Breaking News

: ಇಂದಿನಿಂದ ಆ.10ರವರೆಗೆ ಬೆಂಗಳೂರಲ್ಲಿ ಭಾರೀ ಮಳೆ

ಬೆಂಗಳೂರು: ನಗರದಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ಸಿಲಿಕಾನ್ ಸಿಟಿ ಜನತೆ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಇಂದಿನಿಂದ ಆಗಸ್ಟ್.10ರವರೆಗೆ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲೂ ಮಳೆ ಮುಂದುವರೆಯಲಿದೆ ಅಂತ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಈ ಬಗ್ಗೆ ಹವಾಮಾನ ತಜ್ಞ ಜಿಎಸ್ ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದು, ಇಂದಿನಿಂದ ಆಗಸ್ಟ್.10ರವರೆಗೆ ಬೆಂಗಳೂರಲ್ಲಿ ಮಳೆ ಸಾಧ್ಯತೆ ಇದೆ. ಇವತ್ತು ಕರಾವಳಿ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗಿದೆ ಎಂದರು. …

Read More »

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಜೈಲು

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಗ್ರಾಮವೊಂದರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಸವರಾಜ ಮುದ್ಲಾಪುರ ಎಂಬುವನಿಗೆ ಕೊಪ್ಪಳ ಜಿಲ್ಲಾ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ. ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2022ರ ಮಾರ್ಚ್ 20ರಂದು ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ …

Read More »

ಕೇಂದ್ರ ಸರ್ಕಾರದಿಂದ `ಮಹಿಳೆಯರಿಗೆ’ ಗುಡ್ ನ್ಯೂಸ್ : ಉಚಿತ ಹೊಲಿಗೆ ಯಂತ್ರದ ಜೊತೆಗೆ 1 ಲಕ್ಷ ರೂ. ಸಾಲ!

ನವದೆಹಲಿ : ಕೇಂದ್ರದಲ್ಲಿ ಮೂರನೇ ಬಾರಿಗೆ ಎನ್ಡಿಎ ಸರ್ಕಾರ ರಚನೆಯಾಗುವುದರೊಂದಿಗೆ, ನಡೆಯುತ್ತಿರುವ ಅನೇಕ ಯೋಜನೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಈ ಅನುಕ್ರಮದಲ್ಲಿ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ. ಅನೇಕರು ಈಗಾಗಲೇ ಇದರಿಂದ ಪ್ರಯೋಜನ ಪಡೆದಿದ್ದಾರೆ. ಇಂದಿಗೂ, ಯಾವುದೇ ಮಹಿಳೆ ಅಥವಾ ಪುರುಷ ಈ ಯೋಜನೆಯ ಲಾಭವನ್ನು ಪಡೆಯಬಹುದು. ಕೇಂದ್ರ ಸರ್ಕಾರವು ವಿವಿಧ ರೀತಿಯ ವೃತ್ತಿಗಳಿಗೆ ಸಂಬಂಧಿಸಿದ ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಒದಗಿಸುತ್ತದೆ. ಹೊಲಿಗೆ ಯಂತ್ರವೂ ಈ …

Read More »

ಖಾಲಿ ಬಾಟಲಿಯೇ ಹಿರಿ ಜೀವಕ್ಕೆ ಆಧಾರ

ವಿಜಯಪುರ(ದೇವನಹಳ್ಳಿ): ’50 ವರ್ಷದ ಹಿಂದೆ ಹಲವು ಮಂದಿಗೆ ಕೆಲಸ ಕೊಟ್ಟ ನನ್ನ ಕೈಗಳು ಈಗ ಸೋತಿವೆ. ದುಡಿಯುವ ಶಕ್ತಿಯನ್ನು ಕಳೆದುಕೊಂಡಿವೆ. ಜೀವನ ಸಾಗಿಸಲು ಬೀದಿಯಲ್ಲಿ ಸಿಗುವ ಖಾಲಿ ಬಾಟಲಿ ಮತ್ತು ರಟ್ಟನ್ನು ಹೆಕ್ಕಿ ಮಾರಿ ಒಂದೂತ್ತಿನ ಹೊಟ್ಟೆ ಹೊರೆಯುತ್ತಿದ್ದೇನೆ…’ -ಇದು ಪಟ್ಟಣದ ಈದ್ಗಾ ಮೊಹಲ್ಲಾದ ನಿವಾಸಿ 95 ವರ್ಷದ ಜಯರಾಮಯ್ಯ ಅವರ ನುಡಿ. ಬಾಗಿದ ಬೆನ್ನು, ಬಾಟಲಿ ಮತ್ತು ರಟ್ಟು ತುಂಬಿದ ಸೈಕಲ್‌ ಅನ್ನು ನಡುಗುತ್ತಾ ತಳುತ್ತಾ ಪಟ್ಟಣದಲ್ಲಿ ಸಾಗುವ ವೇಳೆ …

Read More »

ಕಾಳಜಿ ಕೇಂದ್ರಗಳಲ್ಲಿ ಮಕ್ಕಳಿಗೆ ಪಾಠ

ಮೂಡಲಗಿ : ತಾಲ್ಲೂಕಿನಲ್ಲಿ ಘಟಪ್ರಭಾ ನದಿಯ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾದ 12 ಕಾಳಜಿ ಕೇಂದ್ರಗಳಲ್ಲಿ 350ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಲ್ಲಿ ಲಭ್ಯವಿರುವ ಸೌಲಭ್ಯ ಬಳಸಿಕೊಂಡು, ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಾರೆ. ವಡೇರಹಟ್ಟಿ, ಪಟಗುಂದಿ, ಮಸಗುಪ್ಪಿ, ಹುಣಶ್ಯಾಳ ಪಿಜಿ ಹೀಗೆ ಬೇರೆ ಬೇರೆ ಕಡೆಯಿರುವ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರು ಇದ್ದಾರೆ.‌ ‘ಉಪಾಹಾರ, ಊಟ ಸಿಗುತ್ತಿದೆ. ಸಂತ್ರಸ್ತರ ಮಕ್ಕಳಿಗೆ ಶಿಕ್ಷಣವೂ ನೀಡಬೇಕು ಎಂಬ ಉದ್ದೇಶದಿಂದ ನಿತ್ಯವೂ ಪಾಠ ಮಾಡುತ್ತಿದ್ದೇವೆ’ ಎಂದು …

Read More »

ರಾತ್ರಿ ನಿದ್ದಿ ಇಲ್ಲ, ಮನ್ಯಾಗ್‌ ನೆಮ್ಮದಿ ಇಲ್ಲ’ – ಜುಗೂಳ ಗ್ರಾಮಸ್ಥರ ಸಂಕಷ್ಟ

ಜುಗೂಳ (ಕಾಗವಾಡ ತಾಲ್ಲೂಕು): ‘ಮನ್ಯಾಗೀನ ವಸ್ತುಗಳನ್ನೆಲ್ಲ ಕಟ್ಟಿ ಇಟ್ಟೇವ್ರಿ. ಪ್ರತಿದಿನಾ ನಸುಕಿನ್ಯಾಗ ಹೊಳಿದಂಡಿಗಿ ಬಂದ್‌ ಎಷ್ಟ ನೀರ ಬಂದೇತಿ ಅಂತ ನೋಡಿಹೋಗ್ತೇವ್ರಿ. ಮಳಿಗಾಲ ಬಂತಂದ್ರ ನಮಗ್‌ ರಾತ್ರಿ ನಿದ್ದಿ ಇಲ್ಲ. ಮನ್ಯಾಗ ನೆಮ್ಮದಿ ಇಲ್ಲ. ಬ್ಯಾರೆ ಕಡೆ ಸ್ಥಳಾಂತರ ಮಾಡೋದ ನಮ್ಮ ಸಮಸ್ಯೆಕ್‌ ಪರಿಹಾರ…’ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕಾಗವಾಡ ತಾಲ್ಲೂಕಿನ ಜುಗೂಳ-ಮಹಾರಾಷ್ಟ್ರದ ಖಿದ್ರಾಪುರ ಸೇತುವೆ ಬಳಿ ಸೋಮವಾರ ಬಂದುನಿಂತಿದ್ದ ಜುಗೂಳ ಗ್ರಾಮಸ್ಥರಾದ ಪ್ರಕಾಶ ಪಾಟೀಲ ಮತ್ತು ವಿಜಯಕುಮಾರ ಮಿನಚೆ …

Read More »

ಆ.15ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ರಕ್ತದಾನ ಶಿಬಿರ

ಬೆಳಗಾವಿ: ‘ಇಲ್ಲಿನ ಹಿಂದವಾಡಿಯ ಮಹಾವೀರ ಭವನದಲ್ಲಿ ಜೈನ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್(ಜಿತೋ) ಬೆಳಗಾವಿ ಘಟಕದ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆ.15ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ’ ಎಂದು ಸಂಯೋಜಕ ಕುಂತಿನಾಥ ಕಲಮನಿ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಕಷ್ಟ ಸಮಯದಲ್ಲಿ‌ ಜನರಿಗೆ ನೆರವಾಗುವ ದೃಷ್ಟಿಯಿಂದ ನಾಲ್ಕು ವರ್ಷಗಳಿಂದ ಈ ಶಿಬಿರ ಆಯೋಜಿಸುತ್ತಿದ್ದೇವೆ. ಕಳೆದ ವರ್ಷ 936 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಈ …

Read More »

ಮಳೆಗಾಲದಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಶಾಲಾ ಮಕ್ಕಳ ಪಯಣ

ಕಿತ್ತೂರು: ಎರಡು ಲಾರಿ ಟ್ಯೂಬ್ ಗಳಿಗೆ ಗಾಳಿ ತುಂಬಿಸಿ ಅದರ ಮೇಲೆ ಕಟ್ಟಿಗೆಯಿಟ್ಟು, ಎರಡೂ ದಂಡೆಗೆ ನೆಡಲಾಗಿರುವ ಗೂಟಗಳಿಗೆ ಹಗ್ಗ ಕಟ್ಟಿ ಮಾಡಿರುವ ‘ಜಗ್ಗುವ ಟ್ಯೂಬ್ ತೆಪ್ಪ’ದಲ್ಲಿ ತಾಲ್ಲೂಕಿನ ಕುಲವಳ್ಳಿಯ ನಿಂಗಾಪುರ ಗ್ರಾಮಸ್ಥರು, ಶಾಲಾ ಮಕ್ಕಳು, ಮಹಿಳೆಯರು, ರೈತರಿಗೆ ಇದೇ ಸಂಚಾರದ ಜಲಮಾರ್ಗವಾಗಿದೆ. ‘ಧಾರವಾಡ ತಾಲ್ಲೂಕಿನ ಅಳ್ನಾವರ ಬಳಿಯ ಹುಲಿಕೆರೆ ಭರ್ತಿಯಾದರೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಂಗಾಪುರಕ್ಕೆ ಈ ಅಪಾಯಕಾರಿ ನೀರ ಮೇಲಿನ ಸಂಚಾರ ತಪ್ಪಿದ್ದಲ್ಲ’ ಎನ್ನುತ್ತಾರೆ ಗ್ರಾಮಸ್ಥರು. ‘ಅಲ್ಲದೇ, …

Read More »

ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆಗಾಗಿ ಕೂಗು

ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆಗಾಗಿ ಕೂಗು ಕರ್ನಾಟಕದ ಎರಡನೇ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಆಡಳಿತದ ಸುಧಾರಣೆಯ ದೃಷ್ಟಿಯಿಂದ ವಿಭಜನೆ ಮಾಡಬೇಕೆಂಬ ಬೇಡಿಕೆಗಳು ಮತ್ತೆ ಎದ್ದಿವೆ. 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಜಿಲ್ಲೆ, 18 ವಿಧಾನಸಭಾ ಮತ್ತು 2 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.   ಬೆಳಗಾವಿ ಜಿಲ್ಲೆಯನ್ನು ಚಿಕ್ಕೋಡಿ ಮತ್ತು ಗೋಕಾಕವೆಂಬ ಎರಡು ಜಿಲ್ಲಾ ಕೇಂದ್ರಗಳಾಗಿ ವಿಭಜಿಸುವ ಹೋರಾಟ ಕಳೆದ ಎರಡು ದಶಕಗಳಿಂದ ನಡೆಯುತ್ತಿದೆ. ಇತ್ತ ಅಥಣಿ ಮತ್ತು …

Read More »

ಆಗಸ್ಟ್ 21ರ ಬಳಿಕ ಖಾಸಗಿ ಶಾಲೆಗಳು ಬಂದ್-ಕಾರಣ ಏನು?

ಬೆಂಗಳೂರು, ಆಗಸ್ಟ್​​ 05: ರಾಜ್ಯದಲ್ಲಿ ಆಗಸ್ಟ್ 21ರ ಬಳಿಕ ಖಾಸಗಿ ಶಾಲೆಗಳನ್ನು ಬಂದ್ ಮಾಡಲು ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ. ಹಾಗಾದರೆ ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಾಲಾ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಖಾಸಗಿ ಶಾಲೆಗಳ ಮೇಲಿನ ಅನ್ಯಾಯ ವಿರೋಧಿಸಿ ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ …

Read More »