ರಾಮದುರ್ಗ: ಹೆತ್ತವರು, ಗುರುಗಳು ಹಾಗೂ ಕಲಿತ ಶಾಲೆಯ ಋಣ ತೀರಿಸಲು ಮಕ್ಕಳು ಕಂಕಣಬದ್ಧರಾಗಬೇಕು ಎಂದು ನಿವೃತ್ತ ಡಿಡಿಪಿಐ ಎಂ.ಜಿ.ದಾಸರ ಹೇಳಿದರು.
ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಅಲ್ಲಿಂದಲೇ ಸಂಸ್ಕೃತಿ ಆರಂಭವಾವುದು ಬಹುಮುಖ್ಯವಾಗಿದೆ ಎಂದರು.
ವಿಪ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಮಕ್ಕಳು ಟಿವಿ, ಮೊಬೈಲ್ ಗೀಳಿಗೆ ಅಂಟಿಕೊಳ್ಳದೆ ಅಧ್ಯಯನಕ್ಕೆ ಸಮಯ ಮೀಸಲಿಟ್ಟು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಸ್ಥಳೀಯ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ಮುಖಂಡ ಪ್ರದೀಪ ಪಟ್ಟಣ, ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ನಾಯಿಕ, ಉಪಾಧ್ಯಕ್ಷೆ ಐಶ್ವರ್ಯ ಹುಚ್ಚನ್ನವರ, ಪಿಡಿಒ ಪರಸಪ್ಪ ದೇಮಣ್ನವರ, ಶಿಕ್ಷಣ ಸಂಯೋಜಕ ಎನ್.ಡಿ.ರಾಮದುರ್ಗ, ಬಿಆರ್ಪಿ ಜಗದೀಶ ಲಮಾಣಿ, ಸಿಆರ್ಪಿ ಪಿ.ಎಲ್.ನಾಯಿಕ ಇತರರಿದ್ದರು. ಪ್ರಭಾರ ಮುಖ್ಯಶಿಕ್ಷಕ ಪಿ.ಟಿ.ತೋಳಮಟ್ಟಿ ಸ್ವಾಗತಿಸಿದರು. ಶೈಲಾ ಕೊಕ್ಕರಿ ನಿರೂಪಿಸಿದರು. ಬಿ.ಬಿ.ಒಡೆಯರ ವಂದಿಸಿದರು.
Laxmi News 24×7