Breaking News

ಭರಮಾಪುರಕ್ಕೆ ಬೆಳಕು ನೀಡಿದ ಶಾಸಕ ಸತೀಶ್ ಜಾರಕಿಹೊಳಿ

Spread the love

 

 

ಹುಕ್ಕೇರಿ: ಕಳೆದ ಎಂಟು ವರ್ಷಗಳ ಸತತ ಪ್ರಯತ್ನದಿಂದ ಇಂದು ಭರಮಾಪುರ ಗ್ರಾಮಕ್ಕೆ ವಿದ್ಯುತ್‌ ಸೌಲಭ್ಯ ದೊರಕಿದ್ದು ಸಂತಸ ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

 

ತಾಲೂಕಿನ ಭರಮಾಪುರ ಗ್ರಾಮದಲ್ಲಿ ರಾಜೀವ ಗಾಂಧಿ ಗ್ರಾಮೀಣ ವಿದ್ಯುತೀಕರಣ ಮತ್ತು ಬೆಳಕು ಯೋಜನೆಯಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಕೆಲವರಿಗೆ ವಿದ್ಯುತ್‌ ದೊರಕಿದ್ದು, ಇನ್ನೂ ಕೆಲ ಮನೆಗಳಿಗೆ ವಿದ್ಯುತ್‌ ಸೌಲಭ್ಯ ಶೀಘ್ರ ಕಲ್ಪಿಸಲಾಗುವುದು ಎಂದು ತಿಳಿಸಿದರು.

 

ಭರಮಾಪುರ ಗ್ರಾಮದಲ್ಲಿ ರಸ್ತೆಗಳು, ಶಾಲಾ ಕಟ್ಟಡಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜತೆಗೆ ಇನ್ನು ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಶೀಘ್ರ ಪರಿಹರಿಸಲಾಗುವುದು ಎಂದರು.

 

ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಸಾಕಷ್ಟು ಯೋಜನೆಗಳು ಇವೆ. ಹೀಗಾಗಿ ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕೆಂದು ಸಲಹೆ ನೀಡಿದ ಅವರು, ಭರಮಾಪುರ ಗ್ರಾಮಕ್ಕೆ ಮನೆಗಳು ಮಂಜೂರು ಆಗಿದ್ದು, ಶೀಘ್ರ ಮನೆಗಳಿಲ್ಲದ ಫಲಾನುಭವಿಗಳಿಗೆ ಮನೆಗಳನ್ನು ಹಂಚಲಾಗುವುದು ಎಂದು ಹೇಳಿದರು.

 

ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ಈ ಮೂಲಕ ಹಿಂದುಳಿದಿರುವ ಪ್ರದೇಶಗಳಲ್ಲಿ ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸಬೇಕು. ಅಂದಾಗ ಮಾತ್ರ ಸರ್ವರೂ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಎಂ.ಜೆ. ಕೆಬಲಾಪುರಿ, ಪಾಂಡು ಮನ್ನಿಕೇರಿ, ಜಂಗಲಿ ಸರ್, ರಾಜೇಂದ್ರ ದೆಸಾಯಿ, ಬಸವಣ್ಣಿ ಭೀ. ಬಿಜನಾಯಿಕ, ಬಸು ಪುಜಾರಿ, ಬಾಬು ಕೊಡಗನ್ನವರ, ಲಗಮಣ್ಣಾ ಗುರವ, ಮಲ್ಲಪ್ಪ ಸ. ನಾಯಿಕ, ಲಗಮಣ್ಣಾ ಪಣಗುಧಿ, ಬಸು ಡುಮ್ಮನಾಯಿಕ, ನಿಂಗಪ್ಪ ಬಂಜಿರಾಮ, ಬಸನಾಯ್ಕ ಕುಂದರಗಿ, ಮಲ್ಲಪ್ಪಾ ಹಂಜಿನಮನಿ, ಮುರಳಿ ಬಡಿಗೇರ, ಪ್ರವೀಣ ಗುಡ್ಡಕಾಯಿ, ಯಲ್ಲಪಾಪ ಕಾರನ್ನವರ, ಲಗಮಣ್ಣಾ ಕೋಜರಿ, ಈರಪ್ಪಾ ಬಂಜಿರಾಮ ಸೇರಿದಂತೆ ಇತರರು ಇದ್ದರು.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ