Breaking News

ಬೈಲಹೊಂಗಲ :ನರೇಗಾ ಕೆಲಸಕ್ಕೆ ಹೆಚ್ಚಿನ ಜನರು ಬರುವಂತೆ ಕರೆ- ವಿಜಯ ಪಾಟೀಲ.

ಗ್ರಾಪಂ ಸುತಗಟ್ಟಿ ಮತ್ತು ದೇಶನೂರ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಗಳಿಗೆ ಇಂದು ಸಹಾಯಕ ನಿರ್ದೇಶಕ ವಿಜಯ ಪಾಟೀಲ ಭೇಟಿ ನೀಡಿ. ಹೊಸದಾಗಿ ಸಿಗುವಂತಹ ಕೂಲಿ ಮೊತ್ತ 349/- ಬಗ್ಗೆ ವಿವರಿಸಿದರು ಮತ್ತು ಹಾಜರಾತಿ ಕುರಿತು ವಿವರಿಸಿದರು. ಹಾಜರಾತಿಯಲ್ಲಿ ಪಾರದರ್ಶಕತೆಯ ತರುವ ಸಲುವಾಗಿ ಈಗಾಗಲೇ ಕಳೆದ ಎರಡು ವರ್ಷಗಳಿಂದ ಚಾಲ್ತಿಯಲ್ಲಿರುವ NMMs ಹಾಜರಾತಿಯ ಪರಿಶೀಲನೆ ಮಾಡಿದರು ಇದರಲ್ಲಿ ಕೆಲಸಕ್ಕೆ ಬರುತ್ತೇನೆ ಎಂದ ಕೂಲಿಕಾರರ ಮಾತ್ರ ಕೆಲಸಕ್ಕೆ ಬಂದು ಹಾಜರಾತಿ ಮೂಲಕ ನಿಗಧಿ …

Read More »

ಕುಂಬ ಮೇಳ ಜಾಥಾಗೆ ಚಾಲನೇ ನೀಡಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ

ಕುಂಬ ಮೇಳ ಜಾಥಾಗೆ ಚಾಲನೇ ನೀಡಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಚಿಕ್ಕೋಡಿ ): ಮೇ 07 ರಂದು ಜರುಗಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ಸಧೃಡ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ ಅವರು ಕರೆ ನೀಡಿದರು. ಚಿಕ್ಕೋಡಿ ತಾ.ಪಂ. ಕಚೇರಿ ಆವರಣದಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಕುಂಬ …

Read More »

ಚಿಕ್ಕೋಡಿ. ಅಬ್ಬಬ್ಬಾ ಏನು ಬಿಸಿಲು, ಚಿಕ್ಕೋಡಿ ಉಪವಿಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ಜಾನವಾರುಗಳು ತತ್ತರಿಸಿ ಹೋಗಿವೆ,

ಚಿಕ್ಕೋಡಿ. ಅಬ್ಬಬ್ಬಾ ಏನು ಬಿಸಿಲು, ಚಿಕ್ಕೋಡಿ ಉಪವಿಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ಜಾನವಾರುಗಳು ತತ್ತರಿಸಿ ಹೋಗಿವೆ, ಸುಮಾರು 40* ಕ್ಕೂ ಮೀರಿ ತಾಪಮಾನ ದಾಖಲಾಗುತ್ತಿದೆ, ಮಳೆಯ ಸುಳಿವೂ ಸಹ ಇತ್ತ ಕಡೆಗೆ ಇಲ್ಲ, ಇಂತಹ ಪರಿಸ್ಥಿತಿಯಲ್ಲಿ ನಿಪ್ಪಾಣಿ ತಾಲೂಕಿನ, ಮಾಂಗೂರ ಗ್ರಾಮದ ರೈತರಾದ ಸ್ವಪ್ನಿಲ ಮತ್ತು ಸಂತೋಷ ಮಾನಕಾಪುರೆ ಇವರು, ದನ-ಕರಗಳ ಹಿತದೃಷ್ಟಿಯಿಂದ ಗೊಟಗಿಯಲ್ಲಿ ತಂಪಾದ ಶಾವರ ನಿರ್ಮಿಸಿ, ದನ-ಕರಗಳ ಮೇಲೆ ಹನಿ ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿ …

Read More »

ಮೃಣಾಲ್‌ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪಸಿಕ್ಕಿಬಿದ್ದಿದ್ದಬೆಂಬಲಿಗರು

ಬೆಳಗಾವಿ:- ಮೃಣಾಲ್‌ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಐವರನ್ನ ಪೊಲೀಸರಿಗೆ ಬಿಜೆಪಿ ಕಾರ್ಯಕರ್ತರು ಒಪ್ಪಿಸಿದ್ದಾರೆ. ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪ ಕೇಳಿ ಬಂದಿದೆ.ಅಂಕಲಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಒಂದು ಸಾವಿರ ರೂಪಾಯಿ ಹಂಚುತ್ತಿದ್ದ ವೇಳೆ ಹಣದ ಸಮೇತ ನಾಲ್ವರು ಹೆಬ್ಬಾಳ್ಕರ್ ಬೆಂಬಲಿಗರು ಸಿಕ್ಕಿಬಿದ್ದಿದ್ದಾರೆ. ಹಣ ಹಂಚುವ ವಿಚಾರ ತಿಳಿದು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಬರುತ್ತಿದ್ದಂತೆ ಓಡಿ ಹೋಗಲು ಯತ್ನಿಸಿದ್ದಾರೆ. …

Read More »

ಕುಮಾರಸ್ವಾಮಿಯನ್ನು ಭೇಟಿಯಾಗಲು ಒಪ್ಪದ ಅಮಿತ್ ಶಾ; ಹೋಟೆಲ್‌ಗೆ ಬಂದು ವಾಪಸ್ ಹೋದ ಎಚ್ ಡಿ ಕೆ

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊಗಳು, ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ, ಜೆಡಿಎಸ್‌ ನಾಯಕ ಹೆಚ್‌.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ(SIT) ಅಧಿಕಾರಿಗಳು ವಶಪಡಿಸಿಕೊಂಡಿರರುವ ವಿಚಾರ ಮೈತ್ರಿ ಪಕ್ಷ ಬಿಜೆಪಿಗೆ ತೀವ್ರ ಮುಜುಗರ ತಂದಿದೆ.ಈಗಾಗಲೇ ಈ ಪ್ರಕರಣದಿಂದ ಅಂತರ ಕಾಪಾಡಿಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಖಡಕ್‌ ಸೂಚನೆ ನೀಡಿದೆ. ಇದೀಗ ಸ್ವತಃ ಕೇಂದ್ರ ಗೃಹ ಸಚಿವ …

Read More »

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಹುಣಸೂರು: ಶಾಸಕ ಎಚ್‌.ಡಿ.ರೇವಣ್ಣನ ಕಡೆಯವರು ಅಪಹರಿಸಿದ್ದಾರೆ ಎನ್ನಲಾಗಿದ್ದ ಮಹಿಳೆಯನ್ನು ಎಸ್‌ಐಟಿ ತಂಡ ಪತ್ತೆ ಮಾಡಿದೆ. ಪ್ರಕರಣದ ಬೆನ್ನತ್ತಿದ ಎಸ್‌ಐಟಿ ತಂಡ ಆಕೆಗೆ ಎಚ್‌.ಡಿ.ರೇವಣ್ಣನವರ ಬಳಿ ಈ ಹಿಂದೆ ಆಪ್ತ ಕಾರ್ಯದರ್ಶಿಯಾಗಿದ್ದ ಹುಣಸೂರು ತಾಲೂಕಿನ ಕಾಳೇನ ಹಳ್ಳಿಯ ರಾಜಗೋಪಾಲರ ತೋಟದ ಮನೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂಬ ಸುಳಿವಿನಂತೆ, ಶುಕ್ರವಾರ ಮಧ್ಯರಾತ್ರಿ 20 ಮಂದಿಯ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿತು.ಆದರೆ ಆಕೆಯ ಸುಳಿವು ಸಿಕ್ಕಿರಲಿಲ್ಲ. ಶನಿವಾರವೂ ತೋಟದಲ್ಲಿ ಬೆಳ್ಳಂ ಬೆಳಗ್ಗೆ ತೀವ್ರ …

Read More »

ಅರಣ್ಯದಲ್ಲಿ ಅರೆಬೆಂದ ಮಹಿಳೆ ಶವ

ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದ ಸಮೀಪದ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದ ಅರೆಬೆಂದ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಶವವನ್ನು ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿ ವೀಣಾ (22) ಅವರದ್ದು ಎಂದು ಗುರುತಿಸಲಾಗಿದೆ.ಮಹಿಳೆಯ ಗಂಡ ರವಿಚಂದ್ರ ತಾನೇ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ಮಹಿಳೆಯೊಂದಿಗೆ ರವಿಚಂದ್ರ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದೊಂದಿಗೆ ಪತ್ನಿ ವೀಣಾ ಸದಾ ಜಗಳ ತೆಗೆಯುತ್ತಿದ್ದಳು. ಇದರಿಂದ ಬೇಸತ್ತ …

Read More »

6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

ದಾಂಡೇಲಿ: ಗಂಡ-ಹೆಂಡತಿಯ ಜಗಳದಿಂದಾಗಿ 6 ವರ್ಷದ ಗಂಡು ಮಗುವೊಂದನ್ನು ನಾಲಾಕ್ಕೆ ಬಿಸಾಕಿದ ಅಮಾನವೀಯ ಘಟನೆ ಮೇ.4ರ ಶನಿವಾರ ರಾತ್ರಿ ದಾಂಡೇಲಿ ತಾಲೂಕಿನ ಹಾಲಮಡ್ಡಿ ಎಂಬಲ್ಲಿ ನಡೆದಿದೆ. ಹಾಲಮಡ್ಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರವಿಕುಮಾರ್ ಶೆಳ್ಳೆ ಮತ್ತು ಸಾವಿತ್ರಿ ದಂಪತಿಗಳು ಪರಸ್ಪರ ಜಗಳ‌ ಮಾಡಿಕೊಂಡಿದ್ದಾರೆ.ಜಗಳದಿಂದ ಮಾನಸಿಕವಾಗಿ‌ ನೊಂದ ಸಾವಿತ್ರಿ 6 ವರ್ಷದ ಮಗು ವಿನೋದ್ ನನ್ನು ಅಲ್ಲೆ ಹತ್ತಿರದಲ್ಲಿರುವ ದೊಡ್ಡ ನಾಲಾಕ್ಕೆ ಎಸೆದು ಬಂದಿದ್ದಾಳೆ. ಸ್ವಲ್ಪ ಹೊತ್ತಿನ‌ ಬಳಿಕ ಈ ಘಟನೆಯಿಂದ ಮಾನಸಿಕವಾಗಿ …

Read More »

ದುಬೈನ ಅಪಾರ್ಟ್ ಮೆಂಟ್ ನಲ್ಲಿ ‘ಪ್ರಜ್ವಲ್ ರೇವಣ್ಣ’ ವಾಸ್ತವ್ಯ!

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ ಅವರು ಸದ್ಯ ದುಬೈನ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ದುಬೈನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ್ತವ ಹೂಡಿದ್ದಾರೆ.ದುಬೈನಲ್ಲಿ ಕೇರಳ ಮೂಲದ ವ್ಯಕ್ತಿಯ ಅಪಾರ್ಟ್ಮೆಂಟ್ ನಲ್ಲಿ ಪ್ರಜ್ವಲ್ ರೇವಣ್ಣ ವಾಸ್ತವ್ಯ ಹೂಡಿದ್ದಾರೆ ಎಂದು ತಿಳಿದುಬಂದಿದೆ.ರಾತ್ರಿ ಬೆಂಗಳೂರಿಗೆ ಬಂದು ನಾಳೆ ಎಸ್‌ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.   …

Read More »

ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮ ; ಯುವ ನಾಯಕ ಸಂತೋಷ ಜಾರಕಿಹೊಳಿ ಅವರಿಂದ ಉದ್ಘಾಟನೆ

ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮ ; ಯುವ ನಾಯಕ ಸಂತೋಷ ಜಾರಕಿಹೊಳಿ ಅವರಿಂದ ಉದ್ಘಾಟನೆ ಗೋಕಾಕ : ತಾಲೂಕಿನ ಕನಸಗೇರಿ ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಯುವ ನಾಯಕ ಸಂತೋಷ ಜಾರಕಿಹೊಳಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಹ.ಬ.ಪ ಅದೀಕರಾವ್ ಪಾಟೀಲ, ನಾಗಪ್ಪ ಎಳಿಗಾರ, ಮಹಾದೇವ ಗಡ್ಢಿಹೊಳಿ, ಅರ್ಜುನ್ ಬೆಕ್ಕನ್ನವರ, ವಿರೂಪಾಕ್ಷಿ ಬಡಿಗೇರ, ಮಂಜುನಾಥ ಶಿಂದಿಗಾರ, ನಾಗಪ್ಪ …

Read More »