ಬೆಂಗಳೂರು: ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಬಗೆಯ ಹುಕ್ಕಾ ದಾಸ್ತಾನು, ಮಾರಾಟ, ಸೇವನೆ ಮತ್ತು ಜಾಹೀರಾತು ನಿಷೇಧಿಸಿ ರಾಜ್ಯ ಸರ್ಕಾರ ರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹುಕ್ಕಾ ಬಾರ್ ನಿಷೇಧ ಪ್ರಶ್ನಿಸಿ ಬೆಂಗಳೂರಿನ ಆರ್. ಭರತ್ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ, ಸೋಮವಾರ ತೀರ್ಪು ಪ್ರಕಟಿಸಿತು.
Read More »ಬಿಟ್ ಕಾಯಿನ್ ಹಗರಣ: ‘ತಮ್ಮ ವ್ಯಾಲೆಟ್‌ಗಳಿಗೆ ಕ್ರಿಪ್ಟೋ ಕರೆನ್ಸಿ ವರ್ಗಾಯಿಸಿಕೊಳ್ಳಲು ಶ್ರೀಕಿಗೆ ಡ್ರಗ್ಸ್ ನೀಡಿದ ಪೊಲೀಸರು’
ಬಿಟ್ ಕಾಯಿನ್ ಹಗರಣ: ‘ತಮ್ಮ ವ್ಯಾಲೆಟ್‌ಗಳಿಗೆ ಕ್ರಿಪ್ಟೋ ಕರೆನ್ಸಿ ವರ್ಗಾಯಿಸಿಕೊಳ್ಳಲು ಶ್ರೀಕಿಗೆ ಡ್ರಗ್ಸ್ ನೀಡಿದ ಪೊಲೀಸರು’ ಬೆಂಗಳೂರು: 2020 ರ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ತಮ್ಮ ವ್ಯಾಲೆಟ್‌ಗಳಿಗೆ ಕ್ರಿಪ್ಟೋ ಕರೆನ್ಸಿಯನ್ನು ವರ್ಗಾಯಿಸಿಕೊಳ್ಳಲು ಅಲ್ಪ್ರಜೋಲಮ್(ಕ್ಸಾನಾಸ್ – ಸೈಕೋಟ್ರೋಪಿಕ್ ವಸ್ತು) ಡ್ರಗ್ಸ್ ಅನ್ನು ನೀಡಿದ್ದಾರೆ.
Read More »ಕೇಂದ್ರದಲ್ಲಿ ಈ ಸಲವೂ ಬಿಜೆಪಿ ಸರಕಾರ ರಚನೆ ;ಬಾಲಚಂದ್ರ ಜಾರಕಿಹೊಳಿ
ಗೋಕಾಕ: ಕೇಂದ್ರದಲ್ಲಿ ಈ ಸಲವೂ ಬಿಜೆಪಿ ಸರಕಾರ ರಚನೆ ಆಗಲಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆ ಆದರೆ ಜಗದೀಶ್ ಶೆಟ್ಟರ್ ಅವರಿಗೆ ಮೋದಿ ಅವರು ಉನ್ನತ ಸ್ಥಾನ ನೀಡಲಿದ್ದಾರೆ. ಆಗ ನಾವು ಕೇಂದ್ರದ ಅನೇಕ ಯೋಜನೆಗಳನ್ನು ಹಾಗೂ ಅನೇಕ ಮಹತ್ವದ ಕೆಲಸಗಳನ್ನು ನಮ್ಮ ಕ್ಷೇತ್ರಕ್ಕಾಗಿ ಮಾಡಿಸಬಹುದು. ಹಾಗಾಗಿ ಜಗದೀಶ ಶೆಟ್ಟರ್ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು. ಬುಧವಾರದಂದು …
Read More »ಜಗದೀಶ್ ಶೆಟ್ಟರ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ, : ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಇನ್ನುಳಿದ ಕ್ಷೇತ್ರಗಳಿಗೆ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು.ಹಾಗೆಯೇ ಇದೀಗ ಚಾಲಚಂದ್ರ ಜಾರಕಿಹೊಳಿ ಅವರು ಜಗದೀಶ್ ಶೆಟ್ಟರ್ ಅವರ ಮುಂದಿನ ಸ್ಥಾನದ ಬಗ್ಗೆ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಇನ್ನು …
Read More »ಖಜಾನೆ ಖಾಲಿ ಮಾಡಿದ್ದೇ ಕಾಂಗ್ರೆಸ್ ಸಾಧನೆ: ಎಚ್.ಡಿ.ಕುಮಾರಸ್ವಾಮಿ ಟೀಕೆ
ಕೋಣಂದೂರು: ‘ಅಭಿವೃದ್ಧಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೇ ಗ್ಯಾರಂಟಿಗಳಿಗಾಗಿ ₹52,000 ಕೋಟಿ ಸಾಲ ಮಾಡಿದ್ದೇ ಕಾಂಗ್ರೆಸ್ ಪಕ್ಷದ ಸಾಧನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಇಲ್ಲಿ ಸೋಮವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ರಚನೆಯಾಗಿ 11 ತಿಂಗಳು ಕಳೆದರೂ ಅಭಿವೃದ್ಧಿಗಾಗಿ ಒಂದು ಪೈಸೆಯನ್ನೂ ಕೊಡಲಿಲ್ಲ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವುದು ಇವರ ಸಾಧನೆ. ದಲಿತರಿಗೆ ಮೀಸಲಿದ್ದ ಹಣವನ್ನು ಗ್ಯಾರಂಟಿಗಳಿಗೆ ವಿನಿಯೋಗಿಸುವ …
Read More »ರಾಜಕೀಯದಿಂದ ದೂರ ಸರಿದ್ರಾ ವೀಣಾ ಕಾಶಪ್ಪನವರ್?
ಬಾಗಲಕೋಟೆ: ಬಾಗಲಕೋಟೆ ಕಾಂಗ್ರೆಸ್ (Bagalkot Congress) ಬಿಕ್ಕಟ್ಟಿಗೆ ಇನ್ನು ತೆರೆ ಬಿದ್ದಿಲ್ಲ ಕಾಣುತ್ತಿಲ್ಲ. ನಾಯಕರ ನಡುವಿನ ಸಂಧಾನ ಸಭೆ ವಿಫಲವಾದ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿರುವ ವೀಣಾ ಕಾಶಪ್ಪನವರ್ (Veena Kashappanavar), ರಾಜಕೀಯದಿಂದ ದೂರ ಸರಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಎದುರಾಗಿದೆ.ಏಕೆಂದರೆ ಫೇಸ್‌ಬುಕ್‌ನಲ್ಲಿ ವೀಣಾ ಭಾವನಾತ್ಮಕ ಸಂದೇಶ ನೀಡಿದ್ದು, ಕೊಪ್ಪಳ (Koppala) ಉಸ್ತುವಾರಿ ಕೊಟ್ಟರೂ ಗೈರಾಗಿದ್ದಾರೆ. ವೀಣಾ ಕಾಶಪ್ಪನವರ್ ಪೋಸ್ಟ್ನಲ್ಲಿ ಏನಿದೆ? ಕಣ್ಣು ನಕ್ಕರೂ ಒದ್ದೆಯಾಗುತ್ತದೆ, ಅತ್ತರೂ ಒದ್ದೆಯಾಗುತ್ತದೆ. …
Read More »ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ
ಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರಣಿ ಅವರು ಪ್ರತಿಕ್ರಿಯೆ ನೀಡಿದ್ದು, ಜನರು ತಿಂಗಳಾನುಗಟ್ಟಲೆ ಓಡಾಡಿದರು ವೀಸಾ ಸಿಗುವುದಿಲ್ಲ ಆದರೆ ಪ್ರಜ್ವಲ್ ರೇವಣ್ಣ ಅವರಿಗೆ ಒಂದೇ ದಿನದಲ್ಲಿ ಹೇಗೆ ವೀಸಾ ಸಿಕ್ಕಿತು ಎಂದು ಪ್ರಶ್ನಿಸಿದರು. ಹಾವೇರಿಯಲ್ಲಿ ಈ ಕುರಿತಂತೆ ಮಾತನಾಡಿದ ಅವರು, ಜರ್ಮನಿಗೆ ಹೋಗಲು ಒಂದೇ ದಿನದಲ್ಲಿ ಹೇಗೆ ವೀಸಾ ಸಿಕ್ಕಿತು? ಜನರು ತಿಂಗಳುಗಟ್ಟಲೆ ಓಡಾಡಿದರೂ ವೀಸಾ …
Read More »ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ;
ಬೆಂಗಳೂರು : ರಾಜ್ಯದ ಪ್ರಸ್ತುತ ಕಾಂಗ್ರೆಸ್ ಶಾಸಕರದ್ದು ಎನ್ನಲಾದ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪ್ರಭಾವಿ ಜಿಲ್ಲೆಯ ಶಾಸಕರದ್ದು ಎನ್ನಲಾದ ಈ ವೀಡಿಯೋದಲ್ಲಿ ಮಹಿಳೆಯೊಬ್ಬರ ಜೊತೆ ವೀಡಿಯೋ ಕಾಲ್ ನಲ್ಲಿ ಸಂಭಾಷಣೆ ನಡೆಸಿದ್ದಾಗಿದೆ. ಅಷ್ಟಕ್ಕೂ ಆ ವೀಡಿಯೋದಲ್ಲಿರುವ ಮಹಿಳೆ ಕೂಡಾ ರಾಜಕೀಯ ವ್ಯಕ್ತಿಗಳ ಒಡನಾಟ ಹೊಂದಿದವರಾಗಿದ್ದಾರೆ ಇನ್ನೂ ಈ ಘಟನೆ ವೀಡಿಯೋದಲ್ಲಿ ಇದ್ದಾರೆ ಎನ್ನಲಾದ ಶಾಸಕ ಹಾಗೂ ಮಹಿಳೆ ಯಾರೂ ಹೇಳಿಕೆ ನೀಡಿಲ್ಲ. ಸಧ್ಯ …
Read More »ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
ವಿಜಯಪುರ: ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದರೂ ಆದೇಶ ಪಡೆಯದೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಇಬ್ಬರು ಶಿಕ್ಷಕರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಚುನಾಣಾಧಿಕಾರಿ ಆದೇಶಿಸಿದ್ದಾರೆ. ಈ ಇಬ್ಬರು ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಮಂಗಳವಾರ ಪ್ರತ್ಯೇಕ ಆದೇಶ ಹೊರಡಿಸಿರುವ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಭೂಬಾಲನ್, ಚುನಾವಣೆಯಂಥ ಮಹತ್ವದ ಕರ್ತವ್ಯವಾಗಿದ್ದರೂ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಸಸ್ಪೆಂಡ್ ಮಾಡಿದ್ದಾಗಿ ಆದೇಶದಲ್ಲಿ ವಿವರಿಸಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ಅಬ್ಬಿಹಾಳ ಸರ್ಕಾರಿ ಹಿರಿಯ …
Read More »ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ.4ಕ್ಕೆ ರೇವಣ್ಣ ವಿಚಾರಣೆ
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ(Special investigative team) ಅಧಿಕಾರಿಗಳ ತಂಡ ಇಂದು ಬುಧವಾರ ಹಾಸನ ಜಿಲ್ಲೆಯ ಹೆಚ್ ಡಿ ರೇವಣ್ಣ ನಿವಾಸಕ್ಕೆ ತೆರಳಿ ಸ್ಥಳ ಮಹಜರು ನಡೆಸಲಿದ್ದಾರೆ. ಹಾಸನದಲ್ಲಿರುವ ಹೆಚ್ ಡಿ ರೇವಣ್ಣ ನಿವಾಸ ಮತ್ತು ಫಾರ್ಮ್ ಹೌಸ್ ನಲ್ಲಿ ತಮ್ಮ ವಿರುದ್ಧ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಲೈಂಗಿಕ …
Read More »