ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗಣಿ ಸ್ಫೋಟದಲ್ಲಿ 12 ಜನ ಅಮಾಯಕ ಜೀವಗಳ ಬಲಿ ಪಡೆದ ಆರೋಪಿಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದಿರಿ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
: ಹೌದು ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗಣಿಪ್ರದೇಶಗಳಲ್ಲಿ ಜಿಲೆಟಿನ್ ಸ್ಫೋಟ ವಿಚಾರದ ಕುರಿತು ಗುರುವಾರ ವಿಧಾನಸಭೆ ಕಲಾಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಘಟನೆಯಲ್ಲಿ 12 ಜನ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. ಶಿವಮೊಗ್ಗ ದುರಂತದಲ್ಲಿ ಇನ್ನು ಸತ್ತವರಿದ್ದಾರೆ, ಅವರನ್ನು ಹುಡುಕಿ ಅಂತಾ ಹೇಳಿದ್ದೆ, ಆದ್ರೆ ಸರ್ಕಾರದಿಂದ ಇವತ್ತಿನವರೆಗೂ ಉತ್ತರ ಬಂದಿಲ್ಲ. ಒಂದು ತಿಂಗಳ ಕೂಡ ಆಗಿರಲಿಲ್ಲ, ಎರಡು ಭಯಾನಕ ಘಟನೆಗಳು ಸಂಭವಿಸಿದೆ. ಆದ್ರೆ ಸರ್ಕಾರ ಏನು ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಇನ್ನು ನಾನು ಒತ್ತಾಯ ಮಾಡಿದ್ದಕ್ಕೆ ಚಿಕ್ಕಬಳ್ಳಾಪುರದಲ್ಲಿ ನಡೆದ ಗಣಿ ಸ್ಫೋಟ ಕೇಸ್‍ಗೆ ಸಂಬಂಧಪಟ್ಟಂತೆ ಬಿಜೆಪಿಯ ನಾಗರಾಜ್ ಸೇರಿ ಐವರನ್ನು ಬಂಧಿಸಿದ್ದಾರೆ. ಇಬ್ಬರು ಅಧಿಕಾರಿಗಳನ್ನು ಮಾತ್ರ ಸಸ್ಪೆಂಡ್ ಮಾಡಿದ್ದಾರೆ. ಆದ್ರೆ ನಿಯಮ ಉಲ್ಲಂಘಿಸಿದ ಇನ್ನುಳಿದ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಎರಡು ಘಟನೆಗಳಲ್ಲಿಯೂ ಕ್ರಮ ಕೈಗೊಂಡಿಲ್ಲ. ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.