Breaking News

“ಸಹಕಾರಂ ಬಾಳ್ಗೆ ಸಹಕಾರಂ ಗೆಲ್ಗೆ”

Spread the love

ರಾಮದುರ್ಗ ಪಟ್ಟಣದಲ್ಲಿ ನಡೆದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಳಗಾವಿ,ರಾಮದುರ್ಗ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆಯನ್ನು ಉದ್ಘಾಟಿಸಿ,ಸತ್ಕಾರ ಸ್ವೀಕರಿಸಿ ಮಾತನಾಡಲಾಯಿತು.ಇದಕ್ಕೂ ಮೊದಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ,ಗೌರವ ನಮನ ಸಲ್ಲಿಸಲಾಯಿತು.

ಡಿ.ಸಿ.ಸಿ.ಬ್ಯಾಂಕ್ ಮತ್ತು ತಮ್ಮ ಸಹಕಾರಿ ಸಂಘಗಳ ನಡುವೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ,ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಂಘಗಳ ನಡುವಿನ ಪರಸ್ಪರ ಸಹಕಾರ,ಪಾರದರ್ಶಕತೆ ಮತ್ತು ಪರಿಣಾಮಕಾರಿ ಆಡಳಿತ ಅಗತ್ಯವಾಗಿದ್ದು,ಸದಸ್ಯರಿಗೆ ಮತ್ತು ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ಮತ್ತು ಸಂಘದ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವುದುರ ಕುರಿತು ಚರ್ಚಿಸಲಾಯಿತು.

ಈ ಸಭೆಯಲ್ಲಿ ಈ ಸಂದರ್ಭದಲ್ಲಿ ಶಾಸಕರಾದ  ಬಾಲಚಂದ್ರ ಜಾರಕಿಹೊಳಿ,ಕೆ.ಕೆ.ಎಂ. ಪಿ.ಉಪಾಧ್ಯಕ್ಷರಾದ  ಪಿ.ಎಂ.ಜಗತಾಪ, ರಮೇಶ ಅಣ್ಣಿಗೇರಿ, ಗುರುನಾಥ ಹೂಗಾರ, ಬಿ.ಎಸ್.ಬೆಳವಂಕಿ, ಬಸವರಾಜ ಹಿರೆರೆಡ್ಡಿ, ಗೋಪಾಲ ಸಂಶಿ, ಪರತಗೌಡ ಪಾಟೀಲ,ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ನಿರ್ದೇಶಕರು,ಸ್ಥಳೀಯ ಮುಖಂಡರು, ಪಿ.ಕೆ. ಪಿ.ಎಸ್.ಸದಸ್ಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಜಯಂತಿ; ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Spread the loveದೇಶದ ಮಾಜಿ ಉಪಪ್ರಧಾನಿ ಹಾಗೂ ಶೋಷಿತರ ಧ್ವನಿಯಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನವನ್ನು ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ