ಅದು ರಾಯಚೂರು ನಗರದಲ್ಲಿ ವಾಸವಿದ್ದ ಬಡ ಕುಟುಂಬ..ಅಲ್ಲಿ ಮನೆ ಯಜಮಾನ 44 ವರ್ಷದ ಸಮೀರ್ ಅಹ್ಮದ್, ಪತ್ನಿ ಜುಲ್ಲಾಕಾ ಬೇಗಂ.. ಈ ದಂಪತಿಗೆ ಮೆಹಾಮುನ್ ಅನ್ನೋ ಮುದ್ದು ಮಗಳಿದ್ಲು.. ಸಮೀರ್ ಆಟೋ ಓಡಿಸುತ್ತಿದ್ರೆ, ಪತಿಗೆ ಆರ್ಥಿಕ ಸಹಾಯ ತುಂಬಲು ಪತ್ನಿ ಜುಲ್ಲಾಕಾ ಬೇಗಂ ಮೊಹಮ್ಮದ್ ಹುಸೇನ್ ಅನ್ನೋ ಶ್ರೀಮಂತರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ರು.. ಕಷ್ಟ ಪಟ್ಟು ಹಗಲಿರುಳು ದುಡಿದು ಮಗಳು ಮೆಹಾಮುನ್ ಳನ್ನ ಇಂಜಿನಿಯರಿಂಗ್ ಓದಿಸಿದ್ರು.. ಅವ್ರು ತಾನಾಯ್ತು ತಮ್ಮ …
Read More »ವಿರೂಪಾಕ್ಷ’ ಹೆಸರಿನ ಶಾಸನ ಪತ್ತೆ
ಹೊಸಪೇಟೆ (ವಿಜಯನಗರ): ಹಂಪಿ ಸುತ್ತಮುತ್ತ ಈಗಾಗಲೇ ಹಲವು ಶಾಸನಗಳು ದೊರೆತು ಪ್ರಕಟವಾಗಿದ್ದರೆ, ಇನ್ನಷ್ಟು ಶಾಸನಗಳು ಬೆಳಕಿಗೆ ಬರುತ್ತಲೇ ಇವೆ. ವಿಜಯನಗರ ತಿರುಗಾಟ ತಂಡವು ಇದೀಗ ಪತ್ತೆಹಚ್ಚಿದ ಶಾಸನ ‘ವಿರೂಪಾಕ್ಷದೇವಪುರ’ ಎಂಬ ಹೆಸರು ಊರೊಂದಕ್ಕೆ ಇದ್ದುದನ್ನು ಕಂಡುಕೊಂಡಿದೆ. ಹಂಪಿ ಸಮೀಪದ ನಾಗೇನಹಳ್ಳಿಯ ಧರ್ಮರಗುಡ್ಡದ ಬಳಿಯ ಉತ್ತರ ದಿಕ್ಕಿನ ಜಮೀನೊಂದರಲ್ಲಿರುವ ಕರಿಯಮ್ಮ ದೇವಾಲಯದ ಕಂಬದಲ್ಲಿನ ಶಾಸನ ಈವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ‘ಶ್ರೀ ವಿರೂಪಾಕ್ಷ ದೇವರಪುರ’ …
Read More »ಅನಂತಕುಮಾರ ಹೆಗಡೆಯನ್ನು ಬಿಜೆಪಿಯಿಂದ ಉಚ್ಚಾಟಿಸಲಿ: ಮಂಕಾಳ ವೈದ್ಯ
ಕಾರವಾರ: ಸಂವಿಧಾನ ತಿದ್ದುಪಡಿ ಮಾಡುವ ಮಾತುಗಳನ್ನಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರನ್ನು ಬಿಜೆಪಿ ತಕ್ಷಣ ಉಚ್ಚಾಟಿಸಲಿ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು. ‘ಅನಂತಕುಮಾರ ಅವರನ್ನು ಪಕ್ಷದಿಂದ ಉಚ್ಛಾಟಿಸದಿದ್ದರೆ ಬಿಜೆಪಿಯು ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ ಹೊಂದಿದೆ ಎಂಬುದು ಸ್ಪಷ್ಟವಾದಂತೆ’ ಎಂದು ಇಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡುತ್ತ ಹೇಳಿದರು. ದೇಶದಲ್ಲಿ ಸಂವಿಧಾನ ಬದಲಿಸಿ, ಬ್ರಿಟಿಷ್ ಮಾದರಿಯ ಆಡಳಿತ ವ್ಯವಸ್ಥೆ ತರುವ ಉದ್ದೇಶ …
Read More »ಹೆಗಡೆ ಹೇಳಿಕೆಯಲ್ಲಿ ಸಂವಿಧಾನ ನಾಶಪಡಿಸುವ BJP-RSSನ ಕಪಟ ಅಜೆಂಡಾ ಇದೆ: ಕಾಂಗ್ರೆಸ್
ನವದಹೆಲಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪರಿಷ್ಕರಿಸುವ ಅಥವಾ ನಾಶಪಡಿಸುವ ಗುಪ್ತ ಮತ್ತು ಕಪಟ ಅಜೆಂಡಾವನ್ನು ಬಿಜೆಪಿ-ಆರ್‌ಎಸ್‌ಎಸ್ ಹೊಂದಿವೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಹೇಳಿದೆ. ‘ಸಂವಿಧಾನಕ್ಕೆ ತಿದ್ದುಪಡಿ ತರಬೇಕಾದರೆ ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ’ ಎಂದು ಸಿದ್ದಾಪುರ ತಾಲೂಕಿನ ಹಲಗೇರಿಯ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು.ಈ ಹೇಳಿಕೆಗೆ …
Read More »ನೀರಿಗಾಗಿ ಹಾಹಾಕಾರ; ಬೇಕಾಬಿಟ್ಟಿ ಬೋರ್ವೆಲ್ ಕೊರೆಯುವವರಿಗೆ ಶಾಕ್
ಬೆಂಗಳೂರು, ಮಾ.10: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆ ಬೇಕಾಬಿಟ್ಟಿ ಬೋರ್ ವೆಲ್(Bore Well) ಕೊರೆಯುವವರಿಗೆ ಜಲಮಂಡಳಿ ಶಾಕ್ ನೀಡಿದ್ದು, ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಮಾಡಿದೆ. ಒಂದು ವೇಳೆ ಅನುಮತಿ ಇಲ್ಲದೇ ಬೋರ್ ವೆಲ್ ಕೊರೆದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಜೊತೆಗೆ ಅನುಮತಿ ಪಡೆದ ಸ್ಥಳದಲ್ಲಿ ಮಾತ್ರ ಬೋರ್ವೆಲ್ ಹಾಕಬೇಕು. ಅದಕ್ಕೋಸ್ಕರ ಜಲಮಂಡಳಿಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೋರಿದೆ. ಅರ್ಜಿ ಸಲ್ಲಿಕೆ ಬಳಿಕ …
Read More »20 ಲಕ್ಷ ರೂ. ಮೌಲ್ಯದ ಬ್ರ್ಯಾಂಡೆಡ್ ಡಿಟರ್ಜೆಂಟ್ ಪೌಡರ್ ಸೀಜ್
ಬೆಂಗಳೂರು, ಮಾರ್ಚ್ 10: ಬ್ರ್ಯಾಂಡೆಡ್ ಡಿಟರ್ಜೆಂಟ್ ಪೌಡರ್ (Detergent Powder) ನಕಲು ಮಾಡುತ್ತಿದ್ದ ಫ್ಯಾಕ್ಟರಿಯನ್ನು ಮಲ್ಲೇಶ್ವರಂ ಪೊಲೀಸರು ಸೀಜ್ ಮಾಡದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಫ್ಯಾಕ್ಟರಿ ಮೇಲೆ ಮಲ್ಲೇಶ್ವರಂ ಪೊಲೀಸರು ದಾಳಿ ಮಾಡಿದ್ದಾರೆ. ಹಿಂದೂಸ್ತಾನ್ ಯೂನಿ ಲಿವರ್ ಸಂಸ್ಥೆ ಮಾಹಿತಿ ಆಧರಿಸಿ ದಾಳಿ ಮಾಡಿದ್ದು, 20 ಲಕ್ಷ ರೂ. ಮೌಲ್ಯದ ಡಿಟರ್ಜೆಂಟ್ ವಸ್ತುಗಳು, ಸುಮಾರು 15 ಲಕ್ಷ ರೂ. ಮೌಲ್ಯದ ಮಿಕ್ಸಿಂಗ್ ಮಷಿನ್ ಸೇರಿದಂತೆ ವಿವಿಧ ಕಂಪನಿಯ ಲೇಬಲ್ಗಳನ್ನ ಜಪ್ತಿ ಮಾಡಿದ. ಅರ್ಜುನ್ ಜೈನ್ ಎಂಬಾತ …
Read More »ಅಕ್ಕಮಹಾದೇವಿ ವಿವಿ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ
ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಮ್ಯಾನೇಜ್ಮೆಂಟ್ ವಿಭಾಗದ ಹೆಚ್ ಒಡಿ ಪ್ರೊ.ಮಲ್ಲಿಕಾರ್ಜುನ ಎನ್.ಎಲ್ ವಿರುದ್ಧ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಪ್ರೊ.ಮಲ್ಲಿಕಾರ್ಜುನ ಎನ್.ಎಲ್ ರನ್ನು ಅಮಾನತು ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿವಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.ಪ್ರೊಫೇಸರ್ ವಿರುದ್ಧ ಧಿಕ್ಕಾರ ಕುಗಿದ್ದಾರೆ. ಪ್ರೊ.ಮಲ್ಲಿಕಾರ್ಜುನ ರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಪಿ ಹೆಚ್ ಡಿ ವಿದ್ಯಾರ್ಥಿನಿ ಕುಲಪತಿ …
Read More »ಹೆದ್ದಾರಿಯಲ್ಲಿ ವೀಲಿಂಗ್ ಮಾಡ್ತಿದ್ದ 6ಜನ ಪುಂಡರ ಬಂಧನ;
ಬೆಂಗಳೂರು ಗ್ರಾಮಾಂತರ, ಮಾ.10: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಆರು ಜನ ಪುಂಡರನ್ನು ಬಂಧಿಸಿದ ಘಟನೆ ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 13ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ಇವರು ಶಿವರಾತ್ರಿ ಸೇರಿದಂತೆ ಇತರೆ ಹಬ್ಬಗಳ ಸಂದರ್ಭಗಳಲ್ಲಿ ಅಪಾಯಕಾರಿ ವೀಲಿಂಗ್ ಮಾಡುವ ಮೂಲಕ ಇತರೆ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದರು. ಈ ಹಿನ್ನಲೆ ಪ್ಲ್ಯಾನ್ ಮಾಡಿದ ಪೊಲೀಸರು, ಮೊದಲು ವೀಲಿಂಗ್ ದೃಶ್ಯವನ್ನ …
Read More »ಈ ಬಾರಿ ದೇಶಕ್ಕೆ ಮಹಿಳಾ ಪ್ರಧಾನಿ:ನೊಣವಿನಕೆರೆಯ ಯಶ್ವಂತ ಗುರೂಜಿ
ತುಮಕೂರು, ಮಾರ್ಚ್.10: ಲೋಕಸಭಾ ಚುನಾವಣೆಗೆ (Lok Sabha Election) ರಣಕಣ ರಂಗೇರಿದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ನಾನಾ ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶ್ವಂತ ಗುರೂಜಿ (Yashwanth Guruji) ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು ಈ ಬಾರಿ ಮಾಹಿಳಾ ಪ್ರಧಾನಿ ದೇಶಕ್ಕೆ ಸಿಗಲಿದ್ದಾರೆ ಎಂದಿದ್ದಾರೆ. ಈ ಬಾರಿ ದೇಶದ ಚುಕ್ಕಾಣಿಯನ್ನು ಕಾಂಗ್ರೆಸ್ (Congress) ಪಕ್ಷ ಹಿಡಿಯಲಿದೆ. ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕ ಗಾಂಧಿ (Priyanka Gandhi) ದೇಶದ ಗದ್ದುಗೆ …
Read More »ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಓರ್ವಳ ಶವ
ಕಲಬುರಗಿ: ಬಾಲಕಿಯರ ಹಾಸ್ಟಲ್ನಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಓರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದ ವಸತಿ ಶಾಲೆಯಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಗ್ರಾಮವೊಂದರ ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು. ಆದರೆ ಹಾಸ್ಟೆಲ್ನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ ಆಗಿರುವುದು ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ …
Read More »