Breaking News

ಹಾರೋಹಳ್ಳಿ ತಾಲ್ಲೂಕು ಘೋಷಣೆ: ವರ್ಷವಾದರೂ ಅಧಿಕಾರಿಗಳ ನೇಮಕವಿಲ್ಲ

ಹಾರೋಹಳ್ಳಿ: ಪಟ್ಟಣವಾಗಿದ್ದ ಹಾರೋಹಳ್ಳಿ ತಾಲ್ಲೂಕು ಆಗಿ ಮೇಲ್ದರ್ಜೆಗೇರಿ ಒಂದು ವರ್ಷವಾಗಿದೆ (2023ರ ಫೆ.21). ಆದರೆ, ತಾಲ್ಲೂಕಿಗೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ನೇಮಕವೂ ಆಗಿಲ್ಲ, ಕಾಯಂ ಕಟ್ಟಡಗಳೂ ಇಲ್ಲ. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮಂಡಿಸಿದ್ದ ಕೊನೆಯ ಬಜೆಟ್‌ನಲ್ಲಿ ಹಾರೋಹಳ್ಳಿ ಪಟ್ಟಣವನ್ನು ತಾಲ್ಲೂಕು ಆಗಿ ಘೋಷಿಸಲಾಗಿತ್ತು. ರಾಮನಗರ ಜಿಲ್ಲೆಯ 5ನೇ ಹೊಸ ತಾಲ್ಲೂಕು ಆಗಿರುವ ಹಾರೋಹಳ್ಳಿಗೆ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇಮಕವಾಗಿದೆ. ಹಾರೋಹಳ್ಳಿ ಪಟ್ಟಣ ಪಂಚಾಯಿತಿ …

Read More »

ಭಾನುವಾರವೂ ಅಂಚೆ ಕಚೇರಿ ತೆರೆಯಲು ಚಿಂತನೆ

ಬೆಂಗಳೂರು: ರಾಜ್ಯದಲ್ಲಿನ ಆಯ್ದ ಅಂಚೆ ಕಚೇರಿಗಳನ್ನು ಭಾನುವಾರವೂ ತೆರೆಯಲು ಅಂಚೆ ಇಲಾಖೆ ಚಿಂತನೆ ನಡೆಸಿದೆ. ಅಂಚೆ ಸೇವೆಗಳಿಗಳಿಗಾಗಿ ಉದ್ಯೋಗಸ್ಥರು ಕೆಲವೊಮ್ಮೆ ಅರ್ಧ ದಿನ ರಜೆ ಹಾಕುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತಿದೆ. ಹೀಗಾಗಿ ಭಾನುವಾರವೂ ತೆರೆದರೆ ಅನುಕೂಲ ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಆರ್ಥಿಕ ವಹಿವಾಟು ಸೇರಿ ಎಲ್ಲ ಅಂಚೆ ಸೇವೆಗಳನ್ನು ಭಾನುವಾರವೂ ಕಲ್ಪಿಸುವ ಸಂಬಂಧ ಅಂಚೆ ಕಚೇರಿಗಳನ್ನು ತೆರೆಯಲು ಯೋಚಿಸಿದೆ. ಈ ಸಂಬಂಧ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಕರ್ನಾಟಕ ವೃತ್ತ್ತ ಮುಖ್ಯ …

Read More »

ಸವಾಲು ಸ್ವೀಕರಿಸಿದ್ದೇನೆ-ರಾಹುಲ್‌ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು

ಶಿವಮೊಗ್ಗ: ಭ್ರಷ್ಟಾಚಾರದಲ್ಲಿ ಮುಳುಗಿದ್ದವರು ಇಂದು(ಇಂಡಿಯಾ ಮೈತ್ರಿಕೂಟ) ಒಂದಾಗಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್‌ “ಶಕ್ತಿ” ನಾಶವನ್ನು ಬಯಸುತ್ತಿದೆ. ಇದು ಹಿಂದೂ ದ್ವೇಷದ ಮನಸ್ಥಿತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿಕೆಗೆ ಸೋಮವಾರ (ಮಾರ್ಚ್‌ 18) ತಿರುಗೇಟು ನೀಡಿದರು. ಶಿವಮೊಗ್ಗದ ಅಲ್ಲಪ್ರಭು ಫ್ರೀಡಂ ಪಾರ್ಕ್‌ ನಲ್ಲಿ ಬಿಜೆಪಿಯ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.   ನಾನು ಮಹಿಳೆಯನ್ನು ಶಕ್ತಿ ಎಂದು ಪರಿಗಣಿಸುತ್ತೇನೆ. ಪ್ರತಿಯೊಬ್ಬ ಮಹಿಳೆಯೂ (ತಾಯಿ, ಮಗಳು, …

Read More »

ಶ್ರೀರಾಮ ಕೇವಲ ಬಿಜೆಪಿ ಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯದಲ್ಲೂ ಶ್ರೀರಾಮ ಇದ್ದಾನೆ ಎಂದು ಸತೀಶ ಜಾರಕಿಹೋಳಿ

ಬೆಳಗಾವಿ: ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳುವದಿಲ್ಲ. ಆದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನಮ್ಮದೇ ತಂತ್ರಗಾರಿಕೆಯನ್ನು ಅನುಸರಿಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ 15 ರಿಂದ 20 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದರು.   ಬಿಜೆಪಿ ಯವರು ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೊಂಡು ಚುನಾವಣೆ ಎದುರಿಸಿದರೆ ನಾವು ಸಂವಿಧಾನ ಉಳಿಸಿ ಕಾಂಗ್ರೆಸ್ …

Read More »

ರಾಜ್ಯದ ಬಿಜೆಪಿ ಸಂಸದರು ಶೋಕೇಸ್‌ ಪೀಸ್‌ಗಳು: ಲಕ್ಷ್ಮಣ ಸವದಿ

ಅಥಣಿ: ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕುವುದು, ಸಂಸತ್‌ನಲ್ಲಿ ಟೇಬಲ್‌ ಕುಟ್ಟುವುದು ಹಾಗೂ ಮೋದಿ ಮೋದಿ ಎಂದು ಹೇಳುವುದನ್ನು ಬಿಟ್ಟರೆ ಬೇರ್ಯಾವ ಕೆಲಸವನ್ನೂ ಮಾಡಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಬರೀ ಶೋಕೇಸ್‌ ಪೀಸ್‌ ಆಗಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.   ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಷಯ ನಾನು ಹೇಳಿದ್ದಲ್ಲ. ಬಿಜೆಪಿ ಸಂಸದರೊಬ್ಬರು ಹಾಗೆಯೇ ಕೂಡಿದಾಗ ಇದನ್ನು ನನ್ನ ಮುಂದೆ ಪ್ರಸ್ತಾವಿಸಿದ್ದಾರೆ. …

Read More »

ಪ್ರಧಾನಿ ಶಿವಮೊಗ್ಗಕ್ಕೆ ಬಂದರೂ ಈಶ್ವರಪ್ಪ ಬರಲಿಲ್ಲ : ಮೋದಿಗೆ ತಟ್ಟಿದ ‘BJP’ ಬಂಡಾಯದ ಬಿಸಿ..!

ಶಿವಮೊಗ್ಗ : ಪ್ರಧಾನಿ ಮೋದಿಯ ಶಿವಮೊಗ್ಗ ಕಾರ್ಯಕ್ರಮಕ್ಕೆ ನಾನು ಬರೋದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕೊನೆಗೂ ತಮ್ಮ ಹಠ ಸಾಧಿಸಿದ್ದಾರೆ. ಹೇಳಿದಂತೆ ಪ್ರಧಾನಿ ಮೋದಿಯ ಶಿವಮೊಗ್ಗ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪುತ್ರ ಕಾಂತೇಶ್ಗೆ ಅವಕಾಶ ಕೊಡಲಿಲ್ಲ ಎಂದು ಆಕ್ರೋಶಗೊಂಡು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಆಗಮಿಸಲೇ ಇಲ್ಲ.   ಪ್ರಧಾನಿ ನರೇಂದ್ರ ಮೋದಿ …

Read More »

ಟಿಕೆಟ್‍ಗಾಗಿ ಸಿಎಂ ಮನೆಗೆ ವೀಣಾ ಬೆಂಬಲಿಗರ ಮುತ್ತಿಗೆ

ಬೆಂಗಳೂರು, ಮಾ.18- ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ನುಗ್ಗುವ ಪ್ರಯತ್ನ ನಡೆಸಿದರು. ಬಾಗಲಕೋಟೆಯಿಂದ ಆಗಮಿಸಿದ ಮಹಿಳೆಯರ ತಂಡ ಇಂದು ಬೆಂಗಳೂರಿನಲ್ಲಿ ಹಿರಿಯ ನಾಯಕರನ್ನು ಭೇಟಿ ಮಾಡಲು ಯತ್ನಿಸಿತ್ತು.   ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಬಳಿ ಬಿಗಿ ಕಾವಲು ಆಯೋಜಿಸಲಾಗಿದ್ದು, ಸಾಮಾನ್ಯ ಕಾರ್ಯಕರ್ತರನ್ನು ಒಳಗೆ ಬಿಡಲು …

Read More »

ಆಜಾನ್ ಸಮಯದಲ್ಲಿ ಹನುಮಂತನ ಭಕ್ತಿಗೀತೆ ಹಾಕಿದ್ದಕ್ಕೆ ಹಲ್ಲೆ

ಬೆಂಗಳೂರು: ಆಜಾನ್ ಸಮಯದಲ್ಲಿ ಹನುಮಂತನ ಭಕ್ತಿಗೀತೆ ಹಾಕಿದ್ದಕ್ಕೆ ಮುಸ್ಲಿಂ ಸಮುದಾಯದ ಯುವಕರಿಂದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ. ಘಟನೆಯ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಸುಲೇಮಾನ್, ಶಾನವಾಜ್, ರೋಹಿತ್, ದ್ಯಾನೀಶ್ ಮತ್ತು ತರುಣ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮುಖೇಶ್ ಹಲ್ಲೆಗೊಳಗಾಗಿರುವ ಯುವಕ. ವರ್ಧಮಾನ್ ಟೆಲಿಕಾಮ್’ …

Read More »

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಬಿಜೆಪಿ ಅಭ್ಯರ್ಥಿ?

ನವದೆಹಲಿ: ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್‌ ‌ಭಾನುವಾರ ಇಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಆಗಲಿದ್ದಾರೆ. ಸುಮಲತಾ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎಂಬ ವದಂತಿ ದಟ್ಟವಾಗಿದೆ. ‘ನಡ್ಡಾ ಅವರ ಆಹ್ವಾನದಂತೆ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲು ಆಗಮಿಸಿದ್ದೇನೆ’ ಎಂದು ಸುಮಲತಾ ಸುದ್ದಿಗಾರರಿಗೆ ತಿಳಿಸಿದರು.ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.   ಕ್ಷೇತ್ರದ ಸಂಸದ, ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಸಕ್ರಿಯ …

Read More »

ಹಾಸನ, ಕೋಲಾರ, ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ : ಎಚ್ ಡಿ ಕುಮಾರಸ್ವಾಮಿ ಘೋಷಣೆ

ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸದ್ಯ ಬಿಜೆಪಿ ಜೆಡಿಎಸ್ ಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು ಹಾಸನ ಕೋಲಾರ ಹಾಗೂ ಮಂಡ್ಯ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಸ್ವಾಮಿ ಘೋಷಣೆ ಮಾಡಿದ್ದಾರೆ. ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರವಾಗಿ ಸ್ಪರ್ಧಿಸಿದರು ಹಾಸನ ಮಂಡ್ಯದಲ್ಲಿ ಸುಲಭವಾಗಿ …

Read More »