊದ್ಲೂರ ಪುಂಡಲೀಕ ಗೌಡರ, ಶಿವಪ್ಪ ನಡಗಡ್ಡಿ, ಭೀಮಪ್ಪ ಕಾಳಿ, ದಾವಲಸಾಬ್ ವಾಲೀಕಾರ, ಅರ್ಜುನ ಕರೆಹೊಳ್ಳಿ ಇತರರು ಇದ್ದರು.
ನಗರದಲ್ಲಿ ಬಿರುಸಿನ ಪ್ರಚಾರ
ಬಾಗಲಕೋಟೆ ನಗರದ ಕೌಲಪೇಟೆಯಲ್ಲಿ ಗುರುವಾರ ಬೆಳಗ್ಗೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹಾಗೂ ಪಕ್ಷದ ಮುಖಂಡರ ಜೊತೆ ಮತಯಾಚನೆ ನಡೆಸಿದರು.
ಬಡವರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ. ಎಚ್.ವೈ.ಮೇಟಿ ಅವರ ಪುತ್ರ ಉಮೇಶ ಮೇಟಿ ಅವರನ್ನು ಬಹುಮತದಿಂದ ಗೆಲ್ಲಿಸಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಸಚಿವ ತಿಮ್ಮಾಪುರ ವಿನಂತಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ, ಸಮಗ್ರ ಅಭಿವೃದ್ಧಿಯೊಂದಿಗೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಮ್ಮ ತಂದೆಯವರ ಕನಸು ಸಾಕಾರಗೊಳಿಸಲು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಪ್ರಕಾಶ ತಪಶೆಟ್ಟಿ, ಮಲ್ಲಿಕಾರ್ಜುನ ಚರಂತಿಮಠ, ಮಲ್ಲಿಕಾರ್ಜುನ ಮೇಟಿ, ನಾಗರಾಜ ಹದ್ಲಿ, ಸಂಜೀವ ವಾಡಕರ, ಸಂತೋಷ ಹೊಕ್ರಾಣಿ ಮತ್ತಿತರರು ಇದ್ದರು.

Spread the love

About Laxminews 24x7

Check Also

ಬಿಜೆಪಿಯಿಂದ ಗ್ರಾಮೀಣದಲ್ಲಿ ಭರ್ಜರಿ ಪ್ರಚಾರ

Spread the loveಬಾಗಲಕೋಟೆ: ಮತಕ್ಷೇತ್ರದ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರಿಂದ ಭರ್ಜರಿ ಪ್ರಚಾರ ಮಾಡಿ ಮತಯಾಚನೆ ಮಾಡಿದರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ