ಈತ್ತಿಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ರಾಮದುರ್ಗ ಕ್ಷೇತ್ರಕ್ಕೆ ಸಾರಿಗೆ, ಶಿಕ್ಷಣ, ನೀರಾವರಿ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳಿಗೆ ವಿಶೇಷ ಅನುದಾನ ಕುದರೆ ಬಯಲು ಮೈದಾನದಲ್ಲಿ ರೂ. 30 ಕೋಟಿ ವೆಚ್ಚದ ಸುಸಜ್ಜಿತ ನೂತನ ಬಸ್ ನಿಲ್ದಾಣಕ್ಕೆ ಮಂಜೂರಾತಿ, ನೋದಾಯಿತ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ರೂ. 40 ಕೋಟಿ ವೆಚ್ಚದ ಶ್ರಮಿಕ ವಸತಿ ಶಾಲೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ತಾಲೂಕಿನ ಗೊಣ್ಣಾಗರ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಿಸಲು ರೂ. 9 ಕೋಟಿ ಅನುದಾನ ದೊರೆತಿದೆ. ಹಂಪಿಹೋಳಿ ಗ್ರಾಮದ ಹತ್ತಿರ ರೂ. 126 ಕೋಟಿ ವೆಚ್ಚದ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಕಾಮಗಾರಿ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ದಶಕಳಿಂದ ನೆನೆಗುದಿಗೆ ಬಿದ್ದ ಶ್ರೀ ವೀರಭದ್ರೇಶ್ವರ ಹಾಗೂ ಬಸವೇಶ್ವರ ಏತ ನೀರಾವರಿ ಕಾಮಗಾರಿ ಮುಂದುವರೆಸಲು ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ. ರೂ.350 ಕೋಟಿ ವೆಚ್ಚದ ಶ್ರೀವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿ
ವಿಳಂಬಕ್ಕೆ ಗುತ್ತಿಗೆದಾರ ಕಾರಣಾಗಿದ್ದು, ಬೇರೆ ಗುತ್ತಿಗೆದಾರನಿಗೆ ಕೆಲಸ ನಿರ್ವಹಿಸಿ ಪುನಃ ಕಾಮಗಾರಿ ಆರಂಭಿಸಲಾಗುವುದು. ಸಾಲಾಪೂರ ಬಸವೇಶ್ವರ ಏತ ನೀರಾವರಿ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಡಿಸೆಂಬರ್ ವೇಳೆಗೆ ಚಾಲನೆ ನೀಡಲಾಗುವುದು.
ಕೆರೆ ತುಂಬಿಸುವ ಯೋಜನೆ: ರೂ. 85 ಕೋಟಿ ವೆಚ್ಚ ಅನುದಾನದಲ್ಲಿ ತಾಲೂಕಿನ ಚಂದರಗಿ, ಮುರಕಟ್ನಾಳ, ತೋರಣಗಟ್ಟಿ, ಕಟಕೋಳ ಸೇರಿದಂತೆ ಒಟ್ಟು 8 ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಅನುದಾನ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭಿಸಿ, ದನಕರುಗಳಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ತಾಲೂಕಿನ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 0.50 ಕೋಟಿ ಮಂಜೂರಾತಿ ದೊರೆತಿದ್ದು, ರೂ. 37 ಕೋಟಿ ಅನುದಾನ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಹಾಗೂ ರೂ.13 ಕೋಟಿ ಅನುದಾನ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಬಳಕೆ ಮಾಡಲಾಗುವುದು.
ತಾಲೂಕಿನ ಸಾಲಾಪೂರ, ಮುದೇನೂರ ಗ್ರಾಮದಲ್ಲಿ ನೂತನ 110 ಕೆವಿ ಪರಿವರ್ತಕ ಘಟಕ ಸ್ಥಾಪನೆಗೆ ತಲಾ ರೂ.25 ಕೋಟಿ ಅನುದಾನ ದೊರೆತಿದೆ. ಸವದತ್ತಿ ತಾಲೂಕು ಶಿರಸಂಗಿ ಹಂಚು ಕಾಲುವೆ ಮೂಲಕ ತಾಲೂಕಿನ ಕಡ್ಲಿಕೊಪ್ಪ, ಮುಳ್ಳೂರ, ಜಾಲಿಕಟ್ಟಿ, ರೇವಡಿಕೊಪ್ಪ ಹಾಗೂ ಶಿವಪೇಟೆ ಗ್ರಾಮಗಳಿಗೆ ನೀರಾವರಿ ಯೋಜನೆ ಕಲ್ಪಿಸಲು ರೂ. 94 ಕೋಟಿ ವೆಚ್ಚದ ಕಾಮಗಾರಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಕಾಂಗ್ರೆಸ್ ಮುಖಂಡರಾದ ಸುರೇಶ ಫತೇಪೂರ, ಶ್ರೀ ಪ್ರದೀಪ ಪಟ್ಟಣ ಸೇರಿದಂತೆ ಇತರರಿದ್ದರು.
Laxmi News 24×7