ಬೆಂಗಳೂರು: ಸಿನೆಮಾ ಚಿತ್ರೀಕರಣದ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾ ಗಿದ್ದು, ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಳಿ ನಾಯಕರಾಗಿರುವ “ಬಘೀರ’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು, ಸಾಹಸ ದೃಶ್ಯಗಳ ಚಿತ್ರೀಕರಣ ಸಂದರ್ಭ ಗಾಯವಾಗಿದೆ.
Read More »4 ವರ್ಷದ ಪದವಿಗೂ ಪಿಎಚ್.ಡಿ ಪ್ರವೇಶಕ್ಕೆ ಅವಕಾಶ
ಹೊಸದಿಲ್ಲಿ: ಕನಿಷ್ಠ ಶೇ.75ರಷ್ಟು ಅಂಕಗಳೊಂದಿಗೆ 4 ವರ್ಷಗಳ ಪದವಿ ಪೂರೈಸಿರುವ ವಿದ್ಯಾರ್ಥಿಗಳು ನೇರ ವಾಗಿ ಎನ್‌ಇಟಿ(ನೆಟ್) ಪರೀಕ್ಷೆ ಬರೆದು, ಪಿಎಚ್.ಡಿ ಪ್ರವೇಶ ಪಡೆಯಬಹುದು ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಜೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‌ಎಫ್) ಜತೆಗೆ ಅಥವಾ ಇಲ್ಲದೆಯೇ ಪಿಎಚ್.ಡಿ ಪಡೆಯಲು ಅಭ್ಯರ್ಥಿಗಳು 4 ವರ್ಷ ಪದವಿಯಲ್ಲಿ ಕನಿಷ್ಠ ಶೇ.75ರಷ್ಟು ಅಂಕಗಳು ಅಥವಾ ಸಮಾನ ಗ್ರೇಡ್ ಹೊಂದುವುದು ಅಗತ್ಯವಿದೆ. ಎಸ್‌ಸಿ, ಎಸ್‌ಟಿ, ಒಬಿಸಿ(ಕೆನೆ ಪದರ ಕೆಳಗಿನವರು), ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದ …
Read More »ಖಾಸಗೀಕರಣಕ್ಕೆ ಕೇಂದ್ರ ಹುನ್ನಾರ: ರಾಹುಲ್ ಗಾಂಧಿ ಆರೋಪ
ಹೊಸದಿಲ್ಲಿ: “ರೈಲ್ವೇ ಅಸಮರ್ಥ ಎಂದು ಬಿಂಬಿಸುವ ಮೂಲಕ ಖಾಸಗೀಕರಣ ಗೊಳಿಸಿ, ನಿರ್ವಹಣೆಯನ್ನು ತಮ್ಮ ಆಪ್ತರಿಗೆ ಮಾ ರಾಟ ಮಾಡುವ ಉದ್ದೇಶವನ್ನು ಮೋದಿ ಸರಕಾರ ಹೊಂದಿದೆ ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರೈಲಲ್ಲಿ ಜನ ತುಂಬಿ ತುಳುಕುತ್ತಿರುವ ವೀಡಿಯೋ ಒಂದನ್ನು ರಾಹುಲ್ ಟ್ವೀಟ್ ಮಾಡಿದ್ದಾರೆ. “ಮೋದಿ ಆಡಳಿತದಲ್ಲಿ ರೈಲಿನಲ್ಲಿ ಓಡಾಡುವುದು ಜನರಿಗೆ ಶಿಕ್ಷೆಯಂತಾಗಿದೆ. ಐಷಾರಾಮಿ ರೈಲುಗಳ ಪ್ರಚಾರ ಮಾಡುತ್ತಾ, ಸಾಮಾನ್ಯ ಕೋಚ್‌ಗಳನ್ನು ಕೇಂದ್ರ ಕಬಳಿಸುತ್ತಿದೆ. ಇದನ್ನು ಉಳಿಸಬೇಕಾದರೆ ಮೋದಿ ಸರಕಾರವನ್ನು ಕೆಳಗಿಳಿಸಲೇ …
Read More »ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
ಕೋಲಾರ: ಪ್ರಧಾನಿ ಮೋದಿಯವರು ಶನಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ಮೋದಿ ಸಾಹೇಬರೇ, ದೇವರ ಮೇಲೆ ನಂಬಿಕೆ ಇರಿಸಿಕೊಂಡು ಕಾಯುತ್ತಿದ್ದೇವೆ. ಜೂ. 4ರಂದು ದೇಶಕ್ಕೆ ಹಿಡಿದ ಶನಿ ಬಿಡುತ್ತದೆ. ನೀನು ದೇಶಕ್ಕೆ ಹಿಡಿದ ಶನಿ ಕಣಯ್ನಾ’ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಡವರಿಗೆ, ಹೆಣ್ಣು …
Read More »ಇತಿಹಾಸ ಬರೆದ 17ರ ಹುಡುಗ;
ಟೊರೆಂಟೊ: ಹದಿಹರೆಯದ ಭಾರತದ ಗ್ರ್ಯಾನ್ ಮಾಸ್ಟರ್ ಡಿ ಗುಕೇಶ್ ಅವರು ಇತಿಹಾಸ ಬರೆದಿದ್ದಾರೆ. ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ನಲ್ಲಿ ಚಾಂಪಿಯನ್ ಆಗಿ ಮೂಡಿಬಂದ 17 ವರ್ಷದ ಗುಕೇಶ್, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಕ್ಯಾಂಡಿಡೇಟ್ಸ್ ಕಪ್ ಗೆದ್ದ ಕೇವಲ ಎರಡನೇ ಭಾರತೀಯನಾಗಿ ಗುಕೇಶ್ ಮೂಡಿಬಂದಿದ್ದಾರೆ. ಈ ಹಿಂದೆ ವಿಶ್ವನಾಥನ್ ಆನಂದ್ ಅವರು ಈ ಸಾಧನೆ ಮಾಡಿದ್ದರು. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ …
Read More »ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಯತ್ನಿಸಿದ ದಂಪತಿ ಬಂಧನ
ಬೆಳಗಾವಿ: ಹುಬ್ಬಳ್ಳಿಯ ನೇಹಾ ಹತ್ಯೆಯ ಪ್ರಕರಣದ ಪ್ರಮುಖ ಕೇಂದ್ರವಾಗಿರುವ ಸವದತ್ತಿ ತಾಲೂಕಿನ ಮುನವಳ್ಳಿ ಮತ್ತೊಂದು ಆಘಾತಕಾರಿ ಪ್ರಕರಣದಿಂದ ಸುದ್ದಿಯಾಗಿದ್ದು, ಎರಡು ಮಕ್ಕಳ ತಾಯಿಯನ್ನೇ ಮತಾಂತರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ಹಿಂದೆ ಲವ್ ಜಿಹಾದ್ ಪ್ರಯತ್ನದ ಆರೋಪ ಸಹ ಕೇಳಿಬಂದಿದೆ. ಮತಾಂತರಕ್ಕೆ ಯತ್ನಿಸಿದ ಪ್ರಮುಖ ಅರೋಪಿ ರಫೀಕ್ ಬೇಪಾರಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ. ಇದಲ್ಲದೆ ಇವರಿಗೆ ಸಾಥ್ ನೀಡಿದ ಆರೋಪದ ಮೇಲೆ ಇನ್ನೂ ಐದು ಜನರ …
Read More »ಮತದಾನ ಬಹಿಷ್ಕಾರ ಫ್ಲೆಕ್ಸ್ ಅಳವಡಿಕೆ;ಎಚ್ಚರಿಕೆ
ಪುಂಜಾಲಕಟ್ಟೆ: ಚುನಾವಣೆಯ ಸಂದರ್ಭದಲ್ಲ ರೈತರು ತಮ್ಮ ಪರವಾನಗಿ ಹೊಂದಿದ ಕೋವಿಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಇರಿಸಬೇಕೆಂಬ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ವಿರುದ್ಧ ಬಂಟ್ವಾಳ ತಾಲೂಕಿನ ರೈತರೋರ್ವರು ಚುನಾವಣಾ ಮತ ಬಹಿಷ್ಕಾರಕ್ಕೆ ಕರೆ ನೀಡಿ ಫ್ಲೆಕ್ಸ್ ಅಳವಡಿಸಿದ್ದಾರೆ. ಕೃಷಿಕರ ಕೋವಿಯನ್ನು ಪ್ರತಿ ಸಲ ಚುನಾವಣಾ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿಡುವುದರಿಂದ ಪ್ರಾಣಿಗಳ ಹಾವಳಿಗೆ ತುತ್ತಾಗಿ ಕೃಷಿ ನಷ್ಟಕ್ಕೆ ಒಳಗಾಗುತ್ತದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮದ ಎಲ್ಲಾ ಅಪರಾಧ ಇಲ್ಲದ …
Read More »Raksha Ramaiah V/s Sudhakar: ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಸಕತ್ ಫೈಟ್, ಕ್ಷೇತ್ರ ಉಳಿಸಿಕೊಳ್ಳಲು ಕೆ.ಸುಧಾಕರ್ ಪರದಾಟ.
ಚಿಕ್ಕಬಳ್ಳಾಪುರ, ಏಪ್ರಿಲ್. 22: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷಿಸದ ಫಲಿತಾಂಶ ನೀಡಿ ರಾಜ್ಯದ ಜನಕ್ಕೆ ಅಚ್ಚರಿ ನೀಡಿದ್ದ ಕ್ಷೇತ್ರ ಚಿಕ್ಕಬಳ್ಳಾಪುರ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರವನ್ನು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತು ಒಕ್ಕಲಿಗರ ಮತಗಳಿಂದ ಬಿಜೆಪಿ ಮೊದಲ ಬಾರಿಗೆ ಕಸಿದುಕೊಂಡಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಲ್ಲಿ ಸೋಲು ಕಂಡ ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಈ ಸಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಕಣಕ್ಕೆ ಇಳಿದಿದ್ದಾರೆ. ಅವರಿಗೆ …
Read More »ನೀತಿ ಸಂಹಿತೆ ಉಲ್ಲಂಘಿಸಿ ಡಿಸಿಎಂಗೆ ಊಟ ಬಡಿಸಿದ್ದ ಶಿಕ್ಷಕ ಅಮಾನತು
ರಾಯಚೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಶಿಕ್ಷಕ ಕೆ. ರಾಮು ಅವರನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಚಂದ್ರಶೇಖರ ನಾಯಕ್ ಭಾನುವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಭೇಟಿ ನೀಡಿ ಉಪಹಾರ ಸೇವಿಸುತ್ತಿದ್ದರು. ಆಗ ಶಿಕ್ಷಕ ಕೆ. ರಾಮು ಊಟ ಬಡಿಸುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿತ್ತು. ಈ ಕುರಿತಾದ ದೂರು ಆಧರಿಸಿ ನೋಡಲ್ ಅಧಿಕಾರಿಗಳು ಪರಿಶೀಲನೆ …
Read More »ನೇಹಾ ಕೊಲೆ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು-ಜೆಪಿ ನಡ್ಡಾ ಆಗ್ರಹ
ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಏ.21) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರು ಹುಬ್ಬಳ್ಳಿಗೆ ಆಗಮಿಸಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಬಳಿಕ ಮಾತನಾಡಿದ ಅವರು, ‘ಕೇಸ್ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿ, ಏ.21: ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ(Hubballi) ಮಾತನಾಡಿದ ಅವರು, ‘ಇಡೀ …
Read More »