Breaking News

ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವ

ಬಾಗೇಪಲ್ಲಿ: ಪಟ್ಟಣದ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ರಾಘವೇಂದ್ರಸ್ವಾಮಿಯ 353ನೇ ಆರಾಧನ ಮಹೋತ್ಸವ ಮೂರು ದಿನಗಳ ಕಾಲ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ನಡೆಯಿತು. ಪಟ್ಟಣದ ಮುಖ್ಯರಸ್ತೆಯಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ತಳಿರು ತೋರಣಗಳಿಂದ ಹಾಗೂ ವಿದ್ಯೂತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು.   ಆರಾಧನಾ ಮಹೋತ್ಸವದ ಅಂಗವಾಗಿ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು. ರಾಘವೇಂದ್ರಸ್ವಾಮಿ ಮಠದ ಸುತ್ತ ಪ್ರಾಕಾರ ರಥೋತ್ಸವ, ತೊಟ್ಟಿಲಸೇವೆ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ …

Read More »

ಮಳೆಗೆ ಕೊಚ್ಚಿಹೋದ ಬಿ.ಯದ್ಲಾಪುರು ರಸ್ತೆ

ರಾಯಚೂರು: ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಮಳೆ ಅಬ್ಬರಿಸಿದರೆ, ಗುರುವಾರ ಸಾಧಾರಣ ಮಳೆಯಾಗಿದೆ. ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಯದ್ಲಾಪುರು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಹಳ್ಳ ಉಕ್ಕಿ ಹರಿದು ರಸ್ತೆ ಕೊಚ್ಚಿಹೋಗಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.   ಗ್ರಾಮಸ್ಥರು ನಿತ್ಯ ಇದೇ ರಸ್ತೆಯ ಮೂಲಕ ಗಿಲ್ಲೇಸೂಗುರು, ರಾಯಚೂರು, ಮಂತ್ರಾಲಯ ಕಡೆ ಕೆಲಸ ಕಾರ್ಯಗಳಿಗೆ ಹೋಗುತ್ತಾರೆ. ಗ್ರಾಮದ 50 ವಿದ್ಯಾರ್ಥಿಗಳು ಬೇರೆ ಗ್ರಾಮಗಳಲ್ಲಿರುವ ಶಾಲೆಗಳಿಗೆ …

Read More »

ರಾಜ್ಯಕ್ಕೆ ಅಕ್ಕಿ ಪೂರೈಸಲು ಕೇಂದ್ರದ ಒಪ್ಪಿಗೆ

ಬೆಂಗಳೂರು:ರಾಜ್ಯಕ್ಕೆ ಪ್ರತಿ ತಿಂಗಳು ಕೆಜಿಗೆ 28 ರೂ.ನಂತೆ 2.36 ಲಕ್ಷ ಮೆಟ್ರಿಕ್​ ಟನ್​ ಅಕ್ಕಿಯನ್ನು 2025ರ ಮಾರ್ಚ್​ವರೆಗೆ ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದ್ದು, ಬಿಪಿಎಲ್​ ಕಾರ್ಡ್​ನ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಆಸೆ ಈಡೇರುವ ಕಾಲ ಸನ್ನೀಹಿತವಾಗಿದೆ.   ಆಹಾರ ಇಲಾಖೆ ಕಳುಹಿಸಿರುವ ಪ್ರಸ್ತಾವನೆಗೆ ಭಾರತೀಯ ಆಹಾರ ನಿಗಮ ( ಎಫ್​​​ಸಿಐ) ಒಪ್ಪಿಗೆ ಕೊಟ್ಟಿದೆ. ಹೀಗಾಗಿ, ಶ್ರೀದಲ್ಲೇ ಈ ಯೋಜನೆಯಡಿ ಫಲಾನುಭವಿಗಳಿಗೆ ಹಣ …

Read More »

ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ‘ಸಿದ್ದರಾಮಯ್ಯ’ ಬೆನ್ನಿಗೆ ನಿಂತಿದ್ದೇವೆ: DKS

ಬೆಂಗಳೂರು : “ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರ ತೀರ್ಮಾನವನ್ನು ಖಂಡಿಸಲಾಯಿತು ಹಾಗೂ ಎಲ್ಲಾ ಶಾಸಕರು ಸರ್ವಾನುಮತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲಕ್ಕೆ ನಿಲ್ಲುವ ನಿರ್ಣಯ ತೆಗೆದುಕೊಳ್ಳಲಾಯಿತು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆ ನಂತರ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಯಾವುದೇ ಪ್ರಾಥಮಿಕ ತನಿಖೆ ನಡೆಯದೇ ಮುಖ್ಯಮಂತ್ರಿಗಳ ವಿರುದ್ಧ ಸೆಕ್ಷನ್ 17 (ಎ) ಅಡಿಯಲ್ಲಿ …

Read More »

ಮುಂದಿನ 4 ದಿನ ಕರಾವಳಿ, ಉ.ಕ.ದಲ್ಲಿ ಮಳೆ

ಬೆಂಗಳೂರು: ದಕ್ಷಿಣ ಒಳನಾಡು, ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ತುಸು ಕುಂಠಿತವಾಗಿರುವ ಮಳೆ, ಕರಾವಳಿ, ಉತ್ತರ ಒಳನಾಡಿನಲ್ಲಿ ಮುಂದಿನ ನಾಲ್ಕೈದು ದಿನ ಬಿರುಸಾಗಿ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಚಿಕ್ಕಮಗಳೂರಿನ ಮೂಡಗೆರೆ, ದಾವಣಗೆರೆ, ಗದಗ, ಹಾವೇರಿಯ ಹನುಮಾನಮಟ್ಟಿ, ಶಿವಮೊಗ್ಗದ ಆಗುಂಬೆ, ಯಾದಗಿರಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಗುರುವಾರ ವರ್ಷಧಾರೆಯಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಆ.23ರಿಂದ ಆ.25ರವರೆಗೆ, ಬಾಗಲಕೋಟೆ, ಬೆಳಗಾವಿ, ಬೀದರ್​, ವಿಜಯಪುರದಲ್ಲಿ ಆ.23ರಂದು …

Read More »

ವೈದ್ಯಕೀಯ ಕೇಸ್​ ಅಂತೇಳಿ ಅಕ್ರಮವಾಗಿ 46 ಬಿಪಿಎಲ್​ ಕಾರ್ಡ್​ ಕೊಟ್ಟ ಆಹಾರ ಶಿರಸ್ತುದಾರ

ಬೆಂಗಳೂರು:ಹೊಸ ಕಾರ್ಡ್​ಗಾಗಿ ಅರ್ಜಿದಾರರು 3 ವರ್ಷದಿಂದ ಜಾತಕಪಕ್ಷಿಯಂತೆ ಕಾಯುತ್ತಿರುವ ನಡುವೆಯೂ ಅರ್ಹತೆ ಹೊಂದಿಲ್ಲದ 46 ಮಂದಿಗೆ ಅಕ್ರಮವಾಗಿ ಬಿಪಿಎಲ್​ ಕಾರ್ಡ್​ ಮಂಜೂರು ಮಾಡಿರುವುದು ಆಹಾರ ಇಲಾಖೆಯಲ್ಲಿ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಆಹಾರ ಶಿರಸ್ತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ಜಿ. ತಿಮ್ಮಯ್ಯ ಎಂಬುವರು, ಲಂಚ ಪಡೆದು ವಿಶೇಷ ‘ವೈದ್ಯಕಿಯ ಕೇಸ್​’ ವಿನಾಯಿತಿ ದುರ್ಬಳಕೆ ಮಾಡಿಕೊಂಡು ಅನಧಿಕೃತವಾಗಿ 46 ಬಿಪಿಎಲ್​ ಚೀಟಿ ಕೊಟ್ಟಿರುವುದು ಚಿಕ್ಕಮಗಳೂರು ಜಿಲ್ಲಾಧಿಕಾರಿ, ಆಹಾರ ಇಲಾಖೆ ಆಯುಕ್ತರಿಗೆ ಕೊಟ್ಟಿರುವ ವರದಿಯಲ್ಲಿ …

Read More »

ಜೈಲಲ್ಲಿ ‘ನಟ ದರ್ಶನ್’ ಸ್ಥಿತಿ ಕಂಡು ಕಣ್ಣೀರಿಟ್ಟ ರಚಿತಾ ರಾಮ್

ಬೆಂಗಳೂರು: ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ. ಆದರೇ ಎನ್ನುತ್ತಲೇ ನಟಿ ರಚಿತಾ ರಾಮ್ ಅವರು ಜೈಲಲ್ಲಿ ನಟ ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟರು. ಈ ಮೂಲಕ ಭಾವುಕರಾದರು. ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನಟಿ ರಚಿತಾ ರಾಮ್ ತೆರಳಿ, ನಟ ದರ್ಶನ್ ಭೇಟಿಯಾದರು. ಅವರ ಆರೋಗ್ಯ ವಿಚಾರಿಸಿ, ಮಾತನಾಡಿಕೊಂಡ ಬಂತ ನಂದ್ರ, ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ನಟಿ ರಚಿತಾ ರಾಮ್ ಎಂಬುದಾಗಿ ಗುರುತಿಸಿಕೊಳ್ಳಲು ನಟ ದರ್ಶನ್ …

Read More »

ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಬಿಜೆಪಿ ಕಾರ್ಯಕರ್ತರ ಆಗ್ರಹ

ಬೆಳಗಾವಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮತ್ತು ಮಹಾನಗರ ಘಟಕಗಳ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ …

Read More »

: ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ(ಹೆಸ್ಕಾಂಗೆ) ಈ ಬಾರಿ ಮಳೆಗಾಲದಲ್ಲಿ ₹11.29 ಕೋಟಿ ನಷ್ಟ

ಬೆಳಗಾವಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ(ಹೆಸ್ಕಾಂಗೆ) ಈ ಬಾರಿ ಮಳೆಗಾಲದಲ್ಲಿ ₹11.29 ಕೋಟಿ ನಷ್ಟವಾಗಿದೆ. ಹಾನಿಗೀಡಾದ ವಿದ್ಯುತ್‌ ಪರಿಕರಗಳ ದುರಸ್ತಿ ಕಾರ್ಯ ನಡೆದಿದೆ. 2019ರಲ್ಲಿ ಭೀಕರ ಪ್ರವಾಹದಿಂದ ಹೆಸ್ಕಾಂ ತತ್ತರಿಸಿತ್ತು. ಆಗ ಬೆಳಗಾವಿ ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿತ್ತು. 5 ಸಾವಿರ ವಿದ್ಯುತ್‌ ಪರಿವರ್ತಕಗಳು ನೀರಲ್ಲಿ ಮುಳುಗಿದ್ದವು. ಈ ಬಾರಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ …

Read More »

ಸರ್ಕಾರದ ಸೌಲಭ್ಯಕ್ಕಾಗಿ ಒಗ್ಗಟ್ಟಾಗಿ: ಶೆಟ್ಟರ್‌

ರಾಮದುರ್ಗ: ‘ವೀರಶೈವ ಲಿಂಗಾಯತ ಒಳಪಂಗಡಗಳು ಸಮಾಜದ ಪ್ರತಿಭಾವಂತರಿಗೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ಇಲ್ಲಿನ ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದ ಸೌಲಭ್ಯಕ್ಕಾದರೂ ಲಿಂಗಾಯತ ಸಮಾಜವನ್ನು ಒಟ್ಟಾಗಿಸುವ ಕಾರ್ಯ ಮಾಡಬೇಕು’ ಎಂದರು.   ‘ರಾಜ್ಯದಲ್ಲಿ ಬಣಜಿಗ ಸಮಾಜದ ಎಲ್ಲ ತಾಲ್ಲೂಕು ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ ರಾಜ್ಯ …

Read More »