Breaking News

ಜೈಲಿನಿಂದ ದರ್ಶನ್ ಬೇಗ ಬಿಡುಗಡೆಯಾಗಲಿ ಎಂದು ಗದಗದಲ್ಲಿ ಅಭಿಮಾನಿಗಳ ವಿಶೇಷ ಪೂಜೆ

ಗದಗ, ಜುಲೈ. 16: ಇತ್ತೀಚೆಗೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಪೋಸ್ಟರ್‌, ವಿಡಿಯೋಗಳ ಮೂಲಕ ಜೊತೆಗೆ ನಿಂತಿದ್ದಾರೆ.   ಇದರ ಜೊತೆಗೆ ದರ್ಶನ್ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ನೆಚ್ಚಿನ ನಟನಲ್ಲಿ ತಮ್ಮ ನಂಬಿಕೆ ಕಳೆದುಕೊಳ್ಳದ ಅಭಿಮಾನಿಗಳು ಹಲವು ಭಾಗಗಳಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ. ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ …

Read More »

ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

ವಿಜಯಪುರ: ಸನ್ಮಾನ ಸ್ವೀಕರಿಸಿದ ವೇದಿಕೆಯಲ್ಲಿ ಪಕ್ಷದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ರಮೇಶ್ ಜಿಗಜಿಣಗಿ, ವೇದಿಕೆ ಇಳಿಯುತ್ತಲೇ ಯೂಟರ್ನ್ ಹೊಡೆದಿದ್ದಾರೆ. ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಿದ ಬಗ್ಗೆ ಏನನ್ನೂ ಹೇಳಲ್ಲ, ಈಗ ಅದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳಿ ಎಂದಿದ್ದಾರೆ.   ತಮಗೆ ಪಕ್ಷ ನೀಡಿದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ಕೇಂದ್ರದಲ್ಲಿ ಸಂಪುಟ ರಚನೆ ಸಂದರ್ಭದಲ್ಲಿ ಸತತ 7 ಬಾರಿ ಗೆದ್ದಿರುವ ನನ್ನ ಹೆಸರನ್ನು ಹೇಳಲಿಲ್ಲ. ತಮ್ಮ …

Read More »

ವಾಲ್ಮೀಕಿ ನಿಗಮದ ಹಗರಣವಲ್ಲ, ಇದು ಅಕ್ಷಮ್ಯ ಅಪರಾಧ:ವಿಜಯೇಂದ್ರ

ಬೆಂಗಳೂರು: ರಾಜ್ಯ ಸರಕಾರದ ಕೆಲವರ ಬೆದರಿಕೆ ಮತ್ತು ಒತ್ತಡವೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿಯನ್ನು ಹಗರಣಕ್ಕೆ ಬಳಸಿಕೊಂಡಿದ್ದಾರೆ. ಹಣವನ್ನು ಹೊರರಾಜ್ಯಕ್ಕೆ ಕಳುಹಿಸುವ ಕೆಲಸ ಮಾಡಿದ್ದಾರೆ. ಇದು ಕೇವಲ ಹಗರಣವಲ್ಲ; ಇದು ಅಕ್ಷಮ್ಯ ಅಪರಾಧ ಎಂದು ಸಭಾಧ್ಯಕ್ಷರ ಗಮನಕ್ಕೆ ತಂದರು. ಅಲ್ಲದೆ, …

Read More »

ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಾಯಕ

ನವದೆಹಲಿ: ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧ ಜುಲೈ 27ರಂದು ಆರಂಭವಾಗುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗೆ ನಾಯಕರಾಗಿದ್ದಾರೆ. ಆದರೆ ನಂತರ ನಡೆಯುವ ಏಕದಿನ ಸರಣಿಗೆ ಅವರು ಲಭ್ಯರಿರುವುದಿಲ್ಲ. ‌ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪೆಲ್ಲೆಕೆಲ್ಲೆಯಲ್ಲಿ ನಡೆಯಲಿವೆ. ಮೂರು ಏಕದಿನ ಪಂದ್ಯಗಳು, ಆಗಸ್ಟ್‌ 2, 4 ಮತ್ತು 7ರಂದು ನಿಗದಿಯಾಗಿವೆ. ಟಿ20 ವಿಶ್ವಕಪ್‌ ಗೆದ್ದ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಪಾಂಡ್ಯ, ಏಕದಿನ …

Read More »

ಬೆಳಗಾವಿ: 18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) 24ನೇ ವಾರ್ಷಿಕ ಘಟಿಕೋತ್ಸವ ಜುಲೈ 18ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದ್ದು, ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು’ ಎಂದು ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ತಿಳಿಸಿದರು. ಚಿಕ್ಕಬಳ್ಳಾಪುರದ ಮಧುಸೂದನ್‌ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸದ್ಗುರು ಮಧುಸೂದನ್‌ ಸಾಯಿ, ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್‌.ಸೋಮನಾಥ್‌ ಸೇರಿದಂತೆ ಮೂವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಲಾಗುವುದು. ಉನ್ನತ ಶಿಕ್ಷಣ …

Read More »

ಹಾಡು ಮುಗಿಸಿದ ಹುಲ್ಯಾಳ ಮಹಾದೇವಪ್ಪ

ಮೂಡಲಗಿ: ‘ಹಾರ್ಮೋನಿಯಂ ಮುಂದೆ ಕುಳಿತು ಹಾಡಲು ಶುರು ಮಾಡಿದರೆ ಮುಂದೆ ಕುಳಿತ ಶ್ರೋತೃಗಳೆಲ್ಲ ತಲೆದೂಗುತ್ತ ಜಗತ್ತನ್ನೇ ಮರೆಯುತ್ತಿದ್ದರು. ಅಂಥ ಅದ್ಭುತ ಭಜನಾ ಗಾಯನವನ್ನು ಶೃತಿಬದ್ಧವಾಗಿ ಮಾಡುತ್ತಿದ್ದ ತಾಲ್ಲೂಕಿನ ನಾಗನೂರ ಗ್ರಾಮದ ಹುಲ್ಯಾಳ ಮಹಾದೇವಪ್ಪ ಎಂದೇ ಗುರುತಿಸಿಕೊಂಡಿದ್ದ ಮಹಾದೇವಪ್ಪ ವೀರಭದ್ರಪ್ಪ ಚಿಮ್ಮಡ ಅವರು ಇತ್ತೀಚೆಗೆ ನಿಧನರಾದರು. ಅವರ ಅಭಿಮಾನಿಗಳು ಸ್ವರಶ್ರದ್ಧಾಂಜಲಿ ಸ್ಮರಣೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದ ಶಿವಲಿಂಗಪ್ಪ ಚಪ್ಪರ ತೋಟದಲ್ಲಿ ಏರ್ಪಡಿಸಿದ್ದಾರೆ. ಉತ್ತರ ಕರ್ನಾಟದಕ ಬೆಳಗಾವಿ, ವಿಜಯಪುರ, …

Read More »

ರಾಯಬಾಗ | ಬೈಕುಗಳ ಕರ್ಕಶ ಶಬ್ದ: ಜನರಿಗೆ ಕಿರಿಕಿರಿ

ರಾಯಬಾಗ: ಕರ್ಕಶವಾಗಿ ಶಬ್ದ ಮಾಡುವ ಬೈಕುಗಳನ್ನು ಓಡಾಡಿಸಿ ಜನರಿಗೆ ತೊಂದರೆ ಕೊಡುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಯಬಾಗ ಪಟ್ಟಣ ಮಾತ್ರವಲ್ಲ; ಚಿಂಚಲಿ ರಸ್ತೆ, ಚಿಕ್ಕೋಡಿ ರಸ್ತೆ, ಸ್ಟೇಷನ್‌ ರಸ್ತೆಯಲ್ಲೂ ಯುವಕರು ದಿನವೂ ಈ ಸರ್ಕಸ್‌ ಮಾಡುವುದು ಸಾಮಾನ್ಯವಾಗಿದೆ. ತಮ್ಮ ದ್ವಿಚಕ್ರ ವಾಹನಗಳ ಸೈಲೆನ್ಸರ್‌ ಬದಲಾವಣೆ ಅಥವಾ ಮಾರ್ಪಾಡು ಮಾಡಿಕೊಳ್ಳುವ ಯುವಕರು ಕರ್ಕಶ ಶಬ್ದ ಮಾಡುತ್ತ ಬೈಕ್‌ ಓಡಿಸುತ್ತಿದ್ದಾರೆ. ಇದು ಇತರ ವಾಹನ ಚಾಲಕರಿಗೆ ಮಾತ್ರವಲ್ಲ; ರಸ್ತೆ ಇಕ್ಕೆಲಗಳ …

Read More »

ನಾಗ ಪಂಚಮಿ ದಿನಾಂಕ, ಮಹತ್ವ, ಮಂಗಳಕರ ಸಮಯ, ಪೂಜಾ ವಿಧಾನ ತಿಳಿಯಿರಿ

ಹಿಂದೂ ಧರ್ಮದಲ್ಲಿ ನಾಗ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನಾಗದೇವತೆಗಳಿಗೆ ಮೀಸಲಾಗಿರುವ ಈ ಹಬ್ಬವನ್ನು ದೇಶದ ಕೆಲವು ರಾಜ್ಯಗಳಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಐದನೇ ದಿನ ಅಂದರೆ ಜುಲೈ 25ರಂದು ಆಚರಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಇದನ್ನು ಶ್ರಾವಣ ತಿಂಗಳ ಶುಕ್ಲ ಪಕ್ಷದ ಐದನೇ ದಿನ ಅಂದರೆ ಆಗಸ್ಟ್ 9ರಂದು ಆಚರಿಸಲಾಗುತ್ತದೆ. ಬಹುತೇಕ ಕಡೆ ಈ ಹದಿನೈದು ದಿನಗಳ ಕಾಲ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಶ್ರಾವಣ ಮಾಸ ಶಿವನ ಅಚ್ಚುಮೆಚ್ಚಿನ ತಿಂಗಳು …

Read More »

ಪೊಲೀಸರ ವರ್ಗಾವಣೆಗೆ ಒಪ್ಪಿಗೆ, ನಿಯಮಗಳೇನು?

ಬೆಂಗಳೂರು, ಜುಲೈ 16: ಕರ್ನಾಟಕ ಸರ್ಕಾರ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದೆ. ಪೊಲೀಸರ ವರ್ಗಾವಣೆಗೆ ಅನುಮತಿ ನೀಡಿದೆ. ವರ್ಗಾವಣೆಗೆ ನಿಯಮಗಳೇನು? ಎಂದು ಸಹ ವಿವರಣೆ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹಸರಿನಲ್ಲಿ, ಜಿ. ಶ್ಯಾಮ ಹೊಳ್ಳ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಪೊಲೀಸ್ ಸೇವಗಳು-ಬಿ) ಆದೇಶ ಹೊರಡಿಸಿದ್ದಾರೆ. ಆದೇಶ ಪೊಲೀಸ್ ಇಲಾಖೆಯಲ್ಲಿ ಪೊಲೀಸ್‌ ಅಧಿಕಾರಿ/ ನೌಕರರ ವರ್ಗಾವಣೆ ಕುರಿತು ಆದೇಶ ಎಂಬ …

Read More »

ಸಿಎಂ ಎರಡು ದೂರು ದಾಖಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ದೂರು ನೀಡಲಾಗಿದೆ. ಚುನಾವಣೆ ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ಹಾಗೂ ಮುಡಾ ಅಕ್ರಮ ವಿಚಾರವಾಗಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಚುನಾವಣಾ ಆಯೋಗಕ್ಕೆ ಈ ದೂರು ನೀಡಿದ್ದಾರೆ.   2018ರ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ನೀಡಿದ್ದ ಅಫಿಡವಿಟ್ ನಲ್ಲಿ ಪತ್ನಿ ಪಾರ್ವತಿ ಹೆಸರಲ್ಲಿ 3 ಎಕರೆ 16 ಗುಂಟೆ ಕೃಷಿ ಜಮೀನು ಇದ್ದು, ಇದರ …

Read More »