ನಾಳೆಯಿಂದ SSLC ಪರೀಕ್ಷೆ ಆರಂಭ
ನಾಳೆಯಿಂದದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ನಾಳೆಯಿಂದ ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಮಾರ್ಚ್ 28 ಕ್ಕೆ ಪ್ರಥಮ ಭಾಷೆ, ಮಾರ್ಚ್ 30ಕ್ಕೆ ದ್ವಿತೀಯ ಭಾಷೆ, ಏಪ್ರಿಲ್ 4ರಂದು ಗಣಿತ, 6ಕ್ಕೆ ಸಮಾಜ ವಿಜ್ಞಾನ, 8ಕ್ಕೆ ತೃತೀಯ ಭಾಷೆ ಮತ್ತು 11 ರಂದು ವಿಜ್ಞಾನ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯುವ ಮಕ್ಕಳಿಗೆ ಮಾಸ್ಕ್ ಕಡ್ಡಾಯವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಶಿವಾಜಿ ಜಯಂತಿ.. ಕಟೌಟ್ನಲ್ಲಿ ಸಿದ್ದರಾಮಯ್ಯ ಭಾವಚಿತ್ರ
ಛತ್ರಪತಿ ಶಿವಾಜಿ ಜಯಂತಿಯ ಶೋಭಾಯಾತ್ರೆ ಸ್ವಾಗತ ಕೋರುವ ಕಟೌಟ್ಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾವಚಿತ್ರ ಇರುವುದು ಕಂಡು ಬಂದಿದೆ. ಒಂದೇ ಧರ್ಮ, ಒಂದೇ ತತ್ವ, ಅದುವೇ ಹಿಂದೂತ್ವ ಎನ್ನುವ ಅಡಿಬರಹದ ಬ್ಯಾನರ್ನಲ್ಲಿ ಸಿದ್ದು ಭಾವಚಿತ್ರ ರಾರಾಜಿಸುತ್ತಿದೆ. ಪ್ರಮೋದ್ ಮುತಾಲಿಕ್ ಹಾಗೂ ಸಿದ್ದರಾಮಯ್ಯ ಇಬ್ಬರ ಭಾವಚಿತ್ರ ಇರುವುದು ಕಂಡುಬಂದಿದೆ. ಗುಳೇದಗುಡ್ಡದಲ್ಲಿ ಛತ್ರಪತಿ ಶಿವಾಜಿ ಜಯಂತಿ ಹಾಗೂ ಅದ್ದೂರಿ ಶೋಭಾಯಾತ್ರೆಯಲ್ಲಿ ಭಾವಚಿತ್ರ ಕಣಿಸಿದೆ.
RRR ಸಿನಿಮಾಕ್ಕೆ ಅಡ್ಡಿ.. ಗಾಜು ಪುಡಿ ಪುಡಿ
RRR ಸಿನಿಮಾಗೆ ತಾಂತ್ರಿಕ ಸಮಸ್ಯೆಯಾದ ಕಾರಣ ಥಿಯೇಟರ್ ಪಿಓಪಿ ಶೀಟ್ ಪುಡಿಪುಡಿ ಮಾಡಿ ಅಭಿಮಾನಿಗಳು ದಾಂದಲೆ ಎಬ್ಬಿಸಿದ್ದಾರೆ. ದಾವಣಗೆರೆಯ ಜಗಳೂರು ಪಟ್ಟಣದ ಭಾರತ್ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ. ಸಿನಿಮಾ ಸರಿಯಾಗಿ ಸೌಂಡ್ ಇಲ್ಲದೆ ಸ್ಟ್ರಕ್ ಆಗುತ್ತಿತ್ತು. ತಾಂತ್ರಿಕ ದೋಷದಿಂದ ಸಿನಿಮಾ ಕಟ್ ಆಗುತ್ತಿತ್ತು. ಇದರಿಂದ ರೊಚ್ಚಿಗೆದ್ದ ಜನರಿಂದ ಥಿಯೇಟರ್ ಪಿಓಪಿ ಸೀಟ್ ಪುಡಿ ಪುಡಿ ಮಾಡಿದ್ದಾರೆ. ಕೊನೆಗೆ ಅಭಿಮಾನಿಗಳ ಕ್ಷಮೆ ಕೇಳಿ ಸಿನಿಮಾ ಮಂದಿರದ ಮಾಲೀಕರು ಹಣ ಹಿಂದಿರುಗಿಸಿದ್ದಾರೆ.