Breaking News

ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

Spread the love

ಬೆಳಗಾವಿ: ಕೆರೆಗಳ ಅಭಿವೃದ್ದಿಯಿಂದ ಮುಂಬರುವ ದಿನಗಳಲ್ಲಿ ಜನ ಜಾನುವಾರುಗಳಿಗೆ ಸಹಕಾರಿಯಾಗಲಿದೆ, ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ಯಾಸ್ ಫೌಂಡೇಶನ್ ಅಧ್ಯಕ್ಷ ಡಾ.ಮಾಧವಪ್ರಭು ಅಭಿಪ್ರಾಯಪಟ್ಟರು.  
ಜಿಲ್ಲೆಯ ಖಾನಾಪುರ ತಾಲೂಕಿನ ಹಲಶಿವವಾಡಿ ಗ್ರಾಮದಲ್ಲಿ ‘ಪ್ಯಾಸ್ ಫೌಂಡೇಶನ್’ ವತಿಯಿಂದ ಸಿಎಸ್‌ಆರ್ ಸಂಸ್ಥೆ ಮತ್ತು ಎಕೆಪಿ ಫೆರೋಕಾಸ್ಟ’ ಯೋಜನೆಯೊಂದಿಗೆ ಹಮ್ಮಿಕೊಂಡಿದ್ದ ಎರಡು ಕೆರೆಗಳ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆರೆ ಹೂಳು ತೆಗೆಯುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ..ಮತ್ತು ಮಳೆ ನೀರು ಸಂಗ್ರಹದಿಂದ ಅಂತರಜಲಮಟ್ಟ ಹೆಚ್ಚಿಸುವ ಮೂಲಕ ಈ ಭಾಗದ ಜನರಿಗೆ ಸಹಕಾರಿಯಾಗಲಿದೆ ಎಂದರು.
ಎಕೆಪಿ ಫೆರೋಕಾಸ್ಟ್ನ ಪರಾಗ್ ಭಂಡಾರೆ ಮತ್ತು ಪ್ರೀತಿ ಭಂಡಾರೆ ಮಾತನಾಡಿ ಕೆರೆಗಳ ಅಭಿವೃದ್ಧಿ ಸಾಮಾಜಿಕ ಸೇವೆ, ಸಂಘ ಸಂಸ್ಥೆಗಳು ಕೆರೆಗಳ ಅಭಿವೃದ್ದಿಗೆ ಮುಂದಾಗಬೇಕು ಎಂದರು.
ತಾ.ಪಂ ಮಾಜಿ ಸದಸ್ಯ ಚಂದ್ರಕಾಂತ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ಯಾಸ್ ಫೌಂಡೇಶನ್‌ನ ಉಪಾಧ್ಯಕ್ಷ ಅಭಿಮನ್ಯು ಡಾಗಾ, ಕಾರ್ಯದರ್ಶಿ ಡಾ.ಪ್ರೀತಿ ಕೋರೆ, ಜಂಟಿ ಕಾರ್ಯದರ್ಶಿ ಅವಧೂತ ಸಾಮಂತ್, ಖಜಾಂಚಿ ಲಕ್ಷ್ಮಿಕಾಂತ ಪಸಾರಿ,ನಿರ್ದೇಶಕ ರೋಹನ ಕುಲಕರ್ಣಿ,ವಾಮನ ದೇಸಾಯಿ, ದೀಪಕ ಓಲ್ಕರ್, ಅಜಯï ಆಚಾರ್ಯ, ದತ್ತಾತ್ರೇಯ ದೇಸಾಯಿ, ರಘುನಾಥ ದೇಸಾಯಿ ಇತರರು ಇದ್ದರು.

Spread the love

About Laxminews 24x7

Check Also

ನಂದಗಡದ ಸರ್ಕಾರಿ ಶಾಲೆಗಳ ದುರಾವಸ್ಥೆ !!! ಅಸ್ವಚ್ಛತೆಯ ಆಗರವಾದ ಶಾಲೆಗಳು…

Spread the love ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದಲ್ಲಿರುವ ಜೆ ಸಿಎಸ್ ಆವರಣದಲ್ಲಿ ಉರ್ದು, ಕನ್ನಡ ಮತ್ತು ಮರಾಠಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ