ಬಾಗಲಕೋಟೆ : ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗ ಪಡೆಯಲು ಯುಜಿಸಿ ನೆಟ್ ಪರೀಕ್ಷೆಯು ಮಹತ್ವದ ಹೆಜ್ಜೆಯಾಗಿದೆೆ. ಸರಿಯಾದ ಯೋಜನೆ ಮತ್ತು ಪರಿಶ್ರಮದಿಂದ ಉತ್ತೀರ್ಣರಾಗುವುದು ಸುಲಭ ಎಂದು ರಾಣಿಚನ್ನಮ್ಮ ವಿವಿಯ ಜೆ.ಆರ್.ಎಫ್. ರಿಸರ್ಚ್ ಸ್ಕಾಲರ್ ದಯಾನಂದ ಹುಡೇದ ಹೇಳಿದರು.
ನಗರದ ಬಿವಿವಿ ಸಂಘದ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಮ್.ಕಾಂ. ಪಿಜಿ ವಿಭಾಗ ಮತ್ತು ಕರೀಯರ್ ಗೈಡೆನ್ಸ್ ಪ್ಲೇಸಮೆಂಟ್ ಸೆಲ್ ವತಿಯಿಂದ ಹಮ್ಮಿಕೊಂಡಿದ್ದ ಯುಜಿಸಿ ನೆಟ್ ಮತ್ತು ಕೆ – ಸೆಟ್ ಸಕ್ಸಸ್ ಬ್ಲೂ-ಪ್ರಿಂಟ್ ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳದೆ ಸ್ವಂತ ವಿಚಾರಧಾರೆಗಳನ್ನು ರೂಪಿಸಿಕೊಂಡರೆ ಖುಷಿಯಾದ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾರ್ಥಿಯ ಜೀವನ ತುಂಬಾ ಮುಖ್ಯವಾಗಿದ್ದು ಸ್ಪಷ್ಟವಾದ ಗುರಿ, ದೃಢನಿಶ್ಚಯ ಇಟ್ಟುಕೊಂಡರೆ ಪ್ರಯತ್ನಗಳಿಗೆ ದಿಕ್ಕು ಸಿಗುತ್ತದೆ. ಎಲ್ಲರ ಸಲಹೆ ಪಡೆದುಕೊಂಡು ಆಲೋಚನೆಗಳೊಂದಿಗೆ ನವi್ಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದುರು.
ಓದಿನ ಜೊತೆಗೆ ಮರುಪಠಣ ಮಾಡುವುದರಿಂದ ದೃಢವಾಗಿ ನೆನಪಿಮಲ್ಲಿ ಇಟ್ಟುಕೊಳ್ಳಲು ಸಹಾಯಕವಾಗುತ್ತದೆ. ಸಮಯ ನಿರ್ವಹಣೆ ಬಹಳ ಮುಖ್ಯ ಪ್ರತಿದಿನವೂ ಒಂದು ನಿಶ್ಚಿತ ಸಮಯವನ್ನು ಓದಿಗೆ ಮೀಸಲಿಡಬೇಕು. ಆತ್ಮವಿಶ್ವಾಸ ಅಗತ್ಯವಾಗಿದ್ದು ಎಷ್ಟೇ ಅಡಚಣೆ ಬಂದರೂ ಹಿಂಜರಿಯದೆ ಗುರಿಯತ್ತ ಹೆಜ್ಜೆ ಹಾಕಿ ಎಂದರು.
ಪ್ರಾಚಾರ್ಯರಾದ ಡಾ. ಜಗನ್ನಾಥ ಚವಾಣ್ ಮಾತನಾಡಿ ವ್ಯಕ್ತಿಯ ರೂಪಕ್ಕಿಂತ ಅವರ ವ್ಯಕ್ತಿತ್ವ ದೊಡ್ಡದು. ವಿದ್ಯಾ ದೇವತೆಯು ಎಲ್ಲರಲ್ಲೂ ನೆಲಸಿದ್ದು ಅದನ್ನು ಅರ್ಥೈಸಿಕೊಂಡು ಅಧ್ಯಯನದಲ್ಲಿ ತೊಡಗಬೇಕು. ವಿದ್ಯಾರ್ಥಿ ಜೀವನ ಕಲಿಕೆಯ ಪ್ರಮುಖ ಘಟ್ಟವಾಗಿದ್ದು ಹಿಂಜರಿಯದೇ ಕೇಳಿ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿಜಿ ವಿಭಾಗದ ಮುಖ್ಯಸ್ಥರಾದ ಕೆ. ಜೆ. ಮಾಳಜಿ, ಐಕ್ಯೂಎಸಿ ಸಂಯೋಜಕರಾದ ಜಿ.ಎಮ್. ನಾವದಗಿ, ಆರ್. ಎಮ್. ತ್ಯಾಪಿ, ಎಮ್.ಎಮ್. ಶಿವಂಗಿ, ಎಸ್.ಎಸ್. ಚಬ್ಬಿ, ಟಿ.ಪಿ. ದರ್ಬಾರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7