Breaking News

ಶಿವಾಜಿ ಮಹಾರಾಜರು ದಾರ್ಶನಿಕ ನಾಯಕ : ಪ್ರಧಾನಿ ಮೋದಿ

Spread the love

ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರು ದಾರ್ಶನಿಕ ನಾಯಕ, ಅಸಾಧಾರಣ ಆಡಳಿತಗಾರ ಮತ್ತು ಕಾರ್ಯತಂತ್ರದ ಚಿಂತಕ,ಅವರ ಧೈರ್ಯ ಮತ್ತು ಆಡಳಿತ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಜನ ದಿನ ಹಿನ್ನಲೆಯಲ್ಲಿ ಮೋದಿ ಅವರು ಸರಣೆ ಮಾಡಿ ವಂದಿಸಿದ್ದಾರೆ.

ಫೆ 19, 1630 ರಂದು ಜನಿಸಿದ ಅವರು 17 ನೇ ಶತಮಾನದಲ್ಲಿ ಮತ್ತೆ ಹಿಂದೂ ಸಾಮ್ರಾಜ ್ಯ ಸ್ಥಾಪಿಸಿದರು.ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು, ನಾವು ದಾರ್ಶನಿಕ ನಾಯಕ, ಅಸಾಧಾರಣ ಆಡಳಿತಗಾರ, ಕಾರ್ಯತಂತ್ರದ ಚಿಂತಕ ಮತ್ತು ಸ್ವರಾಜ್ಯದ ಪ್ರತಿಪಾದಕರಿಗೆ ಗೌರವ ಸಲ್ಲಿಸುತ್ತೇವೆ. ಅವರ ಧೈರ್ಯ ನಮಗೆ ಸ್ಫೂರ್ತಿ ನೀಡಲಿ, ಅವರ ಆಡಳಿತವು ನಮಗೆ ಮಾರ್ಗದರ್ಶನ ನೀಡಲಿ ಮತ್ತು ಅವರ ನ್ಯಾಯ ಮತ್ತು ಸ್ವಾಭಿಮಾನದ ಮನೋಭಾವವು ನಮ್ಮ ಸಮಾಜವನ್ನು ಬಲಪಡಿಸಲಿ ಎಂದು ಮೋದಿ ಎಕ್‌್ಸನಲ್ಲಿ ಬರೆದಿದ್ದಾರೆ.

ಶಿವಾಜಿ ಮಹಾರಾಜರು ಯಾವಾಗಲೂ ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣವನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸಿದ್ದಾರೆ ಮತ್ತು ಅವರ ರಕ್ಷಣೆಗೆ ತಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು.ಈ ಬದ್ಧತೆಯೇ ಅವರ ಜೀವನವು ತಲೆಮಾರುಗಳಾದ್ಯಂತ ಭಾರತಕ್ಕೆ ದಾರಿದೀಪವಾಗಿ ಉಳಿದಿದೆ ಎಂದು ಅವರು ಹೇಳಿದರು.

ಮೊಘಲ್‌ ರಾಜವಂಶದ ಕಿರುಕುಳದ ವಿರುದ್ದ ಹೋರಾಡಿದ್ದರು ಮತ್ತು ಅವರ ರಾಜ್ಯದ ಭದ್ರತೆಯು ಧಾರ್ಮಿಕ ಸಹಿಷ್ಣುತೆ ಮತ್ತು ವಿವಿಧ ಸಮುದಾಯಗಳ ಕ್ರಿಯಾತಕ ಏಕೀಕರಣವನ್ನು ಆಧರಿಸಿತ್ತು ಎಂದು ಮೋದಿ ಬಣ್ಣಿಸಿದ್ದಾರೆ.

ನವದೆಹಲಿ, ಫೆ.19- ಛತ್ರಪತಿ ಶಿವಾಜಿ ಮಹಾರಾಜರು ದಾರ್ಶನಿಕ ನಾಯಕ, ಅಸಾಧಾರಣ ಆಡಳಿತಗಾರ ಮತ್ತು ಕಾರ್ಯತಂತ್ರದ ಚಿಂತಕ,ಅವರ ಧೈರ್ಯ ಮತ್ತು ಆಡಳಿತ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಜನ ದಿನ ಹಿನ್ನಲೆಯಲ್ಲಿ ಮೋದಿ ಅವರು ಸರಣೆ ಮಾಡಿ ವಂದಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದ 9 ರಸ್ತೆಗಳು NHAI ಉಸ್ತುವಾರಿಗೆ

Spread the love ನವದೆಹಲಿ: ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆಯಿಂದ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ