ವಿಜಯಪುರ: ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ. ಖಾದರ್ ಇನಾಮದಾರ್, ಶಾಬಾಜ್ ಇನಾಮದಾರ್, ಅಲ್ತಾಫ್ ಇನಾಮದಾರ್ ಬಂಧಿತರು. ಇನ್ನು ಬಂಧಿತರಿಂದ 5000 ನಗದು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಓರ್ವ ಪರಾರಿಯಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇನ್ನು ರಾಯಚೂರಿನ ಸದರ್ ಬಜಾರ್ ಪೊಲೀಸರು ಅಶೋಕ್ ಡಿಪೋ ಬಳಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಜಿಲಾನಿ, ಖದೀರ್ ಪಾಷಾ, ಮೊಹಮ್ಮದ್ ಖಾಲೀದ್, ಅನ್ಸರ್ ಮೊಹಮ್ಮದ್ ಬಂಧಿತರು. ಬಂಧಿತರಿಂದ 10,300 ರೂಪಾಯಿ, ಮೊಬೈಲ್ ಜಪ್ತಿ ಮಾಡಲಾಗಿದೆ. ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7