Breaking News

ಒಂದೂವರೆ ವರ್ಷದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಎಸ್.ಜಿ.ನಂಜಯ್ಯನಮಠ

Spread the love

ರಾಯಚೂರು: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಶುಕ್ರವಾರ (ಫೆ.13) ನಗರದ ಹೊರವಲಯದ ಯರಮರಸ್ ಬಳಿಯ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಒಟ್ಟು 322 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯು ಈಗಾಗಲೇ ಶೇ.31ರಷ್ಟು ಪೂರ್ಣವಾಗಿದೆ. ಬರುವ ಎರಡೂವರೆ ತಿಂಗಳಲ್ಲಿ ರನ್ ವೇ ಕಾಮಗಾರಿಯು ಪೂರ್ಣವಾಗಲಿದೆ. ಈ ವರ್ಷದಲ್ಲಿ ಮಳೆ ನಿರಂತರವಾಗಿ ಸುರಿದ ಕಾರಣ ರನ್ ವೇ ಕಾಮಗಾರಿಯು ಮಂದಗತಿಯಲ್ಲಿ ಸಾಗಿತ್ತು. ಮುಂದಿನ ಒಂದೂವರೆ ವರ್ಷದ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಏಗನೂರು ಗ್ರಾಮದಲ್ಲಿ 30 ಮನೆಗಳು ಬೇರೆಡೆಗೆ ಶಿಫ್ಟ್ ಮಾಡಲು ಮೂರು ಎಕರೆ ಜಮೀನು ಹಾಗೂ ದಂಡ್ ಗ್ರಾಮದಲ್ಲಿನ 108 ಮನೆಗಳು ಶಿಫ್ಟ್ ಮಾಡಲು ಆರು ಎಕರೆ ಜಮೀನಿನಲ್ಲಿ ಲೇಔಟ್ ಕಾರ್ಯ ನಡೆಯುತ್ತಿದೆ. ವಿಮಾನ ನಿಲ್ದಾಣ ಕಾಮಗಾರಿ ಹಿನ್ನೆಲೆ ಬೇರೆಡೆಗೆ ಸ್ಥಳಾಂತರವಾಗುವ ಎರಡು ಗ್ರಾಮಗಳಲ್ಲಿನ ಗ್ರಾಮಸ್ಥರಿಗೆ ಪರಿಹಾರವನ್ನು ನೀಡಲಾಗಿದೆ ಎಂದರು.


Spread the love

About Laxminews 24x7

Check Also

ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ: ಅಶೋಕ್‌ ಪಟ್ಟಣ್

Spread the loveಕೊಪ್ಪಳ: ಸಿದ್ದರಾಮಯ್ಯ  ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ ಇದೆ ಎಂದು ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ