Breaking News

ಶತಮಾನ ಕಂಡ ಶಾಲೆ ಕಟ್ಟಡ ಧ್ವಂಸ ಮಾಡಿದ ಕಿಡಿಗೇಡಿಗಳು

ಹುಬ್ಬಳ್ಳಿ: ಇಲ್ಲಿನ ಗಿರಣಿಚಾಳದಲ್ಲಿರುವ ಶತಮಾನ ಕಂಡ ಶಾಲೆ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯವಾಗಿದ್ದು, ಜಾಗ ಕಬಳಿಸುವ ಹುನ್ನಾರವಾಗಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಸುಮಾರು 135 ವರ್ಷಗಳ ಇತಿಹಾಸವುಳ್ಳ ಶಾಲೆಯಾಗಿದ್ದು, ಹಳೆ ಕಟ್ಟಡವನ್ನು ಕೆಡವಿದ್ದಾರೆ. ತಡರಾತ್ರಿ ಕಿಡಿಗೇಡಿಗಳು ಕಟ್ಟಡ ಕೆಡವಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಕೆಡವಿರುವ ಕಟ್ಟಡದಲ್ಲಿ 4 ಮತ್ತು 5ನೇ ವರ್ಗದ ತರಗತಿಗಳು ನಡೆಯುತ್ತಿದ್ದವು. ಬಾಗಿಲು ಹಾಗೂ ಗೋಡೆ ಭಾಗ ಕೆಡವಿದ್ದು, …

Read More »

ಅಂಬೇಡ್ಕರ ಭವನವನ್ನು ಸಧ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮೂಡಲಗಿ- ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾಜದ ವಿವಿಧ ಚಟುವಟಿಕೆಗಳಿಗೆ ಸುಸಜ್ಜಿತವಾದ ಅಂಬೇಡ್ಕರ ಭವನವನ್ನು ಸಧ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಕಳೆದ ರವಿವಾರದಂದು ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಡಾ. ಬಿ.ಆರ್. ಅಂಬೇಡ್ಕರ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಅನುಕೂಲವಾಗಲು ಈ ಭವನವನ್ನು ನಿರ್ಮಿಸಿದ್ದು, ಸ್ವಚ್ಛತೆಯ ಜತೆಗೆ ಉತ್ತಮ ಕಾರ್ಯಗಳಿಗೆ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಬಾಂಧವರಲ್ಲಿ …

Read More »

ರಮೇಶ , ಸತೀಶ ಜಾರಕಿಹೊಳಿ, ಸಿಎಂ ಹೆಸರಲ್ಲಿ ಪೊಲೀಸರಿಗೆ ಧಮ್ಕಿ,ಹಾಕಿ ‌ಪೊಲೀಸರ ಅತಿಥಿಯಾದ ಸುನೀಲ್ ದಾಸರ್

ಇವನ್ಯಾರೋ ಗೋಕಾಕ ಹೊಸ ಎಂ ಎಲ್ ಎ ?? ಪೊಲೀಸರನ್ನ ಎತ್ತಂಗಡಿ ಮಾಡಾಕ್ ಹೋಗಿ ತಾನೇ ಅಂದರ್.. ಹಲೋ ನಾನ್ ಗೋಕಾಕ ಎಂ ಎಲ್ ಎ ಮಾತಾಡೋದ್ರಿ ನಾ ಹೇಳಿದಂಗ್ ಕೇಳಲಿಲ್ಲ ಅಂದ್ರ ನಿಮ್ಮನ್ನ ಎತ್ತಂಗಡಿ ಮಾಡಿಸ್ತಿನಿ ಹುಷಾರ್ “ ಎಸ್ಪಿ ಐಜಿಗೂ ಎತ್ತಂಗಡಿಯ ಭಯ ಹುಟ್ಟಿಸಿದ್ದ ಖತರ್ನಾಕ್ ಆಸಾಮಿ ಅಂದರ್ , ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಸಿಎಂ ಹೆಸರಲ್ಲಿ ಪೊಲೀಸರಿಗೆ ಧಮ್ಕಿ . ಎಂ ಎಲ್ ಎ …

Read More »

ದುರ್ಗಾದೇವಿ ಕಳಶಾಭಿಷೇಕ: ಹೊರ ರಾಜ್ಯದ ಭಕ್ತರೂ ಭಾಗಿ

ದುರ್ಗಾದೇವಿ ಕಳಶಾಭಿಷೇಕ: ಹೊರ ರಾಜ್ಯದ ಭಕ್ತರೂ ಭಾಗಿ ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಆಗಸ್ಟ್‌ 15ರಿಂದ ಪ್ರಾರಂಭವಾಗಿರುವ ಮಹಾ ದುರ್ಗಾದೇವಿಗೆ ಸಹಸ್ರ ಕಳಶಾಭಿಷೇಕ, ಶತಚಂಡಿಕಾ ಹೋಮ, ಶ್ರೀ ಚಕ್ರ ಪೂಜೆ ಕಾರ್ಯಕ್ರಮಕ್ಕೆ ರಾಜ್ಯವೂ ಸೇರಿ ಹೊರರಾಜ್ಯಗಳ ಅಧಿಕ ಸಂಖ್ಯೆಯ ಭಕ್ತರು ಶ್ರದ್ಧಾಭಕ್ತಿಯೊಂದಿಗೆ ಭಾಗವಹಿಸಿದ್ದಾರೆ. ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸಾಗಿವೆ. ಜ್ಯೋತಿಷಿ ವಿಷ್ಣು ಪ್ರಸಾದ ಹೆಬ್ಬಾರ ಹಾಗೂ ಅರ್ಚಕ ರಾಜಪ್ಪ ಹೊಸಮನಿ ಅವರ ನೇತೃತ್ವದಲ್ಲಿ ಆಗಸ್ಟ್‌ …

Read More »

ಕಾರ್ಖಾನೆ ಅಗ್ನಿ ದುರಂತ: ಸ್ಪಷ್ಟ ವರದಿಗೆ ಎಸ್.ಕೆ.ವಂಟಿಗೋಡಿ ಸೂಚನೆ

ಬೆಳಗಾವಿ: ‘ತಾಲ್ಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ಈಚೆಗೆ ಸಂಭವಿಸಿದ ಅಗ್ನದುರಂತದಲ್ಲಿ ಮೃತಪಟ್ಟ ಕಾರ್ಮಿಕನ ದೇಹದ ಅವಶೇಷಗಳನ್ನು ಗೌರವದಿಂದ ನೀಡಿಲ್ಲ ಎಂಬ ಸಂಗತಿ ಮಾಧ್ಯಮಗಳಿಂದ ಗೊತ್ತಾಯಿತು. ಇಂಥ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.   ಕಾರ್ಖಾನೆಗೆ ಸೋಮವಾರ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ‘ಘಟನೆ ಕುರಿತು ಪತ್ರಿಕೆಗಳ ವರದಿ …

Read More »

19,969 ಪಡಿತರ ಚೀಟಿ ರದ್ದು: ₹1.89 ಕೋಟಿ ದಂಡ ವಸೂಲಿ

ಬೆಳಗಾವಿ: ಕಳೆದ ಆರು ತಿಂಗಳಿಂದ ಪಡಿತರ ಪಡೆಯದ 19,969 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಅಲ್ಲದೇ, ಸುಳ್ಳು ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ ₹1.89 ಕೋಟಿ ದಂಡ ಕೂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ 557 ಅಂತ್ಯೋಂದಯ, 19,412 ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 19,969 ಪಡಿತರ ಚೀಟಿದಾರರು ಕಳೆದ 6 ತಿಂಗಳು (ನವೆಂಬರ್-2023ರಿಂದ ಏಪ್ರಿಲ್-2024) ರವರೆಗೆ ಪಡಿತರ ಧಾನ್ಯ ಪಡೆದಿಲ್ಲ. ಹೀಗಾಗಿ, ಈ ಎಲ್ಲ ಪಡಿತರ …

Read More »

ರೈತರಿಗೆ ನ್ಯಾನೋ ತಂತ್ರಜ್ಞಾನ ಸೌಲಭ್ಯ: ಜೊಲ್ಲೆ

ನಿಪ್ಪಾಣಿ: ‘ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ(ಬಹುರಾಜ್ಯ)ಯು ವಿವಿಧ ಹಂತಗಳಲ್ಲಿ ನ್ಯಾನೊ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದ್ದು, ಇದರಿಂದ ರೈತರು ಕಡಿಮೆ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಕಬ್ಬು ಉತ್ಪಾದಿಸಬಹುದು. ಅಲ್ಲದೆ ರೈತರಿಗೆ ಹಾಗೂ ಸದಸ್ಯರಿಗೆ ವಿವಿಧ ನ್ಯಾನೋ ತಂತ್ರಜ್ಞಾನದ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.   ವೇದಗಂಗಾ ರೈತ ಉತ್ಪಾದಕರ ಒಕ್ಕೂಟ ಹಾಗೂ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಡ್ರೋನ್ ಮೂಲಕ …

Read More »

ಕಿತ್ತೂರು ಉತ್ಸವಕ್ಕೆ 5 ಕೋಟಿ

ಅಕ್ಟೋಬರ್ 23, 24 ಹಾಗೂ 25 ರಂದು ಜರುಗಲಿರುವ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮಾಜಿಯ ಉತ್ಸವ 2024 ರ ಪೂರ್ವಭಾವಿ ಸಭೆ ಸೋಮವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆಸಲಾಯಿತು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕಂದಾಯ ಸಚಿವ ಕೃಷ್ಣಭೈರೆಗೌಡ ಸಭೆಯಲ್ಲಿ ಈ ಬಾರಿ 200 ನೇ ಅದ್ಧೂರಿ ಕಿತ್ತೂರು ಉತ್ಸವಕ್ಕೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ 5 ಕೋಟಿ ಅನುದಾನ ನೀಡುವಂತೆ ಆದೇಶ ಹೊರಡಿಸಿದ್ದಾರೆ.     ಶಾಸಕ ಬಾಬಾಸಾಹೇಬ ಪಾಟೀಲ …

Read More »

ಜನುಮ- ಜನುಮದ ಅನುಬಂಧ ಈ ರಕ್ಷಾ ಬಂಧನ- ಶಾಸಕ ಬಾಲಚಂದ್ರ ಜಾರಕಿಹೊಳಿ

ಜನುಮ- ಜನುಮದ ಅನುಬಂಧ ಈ ರಕ್ಷಾ ಬಂಧನ- ಶಾಸಕ ಬಾಲಚಂದ್ರ ಜಾರಕಿಹೊಳಿ ದೊಡ್ಮನೆ ಕುಟುಂಬದಲ್ಲಿ ಹರ್ಷೊಲ್ಲಾಸದಿಂದ ನಡೆದ ರಾಖಿ ಹಬ್ಬ ತಮ್ಮ ಸಹೋದರಿ ಲಕ್ಷ್ಮೀ ಅವರಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ- ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನವು ವಿಶೇಷ ಮಹತ್ವವಿದ್ದು, ಸಹೋದರ- ಸಹೋದರಿಯರ ಪ್ರೀತಿ, ವಾತ್ಸಲ್ಯವನ್ನು ಬಿಂಬಿಸುವ ಹಬ್ಬವಾಗಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಸೋಮವಾರದಂದು …

Read More »

ಸಚಿವ ಎಚ್‌ಡಿಕೆ ಮತ್ತು ಸಂಬಂಧಿಕರಿಂದ ಗೋಮಾಳ ಜಾಗ ಕಬಳಿಕೆ; ಹಿರೇಮಠ ಆರೋಪ

ಧಾರವಾಡ: ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಗೋಮಾಳದ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌.ಹಿರೇಮಠ ಆರೋಪಿಸಿದರು.   ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ ಹಾಗೂ ಸಂಬಂಧಿಕ ಡಿ.ಸಿ.ತಮ್ಮಣ್ಣ ಕುಟುಂಬದವ‌ರು ಜಾಗವನ್ನು ಕಬಳಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಂದಾಯ ಇಲಾಖೆಯ ಉನ್ನತಧಿಕಾರಿ 2014 ಆಗಸ್ಟ್‌ …

Read More »