Breaking News

RCBಗೆ ಇಂದು ತಪ್ಪು ತಿದ್ದುಕೊಳ್ಳಲು ಉತ್ತಮ ಅವಕಾಶ; ಅಂಕಪಟ್ಟಿ ಮೇಲೂ ಇದೆ ಸಣ್ಣ ಕಣ್ಣು..!

Spread the love

14ನೇ ಆವೃತ್ತಿಯ ಮಿಲಿಯನ್​ ಡಾಲರ್​​ ಟೂರ್ನಿ ಲೀಗ್​ ಪಂದ್ಯಗಳಿಗೆ ಇಂದು ತೆರೆ ಬೀಳಲಿದ್ದು, ಇನ್ನು ಮುಂದೆ ಕ್ವಾಲಿಫೈಯರ್​ ಹಣಾಹಣಿ ರಂಗೇರಲಿದೆ. ಎರಡು ಪಂದ್ಯಗಳು ಇಂದು ನಡೆಯಲಿದ್ದು, ಒಂದು ಪಂದ್ಯದಲ್ಲಿ ಮುಂಬೈ-ಸನ್​ರೈಸರ್ಸ್​ ನಡುವೆ ಕಾದಾಟ ನಡೆಸಲಿವೆ. ಇನ್ನೊಂದು ಪಂದ್ಯದಲ್ಲಿ ಆರ್​ಸಿಬಿ-ಡೆಲ್ಲಿ ನಡುವೆ ಸೆಣಸಾಟ ನಡೆಯಲಿದೆ. ಆದರೆ ಇಲ್ಲಿ ಮುಂಬೈ ಪಾಲಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ.

ಆರ್​​ಸಿಬಿ ಹಿಂದಿನ ಪಂದ್ಯದ ತಪ್ಪಗಳನ್ನ ತಿದ್ದಿಕೊಂಡು ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್​ಸಿಬಿ, ಎರಡನೇ ಸ್ಥಾನಕ್ಕೆ ಲಗ್ಗೆ ಇಡಲು ಕೂಡ ಪ್ರಯತ್ನ ನಡೆಸ್ತಿದೆ.

ಎರಡನೇ ಸ್ಥಾನದಲ್ಲಿರುವ ಚೆನ್ನೈ, ಪ್ಲಸ್​ ನೆಟ್​ರನ್​ರೇಟ್​ ಹೊಂದಿದ್ರೆ, ಬೆಂಗಳೂರು ಮೈನಸ್​​ ನೆಟ್​ ರನ್​ರೇಟ್​ ಹೊಂದಿದೆ. ಇಂದು ಡೆಲ್ಲಿ ವಿರುದ್ಧ ಭಾರಿ ಅಂತರದ ಗೆಲುವು ದಾಖಲಿಸಿದ್ರೆ 2ನೇ ಸ್ಥಾನಕ್ಕೇರೋ ಅವಕಾಶವೂ ಇದೆ. ಜೊತೆಗೆ ಕ್ವಾಲಿ ಫೈಯರ್​ ಪಂದ್ಯಕ್ಕೂ ತಪ್ಪನ್ನ ತಿದ್ದಿಕೊಳ್ಳಲೂ ಇರೋ ಉತ್ತಮ ಅವಕಾಶವೂ ಇದಾಗಿದೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ