Breaking News

ಸೈಬರ್ ವಂಚಕರ ಸದೆಬಡೆದ ಸೈಬರ್ ಪೊಲೀಸ್*

Spread the love

ಬೆಳಗಾವಿ :ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೆ ಒಟ್ಟು 1309 ಪ್ರಕರಣಗಳಲ್ಲಿ ( ಅರ್ಜಿಗಳು ಸೇರಿದಂತೆ ) ಸೈಬರ್‌ ಹಣಕಾಸು ವಂಚನೆಗಳಲ್ಲಿ ( CYBER FINANCIAL FRAUD ) ದೂರುದಾರರು ಕಳೆದುಕೊಂಡ ರೂಪಾಯಿ 2,45,37,052 / – ಹಣದ ಬಗ್ಗೆ ತನಿಖೆ ಕೈಕೊಂಡು ಸೈಬರ್ ವಂಚಕರ ಸುಮಾರು 1825 ಬ್ಯಾಂಕ್ ಖಾತೆ ಹಾಗೂ ವ್ಯಾಲೆಟ್‌ಗಳಲ್ಲಿದ್ದ ಒಟ್ಟು ರೂಪಾಯಿ 2,33,09,350 / – ಹಣವನ್ನು ಪ್ರೀಜ್ ಮಾಡಿ ಸಂಬಂಧಪಟ್ಟ ದೂರುದಾರರ ಖಾತೆಗೆ 88,10,347 / – ರೂಪಾಯಿ ಹಣವನ್ನು ಮರಳಿ ಸಂದಾಯ ಮಾಡಿಸಿದೆ.

ಇದರಲ್ಲ ಇನ್ನೂ 1,44,99,003 / – ರೂಪಾಯಿ ಮೊತ್ತವನ್ನು ಸಹ ದೂರುದಾರರಿಗೆ ಮರು ಸಂದಾಯ ಮಾಡಲು ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾದಲ್ಲಿ ತಮ್ಮ ಬ್ಯಾಂಕ್ ಖಾತೆಯ ವಿವರ ಮತ್ತು ವೈಯಕ್ತಿಕ ವಿವರಗಳೊಂದಿಗೆ ತತಕ್ಷಣ GOLDEN HOUR ದಲ್ಲಿ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಸಂಪರ್ಕಿಸಿ ಮಾಹಿತಿ ನೀಡಲು ಉಪ ಪೊಲೀಸ್ ಆಯುಕ್ತರು ( ಕಾನೂನು ಮತ್ತು ಸುವ್ಯವಸ್ಥೆ ) ಬೆಳಗಾವಿ ನಗರ ಕೋರಿರುತ್ತಾರೆ. ಈ ಕೂಡಲೇ ಸೈಬರ್ ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗದೇ ಇದ್ದಲ್ಲಿ 112 ಗೆ ಇಲ್ಲವೇ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಟೆಲಿಫೋನ್ ನಂಬರ್ 0831-2950320 ಇದಕ್ಕೆ ಸಂಪರ್ಕಿಸಲು ಸೂಚಿಸಿದೆ. ಸಂಬಂಧಪಟ್ಟ ಬ್ಯಾಂಕ್ ಶಾಖೆಗೂ ಮಾಹಿತಿ ನೀಡಲು ಕೋರಲಾಗಿದೆ.

ಸೈಬರ್‌ ಹಣಕಾಸು ವಂಚನೆ ( CYBER FINANCIAL FRAUD ) ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಬ್ಯಾಂಕುಗಳ ಸಭೆಯನ್ನು ನಡೆಸಿ ಅವರ ಸಹಕಾರ ಕೋರಲಾಗಿದೆ. ಈ ಅಕ್ಟೋಬರ್ ತಿಂಗಳನ್ನು ನ್ಯಾಷನಲ್ ಸೈಬರ್ ಸಕ್ಯೂಲಿ ಅವರನೆಸ್ ಮಂಥ್ ಎಂದು ಆಚರಿಸಲಾಗುತ್ತಿದೆ.

ಈ ಸಂಬಂಧ ಸೊಸಿಯಲ್ ಮೀಡಿಯಾ , ಮಾಸ್ ಮೀಡಿಯಾ ಹಾಗೂ ಶಾಲಾ-ಕಾಲೇಜುಗಳ ಮುಖಾಂತರ ಹಾಗೂ ಸೈಬರ್‌ ವಂಚನೆಗೆ ಒಳಗಾಗಿ ಮರಳಿ ಹಣ ಸಂದಾಯವಾದವರ ಮುಖಾಂತರ ಸೈಬರ್ ಸೆಕ್ಯೂಲಿಟಿ ಅವರೆನೆಸ್ ಹಮ್ಮಿಕೊಳ್ಳಲಾಗಿದೆ.

ಈ ದಿನ ಸಾಂಕೇತಿಕವಾಗಿ ಸೈಬರ್ ಹಣಕಾಸಿನ ವಂಚನೆಗೆ ( CYBER FINANCIAL FRAUD ) ಒಳಗಾದ ನೊಂದವರನ್ನು ಕರೆಯಿಸಿ ಅವರು ಕಳೆದುಕೊಂಡ ಹಣ ಸಂದಾಯ ಮಾಡಲಾಯಿತು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ