ಶರಣು ಸಲಗರ ಪತ್ನಿ ಬಗ್ಗೆ ಮಾತಾಡಿದ್ದಕ್ಕೆ ಶಿವಲಿಂಗೇಗೌಡ ವಿಷಾದ: ಇತ್ತ ಶಾಸಕರ ಅಮಾನತಿಗೆ JDS ಆಗ್ರಹ

Spread the love

ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಮಂಡಿಸಿದ ನಿರ್ಣಯ ಪರ ವಿಧಾನ ಸಭೆಯಲ್ಲಿ ಮಾತನಾಡಲು ಮುಂದಾದಾಗ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಿಗ್ಗಾಮುಗ್ಗಾ ಬೈದಿದ್ದರು. ಈ ವಿಚಾರವಾಗಿ ಆಕ್ರೋಶ ಕೇಳಿಬಂದ ಹಿನ್ನೆಲೆ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ನಾನು ಸಲಗರ, ವೇದವ್ಯಾಸ​ ಕಾಮತ್ ಬಗ್ಗೆ ಮಾತ್ರ ಮಾತಾಡಿದ್ದು. ತಹಶೀಲ್ದಾರ್ ಆಗಿರುವ ಪತ್ನಿಯಿಂದಲೇ​ ಶಾಸಕ ಶರಣು ಸಲಗರ ಎಂಎಲ್ಎ ಆಗಿದ್ದಾರೆಂದು ನಮ್ಮ ಕಡೆಯವ್ರು ಹೇಳಿದ್ರು. ಹೆಣ್ಮಗು ವಿಚಾರವಾಗಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹೆಣ್ಣುಮಕ್ಕಳ ಬಗ್ಗೆ ಯಾವತ್ತೂ ನಾನು ಮಾತನಾಡಿಲ್ಲ ಎಂದಿದ್ದಾರೆ.

ನನ್ನನ್ನು ಟಾರ್ಗೆಟ್‌ ಮಾಡಿ‌ ಮಾತಾಡಿದ್ದು ಯಾಕೆ? ಅಧಿವೇಶನದಲ್ಲಿ ಬಿಜೆಪಿ ಶಾಸಕರು ಥೈ ತಕ ಅಂತಾ ಕುಣಿದಿದ್ದರು. ಅವರ ಆಡಿಯೋ ಹೋಗಲ್ಲ ಅಂತಾ ಬಾಯಿಗೆ ಬಂದಂತೆ ಕೂಗಿದ್ರು. ಕೊಬ್ಬರಿ ಕಳ್ಳ ಅಂದ್ರು, ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಕೊಟ್ಟೆ. ನಿಮ್ಮಪ್ಪನಿಗೆ ಕೊಟ್ಟಿದ್ದೀನಿ ತೆಗೆದುಕೊ ಅಂತಾ ಹೇಳಿದ್ದೆ. ಬಿಜೆಪಿಯವರಿಗೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾಕೇ ಬೇಕು? ಶಿವಲಿಂಗೇಗೌಡನನ್ನ ಕಳ್ಳ ಎಂದು ಪ್ರಚೋದಿಸಿದ್ದಕ್ಕೆ ಮಾತನಾಡಿದ್ದು. ನನ್ನನ್ನ ಕಳ್ಳ ಅಂದ್ರೆ ದೇವರೇ, ಬುದ್ಧಿ, ಗುರುಗಳೇ ಅಂತಾ ಹೇಳ್ಬೇಕಿತ್ತಾ? ಎಂದವರು ಪ್ರಶ್ನಿಸಿದ್ದಾರೆ. ನಾನು ಆರ್​ಎಸ್​ಎಸ್​ ಬಗ್ಗೆ ಮಾತಾಡಿಲ್ಲ, ಅದರ ಬಗ್ಗೆ ಗೌರವ ಇದೆ. RSSನವನಾಗಿ ಯಾಕೆ ಕುಣಿತಿದೆಯಾ ಅಂತಾ ಕಾಮತ್​ಗೆ ಕೇಳಿದ್ದೆ ಎಂದಿದ್ದಾರೆ.

ಮತ್ತೊಂದೆಡೆ ಶಾಸಕ ಶಿವಲಿಂಗೇಗೌಡ ವಿರುದ್ಧ ಜೆಡಿಎಸ್​​ ಕಿಡಿ ಕಾರಿದ್ದು, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೇ ? ಪ್ರತಿಪಕ್ಷಗಳ ಶಾಸಕರನ್ನು ಅವಾಚ್ಯವಾಗಿ, ಕೆಟ್ಟ ಭಾಷೆಯಲ್ಲಿ ಬೈದು ಅಂಸವಿಧಾನಿಕವಾಗಿ ನಿಂದಿಸಿ, ಸಭಾಧ್ಯಕ್ಷರ ಎದುರೇ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದು ಅಕ್ಷಮ್ಯ ಅಪರಾಧ. ಓರ್ವ ಜನಪ್ರತಿನಿಧಿಯಾಗಿ ಸಂಸದೀಯ ಮೌಲ್ಯಗಳಿಗೆ ಅಪಚಾರ ಎಸಗಿರುವ ಹಾಗೂ ಸದನದ ಘನತೆಗೆ ಧಕ್ಕೆ ತಂದಿರುವ ಶಿವಲಿಂಗೇಗೌಡರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು. ಮುಂದಿನ ಎಲ್ಲಾ ಸದನದಿಂದ ಅಮಾನತುಗೊಳಿಸಿ, ಸದನದ ಕಾರ್ಯ ಕಲಾಪಗಳಿಂದ ದೂರವಿಡಬೇಕು ಎಂದು ಸ್ಪೀಕರ್​​ ಖಾದರ್​​ ಅವರನ್ನು ಜೆಡಿಎಸ್​​ ಆಗ್ರಹಿಸಿದೆ.


Spread the love

About Laxminews 24x7

Check Also

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆ..!!

Spread the loveಉದ್ಯಮಿ ಸಿಜೆ ರಾಯ್ ಆತ್ಮ**ತ್ಯೆ ಪ್ರಕರಣ, ತನಿಖೆಯಲ್ಲಿ ನಟಿಯೊಬ್ಬರು ಹನಿಟ್ರ್ಯಾಪ್ ಮಾಡಿರೋದು ಪತ್ತೆಯಾಗಿದೆ. ಉದ್ಯಮಿ ಬಳಿಯಿಂದ ಹಣಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ