ಹುಕ್ಕೇರಿ: ‘ರೈತರಿಗೆ ಅಗತ್ಯವಿರುವ ಕೀಟನಾಶಕ ಔಷಧ ಕೈಗೆಟುಕುವ ದರದಲ್ಲಿ ದೊರೆಯುವ ಸದುದ್ದೇಶದಿಂದ ಕೀಟನಾಶಕ ಔಷಧ ಮಳಿಗೆ ಉದ್ಘಾಟಿಸಲಾಗಿದೆ’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು. ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕೀಟನಾಶಕ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಶೇ30ರಷ್ಟು ರಿಯಾಯಿತಿ ದರದಲ್ಲಿಕೀಟನಾಶಕ ಔಷಧ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು ‘ರೈತರು ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದಾರೆ. ನರೇಗಾ ಯೋಜನೆಯಡಿ ಸರ್ಕಾರ ಕೂಲಿ ಕೆಲಸ ಒದಗಿಸುತ್ತಿದ್ದು, ಹೊಲ-ಗದ್ದೆಗಳಲ್ಲಿ ಕೂಲಿ …
Read More »ರಡ್ಡೆರಹಟ್ಟಿ ಸರ್ಕಾರಿ ಶಾಲೆಗೆ ₹1ಲಕ್ಷ ಬಹುಮಾನ
ಅಥಣಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಆಯ್ದ ಹತ್ತು ತಂಡಗಳು ಉತ್ತಮ ಪ್ರದರ್ಶನ ನೀಡಿ ಸಭಿಕರ ಗಮನ ಸೆಳೆದವು. ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಾಹಸ ಮತ್ತು ಕನ್ನಡ ಚಿತ್ರರಂಗದ ದಿಗ್ಗಜರ ಕಲೆ, ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಉತ್ತಮ ಪ್ರದರ್ಶನ ನೀಡಿದ ರಡ್ಡೆರಹಟ್ಟಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಾಸಕ ಲಕ್ಷ್ಮಣ ಸವದಿ ಘೋಷಿಸಿದ ₹1ಲಕ್ಷ ನಗದು …
Read More »ತಾಯಿ- ಮಕ್ಕಳಿಗೆ ಇನ್ನೂ ಸಿಗದ ಆಸ್ಪತ್ರೆಗಳು
ಬೆಳಗಾವಿ: ಜಿಲ್ಲೆಗೆ ಮಂಜೂರಾದ ಒಟ್ಟು ಏಳು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಇನ್ನೂ ಎರಡು ಆಸ್ಪತ್ರೆಗಳು ಕಾರ್ಯಾರಂಭ ಮಾಡಿಲ್ಲ. ಚಿಕ್ಕೋಡಿ ಹಾಗೂ ಖಾನಾಪುರದದಲ್ಲಿ ಮೂಲಸೌಕರ್ಯಗಳು ಸಿದ್ಧಗೊಂಡರೂ ಸಿಬ್ಬಂದಿ ನೇಮಕ ಹಾಗೂ ಸಣ್ಣಪುಟ್ಟ ಕೆಲಸಗಳಿಂದಾಗಿ ಇನ್ನೂ ಜನರ ಉಪಯೋಗಕ್ಕೆ ಬಂದಿಲ್ಲ. ಉಳಿದಂತೆ, ಗೋಕಾಕದಲ್ಲಿ 100 ಬೆಡ್, ಒಂಟಮೂರಿಯಲ್ಲಿ 30 ಬೆಡ್, ನಿಪ್ಪಾಣಿ 30 ಬೆಡ್, ಸವದತ್ತಿ 60 ಬೆಡ್, ಬೈಲಹೊಂಗಲ 100 ಬೆಡ್‌ನ ಆಸ್ಪತ್ರೆಗಳು ಕೆಲಸ ಆರಂಭಿಸಿವೆ. ಚಿಕ್ಕೋಡಿಯಲ್ಲಿ 100 ಹಾಸಿಗೆ …
Read More »ಬೆಳಗಾವಿ: ಕೆರೆಯಲ್ಲಿ ಮುಳುಗಿ ಬಾಲಕ ಸಾವು
ಎಂ.ಕೆ.ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಪಟ್ಟಣದ ಬಳಿ ಇರುವ ಗದ್ದಿಕೆರೆಯಲ್ಲಿ ಸೋಮವಾರ ಬೆಳಿಗ್ಗೆ ಶಾಲಾ ಬಾಲಕನ ಶವ ಪತ್ತೆಯಾಗಿದೆ. ಎಂ.ಕೆ.ಹುಬ್ಬಳ್ಳಿಯಲ್ಲಿ 9ನೇ ತರಗತಿ ಓದುತ್ತಿದ್ದ ರಿಹಾನ್ ಮುಗುಟಸಾಬ ನಗಾರಸಿ (15) ಮೃತ ಬಾಲಕ. ಭಾನುವಾರ ಶಾಲೆಗೆ ರಜೆ ಇದ್ದುದರಿಂದ ಬಾಲಕ ಕೆರೆಗೆ ಈಜಲು ಹೋಗಿದ್ದ. ಮರಳಿ ಮನೆಗೆ ಬಂದಿರಲಿಲ್ಲ. ಕೆರೆ ದಡದಲ್ಲಿ ಬಾಲಕನ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾದವು. ಅನುಮಾನಗೊಂಡು ಸೋಮವಾರ ಕೆರೆಯಲ್ಲಿ ಹುಡುಕಾಟ ಶುರು ಮಾಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ …
Read More »ರಾಜ್ಯಪಾಲರ ವಿರುದ್ಧ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬೆಳಗಾವಿ: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಬಿಜೆಪಿ ನಾಯಕರು ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳಕರ ಇತರರಿದ್ದರು.
Read More »ರಕ್ಷಾಬಂಧನದ ಇತಿಹಾಸ ಹೇಳಿದ ಸುಧಾಮೂರ್ತಿ; ವಿಡಿಯೋ ನೋಡಿ ನೆಟ್ಟಿಗರು ಕಿಡಿ..
ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಪತ್ನಿ, ರಾಜ್ಯಸಭಾ ಸಂಸೆ ಸುಧಾಮೂರ್ತಿ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗೆ ಸುದ್ದಿಯಲ್ಲಿರುತ್ತಾರೆ. ಪ್ರಸಿದ್ಧ ಬರಹಗಾರರು ಆದ ಸುಧಾಮೂರ್ತಿ ಅವರು ಬಹುಪಾಲು ಸಮಯ ಸಮಾಜಸೇವೆಯಲ್ಲಿ ತೊಡಗಿರುತ್ತಾರೆ. ಇಂದು (ಆಗಸ್ಟ್ 19) ಎಲ್ಲೆಡೆ ರಾಖಿ ಹಬ್ಬದ ಸಂಭ್ರಮ. ಅಣ್ಣ-ತಂಗಿಯರ ಈ ಪವಿತ್ರ ಹಬ್ಬದ ಕುರಿತು ಸುಧಾಮೂರ್ತಿ ಅವರು ಹೇಳಿರುವ ಮಾತುಗಳು ಜಾಲತಾಣದಲ್ಲಿ ವೈರಲ್ ಆಗುತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸುಧಾಮೂರ್ತಿ ಅವರು ರಕ್ಷಾಬಂಧನ ಆಚರಣೆಯ ಮೂಲವನ್ನು …
Read More »ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಸೆಪ್ಟೆಂಬರ್’ನಲ್ಲಿ ಶೇ.3ರಷ್ಟು ‘ತುಟ್ಟಿಭತ್ಯೆ’ ಹೆಚ್ಚಳ
ನವದೆಹಲಿ : ಕೇಂದ್ರ ಸರ್ಕಾರವು ಮುಂದಿನ ತಿಂಗಳು ಶೇಕಡಾ 3ರಷ್ಟು ಡಿಎ ಹೆಚ್ಚಳವನ್ನ ಘೋಷಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ನಲ್ಲಿ ಈ ಶೇಕಡಾ 3ರಷ್ಟು ಹೆಚ್ಚಳದೊಂದಿಗೆ, ಒಟ್ಟು ತುಟ್ಟಿಭತ್ಯೆ ಶೇಕಡಾ 53ಕ್ಕೆ ತಲುಪುತ್ತದೆ. ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಲ್ಲಿಸಲಾದ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (DR)ಗಾಗಿ 18 ತಿಂಗಳ ಬಾಕಿಯನ್ನ ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಇಬ್ಬರು ಸದಸ್ಯರು ಇತ್ತೀಚೆಗೆ ಡಿಎ ಬಾಕಿಯ ಬಗ್ಗೆ ಸರ್ಕಾರದ …
Read More »ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ
ಬೆಳಗಾವಿ: ಯಾವುದೇ ಸೂಚನೆಯನ್ನು ನೀಡದೆ ಬರುವ ಜವರಾಯನ ಅಟ್ಟಹಾಸಕ್ಕೆ ಮಧ್ಯಮ ವಯಸ್ಸಿನವರ ಪ್ರಾಣಪಕ್ಷಿ ಹಾರಿಹೋಗುತ್ತಿದೆ. ಬದುಕು ಹೇಗೆಲ್ಲ ಅಂತ್ಯವಾಗುತ್ತೆ ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಹೃದಯವು ಯಾವ ಕ್ಷಣದಲ್ಲಿ ಕೈಕೊಡುತ್ತೆ ಎಂಬುದು ಊಹಿಸಲು ಆಗುತ್ತಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ (Heart Attack) ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ …
Read More »ಆಗಸ್ಟ್ 21ಕ್ಕೆ ಭಾರತ್ ಬಂದ್: ?ದೇಶಾದ್ಯಂತ ಪ್ರತಿಭಟನೆ ಕಾರಣ ಯಾವ ಸೇವೆ ಅಲಭ್ಯ?
ನವದೆಹಲಿ:ಆಗಸ್ಟ್ 21, 2024 ರ ಬುಧವಾರ ಭಾರತ್ ಬಂದ್ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಚರ್ಚೆ ಭರದಿಂದ ಸಾಗಿದೆ. ‘#21_August_Bharat_Bandh’ ಹ್ಯಾಶ್ ಟ್ಯಾಗ್ ಪ್ರಸ್ತುತ ಟ್ರೆಂಡಿಂಗ್ ನಲ್ಲಿದೆ. ಈ ಹ್ಯಾಶ್ ಟ್ಯಾಗ್ ನೊಂದಿಗೆ ಎಕ್ಸ್ ನಲ್ಲಿ 15.4 ಸಾವಿರ ಪೋಸ್ಟ್ ಗಳನ್ನು ಪೋಸ್ಟ್ ಮಾಡಲಾಗಿದೆ. ಭಾರತ್ ಬಂದ್ ಹಿಂದಿನ ಕಾರಣ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪನ್ನು ವಿರೋಧಿಸಿ ಮೀಸಲಾತಿ …
Read More »ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ, ಸಿಎಂ ಪರ ಶಕ್ತಿ ಪ್ರದರ್ಶನ
ಬೆಂಗಳೂರು: ಮುಡಾ ಪ್ರಕರಣ ದಲ್ಲಿ ಸಿಎಂ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಿಎಂ ಪರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆ. 22ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ, “ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವುದೇ ಪ್ರಮಾದ ಮಾಡಿಲ್ಲ. ಆದರೂ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ. ಈ ಸಂದರ್ಭದಲ್ಲಿ ಸರಕಾರ ಮತ್ತು ಪಕ್ಷ ಒಗ್ಗಟ್ಟು ಪ್ರದರ್ಶಿಸಬೇಕು. ಜತೆಗೆ …
Read More »
Laxmi News 24×7