ಹುಬ್ಬಳ್ಳಿ: ‘ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಯೋಜನೆಯ ಮೂಲ ನೀಲನಕ್ಷೆಯಲ್ಲಿ ಈದ್ಗಾ ಕಾಂಪೌಂಡ್ ತೆರವು ಇರಲಿಲ್ಲ. ಈಗ ನಕ್ಷೆಯನ್ನೇ ಬದಲಿಸಿ, ಕಾಂಪೌಂಡ್ ತೆರವಿಗೆ ನಿರ್ಧರಿಸಿರಬಹುದು’ ಎಂದು ಮುಸ್ಲಿಂ ಸಮುದಾಯದ ಮುಖಂಡ ಅಲ್ತಾಫ್ ಹಳ್ಳೂರ ಹೇಳಿದ್ದಾರೆ. ‘ಮೇಲ್ಸೇತುವೆ ಕಾಮಗಾರಿಗಾಗಿ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಕಾಂಪೌಂಡ್ ಭಾಗಶಃ ತೆರವು ಆಗಲಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ಮೂಲ ನೀಲನಕ್ಷೆಯಲ್ಲಿ ಇರದ ತೆರವು ಅಂಶ ಈಗ ಏಕಾಏಕಿ ಹೇಗೆ …
Read More »35 ಎಮ್ಮೆ ರಕ್ಷಣೆ; ಪ್ರಕರಣ ದಾಖಲು
ಹುಬ್ಬಳ್ಳಿ: ಬೆಂಗಳೂರಿನ ದೇವನಹಳ್ಳಿ ಪಾಸಿಂಗ್ ನಂಬರ್ ಇರುವ ಕಂಟೇನರ್ ಲಾರಿಯಲ್ಲಿ ಉಸಿರಾಡಲು ಸಾಧ್ಯವಾಗದಂತೆ ಎಮ್ಮಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ, ಕ್ಲೀನರ್ ಮತ್ತು ಲಾರಿ ಮಾಲೀಕರ ವಿರುದ್ಧ ಗೋಕುಲ ರಸ್ತೆಯ ಆಶೀರ್ವಾದ ಹಂಜಗಿ ದೂರು ನೀಡಿದ್ದಾರೆ. ಗದಗ ಬೈಪಾಸ್ ರಸ್ತೆಯಲ್ಲಿ ಭಾನುವಾರ ಸಂಜೆ ಲಾರಿಯಲ್ಲಿ 35 ಎಮ್ಮೆಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದರು. …
Read More »: ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು,
ಹುಬ್ಬಳ್ಳಿ: ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು, ಜೆಜೆಎಂ ಯೋಜನೆಯಲ್ಲಿ 24X7 ನೀರಿನ ಪೈಪ್ ಅಳವಡಿಸಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಿಲ್ಲ. – ಇಂತಹ ಸಮಸ್ಯೆಗಳ ನಡುವೆಯೇ ಪಾಲಿಕೆ ವ್ಯಾಪ್ತಿಯ ಉಣಕಲ್ ಗ್ರಾಮದ ಜನರು ಬದುಕು ಕಟ್ಟಿಕೊಳ್ಳುತ್ತಿದ್ಧಾರೆ. ಒಂದೆಡೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಬ್ಬಳ್ಳಿ ನಗರ, ಇದಕ್ಕೆ ಹೊಂದಿಕೊಂಡೇ ಕೇವಲ 100 ಮೀಟರ್ ದೂರದಲ್ಲಿ ಉಣಕಲ್ ಗ್ರಾಮವಿದೆ. ಉಣಕಲ್ ಗ್ರಾಮವು 20 ಸಾವಿರಕ್ಕೂ …
Read More »ಕಾರ್ಖಾನೆಗೆ ಬೆಂಕಿ: 14 ತಾಸು ಕಾರ್ಯಾಚರಣೆ; ಕಾರ್ಮಿಕನ ಶವ ಪತ್ತೆ
ಬೆಳಗಾವಿ: ಸಮೀಪದ ನಾವಗೆ ಗ್ರಾಮದಲ್ಲಿ ಸ್ನೇಹಂ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಿಕ್ಕಿಕೊಂಡಿದ್ದ ಕಾರ್ಮಿಕನ ದೇಹ ಸುಟ್ಟು ಭಸ್ಮವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗಾವಿಯ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ (20) ಮೃತ ಪಟ್ಟ ಕಾರ್ಮಿಕ. ಲಿಫ್ಟನಲ್ಲಿ ವಿದ್ಯುತ್ ಅವಘಡದಿಂದ ಈ ಅನಾಹುತ ಸಂಭವಿಸಿದೆ. ಮೆಡಿಕಲ್ ಟೇಪಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತು. ಆಗ ಒಳಗಡೆ ಇದ್ದ ಹಲವು ಅಗ್ನಿ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು. ಬೆಂಕಿಯಲ್ಲಿ ಬೆಂದ ಮೂವರನ್ನು …
Read More »ಯಮಕನಮರಡಿ: 20 ದಿನವಾದರೂ ಪೂರೈಕೆಯಾಗದ ನೀರು
ಯಮಕನಮರಡಿ: ಮತಕ್ಷೇತ್ರದ ವ್ಯಾಪ್ತಿಗೆ ಬರುವ, ಸಚಿವ ಸತೀಶ ಜಾರಕಿಹೊಳಿ ಅವರ ಕ್ಷೇತ್ರ ಹೆಬ್ಬಾಳದಲ್ಲಿ 20 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ, ಗ್ರಾಮ ಪಂಚಾಯಿತಿ ಎದುರು ಪ್ರತಿಭಟಿಸಿರು. ’40 ದಿನಗಳಿಂದ ವಿಪರೀತ ಮಳೆಯಾದರೂ ಗ್ರಾಮಕ್ಕೆ ಕುಡಿಯುವ ನೀರಿಲ್ಲ. ಹಿರಣ್ಯಕೇಶಿ ನದಿಯಿಂದ ಕೇವಲ 1 ಕಿ.ಮೀ ಅಂತರದಲ್ಲಿರುವ ಮತ್ತು ಹಿಡಕಲ್ ಜಲಾಶಯದಿಂದ 14ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ನೀರಿನ ಸಮಸ್ಯೆ ಇದೆ. 15 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮಕ್ಕೆ …
Read More »ನಕಲಿ ದಾಖಲೆ ಸೃಷ್ಠಿಸಿ ಅರ್ಜಿ ಸಲ್ಲಿಕೆ: ದೂರು ದಾಖಲು
ಚಿಕ್ಕೋಡಿ: ಪರಿಶಿಷ್ಟ ಜಾತಿ ಗುತ್ತಿಗೆದಾರನೆಂದು ನಕಲಿ ದಾಖಲೆ ಸೃಷ್ಟಿಸಿ ಈ-ಪ್ರೋಕ್ ವೆಬ್‍ಸೈಟ್ ಮೂಲಕ ಟೆಂಡರ್ ಹಾಕಿದ್ದ ಧಾರವಾಡ ಮೂಲದ ಬಾಲಕೃಷ್ಣ ಬಸವರಾಜ ಚೊಳಚಗುಡ್ಡ ಎಂಬುವರ ವಿರುದ್ಧ ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕೋಡಿ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಾಂಡುರಂಗರಾವ್ ಆ. 4 ರಂದು ನೀಡಿದ ದೂರಿನ ಮೇರೆಗೆ ಚಿಕ್ಕೋಡಿ ಪಿಎಸ್‍ಐ ಬಸಗೌಡ ನೇರ್ಲಿ ಪ್ರಕರಣ ದಾಖಲಿಸಿದ್ದಾರೆ. ಚಿಕ್ಕೋಡಿ ವಿಭಾಗ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ …
Read More »ಗಾಂಜಾ ವಶ: ಮೂವರ ಬಂಧನ
ಕಾಗವಾಡ: ಪಟ್ಟಣದಿಂದ ಚಿತ್ರದುರ್ಗದ ಕಡೆಗೆ ಹೊರಟಿದ್ದ ಕಾರಿನಲ್ಲಿದ್ದ 3 ಕೆಜಿ 75 ಗ್ರಾಂ ಗಾಂಜಾ, ಕಾರನ್ನು ಇಲ್ಲಿನ ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪಟ್ಟಣದ ಚನ್ನಮ್ಮಾ ವೃತ್ತದ ಸಮೀಪ ಸೋಮವಾರ ಪೊಲೀಸರು ಕಾರ್ಯಾಚರಣೆ ನಡೆಸಿದರು. ಚಿತ್ರದುರ್ಗ ನಗರದ ನಿವಾಸಿಗಳಾದ ಫೈರೋಜ್ ನುಸರತ್, ಮಹ್ಮದಕಲಂದರ ಇಮ್ತಿಯಾಜ್‌ಶರೀಫ್, ತಂಜೀಂ ನೌಶಾಧ ಆರೋಪಿಗಳು. ಪಿಎಸ್‌ಐ ಎಂ.ಬಿ. ಬಿರಾದಾರ, ಪಿಎಸ್‌ಐ (ಅಪರಾಧ) ಆರ್.ಎಚ್. ಬಗಲಿ ನೇತೃತ್ವದಲ್ಲಿ ಕಾಗವಾಡ …
Read More »ಚನ್ನಮ್ಮನ ಕಿತ್ತೂರು: ನಿಂಗಾಪುರಕ್ಕೆ ಬಂತು ದೋಣಿ…
ಚನ್ನಮ್ಮನ ಕಿತ್ತೂರು: ಹುಲಿಕೆರೆ ಹಿನ್ನೀರಿನಿಂದಾಗಿ ಟ್ಯೂಬ್ ತೆಪ್ಪದಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿದ್ದ ತಾಲ್ಲೂಕಿನ ಕುಲವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಂಗಾಪುರದ ಮಕ್ಕಳು ಮತ್ತು ನಾಗರಿಕರ ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಈ ಗ್ರಾಮಸ್ಥರ ಸಮಸ್ಯೆ ಮೇಲೆ ಬೆಳಕು ಚೆಲ್ಲಲು ‘ಪ್ರಜಾವಾಣಿ’ ಆ.6ರ ಸಂಚಿಕೆಯಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಪಯಣ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ, ಆ ಊರಿಗೆ ಫೈಬರ್ ದೋಣಿಯ ವ್ಯವಸ್ಥೆ ಮಾಡಿತು. ಮಂಗಳವಾರ ಸಂಜೆ ತಾಲ್ಲೂಕು ಆಡಳಿತ ಸೌಧಕ್ಕೆ …
Read More »ಮಳೆ ಹಾನಿ | ಸರ್ಕಾರಕ್ಕೆ ವರದಿ ನೀಡಿ: ಮಹಾಂತೇಶ ಕೌಜಲಗಿ
ಬೈಲಹೊಂಗಲ: ‘ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಪಿಡಿಒ, ಗ್ರಾಮಲೆಕ್ಕಾಧಿಕಾರಿ ಮತ್ತು ನೋಡೆಲ್ ಅಧಿಕಾರಿಗಳು ತಕ್ಷಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಯಿಂದ ಹಾನಿಗೊಳಗಾದ ಸ್ಥಳಗಳ ಪರಿಶೀಲಿಸಿ ಬಿದ್ದ ಮನೆ, ಶಾಲೆ, ಅಂಗನವಾಡಿ, ಬೆಳೆ ಹಾನಿ, ಕುರಿತು ಇದುವರೆಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ …
Read More »ಪಡಿತರಚೀಟಿ ತಿದ್ದುಪಡಿಗೆ ದಿನಾಂಕ ವಿಸ್ತರಣೆ-ಯಾವೆಲ್ಲಾ ದಾಖಲೆಗಳು ಬೇಕು?-ಇಲ್ಲಿದೆ ಮಾಹಿತಿ
ಪಡಿತರಚೀಟಿ ತಿದ್ದುಪಡಿಗೆ ದಿನಾಂಕ ವಿಸ್ತರಣೆ-ಯಾವೆಲ್ಲಾ ದಾಖಲೆಗಳು ಬೇಕು?-ಇಲ್ಲಿದೆ ಮಾಹಿತಿ ಲೋಕಾಭೆ ಚುನಾವಣೆ ಮುಗಿದ ಬಳಿಕ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಇದೀಗ ಈ ದಿನಾಂಕವನ್ನು ಆಗಸ್ಟ್ 10ರವರೆಗೆ ವಿಸ್ತರಣೆ ಮಾಡಲಾಗಿದೆ. ಹಾಗಾದರೆ ಪಡಿತರ ಚೀಟಿ ತಿದ್ದುಪಡಿಗೆ ಯಾವೆಲ್ಲ ದಾಖಲೆ ಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಸಮಯದ ವಿವರ: ಪಡಿತರ ಚೀಟಿದಾರರು ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆದುಹಾಕುವುದಕ್ಕೆ …
Read More »
Laxmi News 24×7