Breaking News

ಅನೈತಿಕ ಸಂಬಂಧ ವಿರೋಧ ಹಿನ್ನಲೆ ವಿಷ ಸೇವಿಸಿ, ಅಪ್ರಾಪ್ತೆ ಸಾವು ಯುವಕನ ಸ್ಥಿತಿ ಚಿಂತಾಜನಕ

Spread the love

ರಾಯಚೂರು : ರಾಯಚೂರಿನ ಲಿಂಗಸುಗೂರು ತಾಲೂಕಿನ ಪೈದೊಡ್ಡಿಯಲ್ಲಿ ಅನೈತಿಕ ಸಂಬಂಧಕ್ಕೆ ವಿರೋಧ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ್ದು,ಅಪ್ರಾಪ್ತೆ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ,ಯುವಕನ ಸ್ಥಿತಿ ಗಂಭೀರವಾಗಿದೆ. 17 ವರ್ಷದ ಅಪ್ರಾಪ್ತೆ ವಿಷಸೇವನೆಯಿಂದ ಸಾವನ್ನಪ್ಪಿದ್ದಾಳೆ.ಯರಜಂತಿ ಗ್ರಾಮದ ನರಸಪ್ಪನ ಸ್ಥಿತಿ ಗಂಭೀರವಾಗಿದೆ.ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ನರಸಪ್ಪನಿಗೆ ಮದುವೆಯಾಗಿ ಎರಡು ಮಕ್ಕಳಿವೆ.

ಅಪ್ರಾಪ್ತೆಯೊಂದಿಗಿನ ಪ್ರೇಮ‌ ಸಂಬಂಧಕ್ಕೆ ಮನೆಯಲ್ಲಿ ವಿರೋಧ ಹಿನ್ನಲೆ ವಿಷ ಸೇವನೆ ಮಾಡಿದ್ದಾರೆ.  ಈ ಹಿಂದೆ ಅಪ್ರಾಪ್ತೆಯನ್ನ ಯುವಕನಿಂದ ದೂರ ಮಾಡಿ ಬಾಲಮಂದಿರದಲ್ಲಿ ಇರಿಸಲಾಗಿತ್ತು. ಆದ್ರೆ ಬಾಲಮಂದಿರದಿಂದ ಹೊರಬಂದ ಅಪ್ರಾಪ್ತೆ ಯುವಕನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ.

ನಮ್ಮ ಎಟಿಎಂನಲ್ಲಿರುವ ಹಣ, ಉಂಗುರ ನನ್ನ ಮಕ್ಕಳಿಗೆ ಕೊಡಿ. ಮುಂದಿನ ಜನ್ಮದಲ್ಲಿ ನಾವಿಬ್ಬರು ಗಂಡ ಹೆಂಡತಿಯಾಗುತ್ತೇವೆ ಎಂದು ಚೀಟಿ ಬರೆದು ವಿಷ ಸೇವನೆ ಮಾಡಿದ್ದಾರೆ. ಕೈ ಮೇಲೆ ಒಬ್ಬರದೊಬ್ಬರು ಹೆಸರುಗಳನ್ನ ಬರೆದುಕೊಂಡು ವಿಷ ಸೇವನೆ ಮಾಡಿದ್ದಾರೆ. ಯುವಕನ ಸ್ಥಿತಿಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ