ಮುಧೋಳ: ಘಟಪ್ರಭಾ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ನೆರವಾಗಬೇಕಿದ್ದ ಕಾಳಜಿ ಕೇಂದ್ರಗಳು ಸಂತ್ರಸ್ಥರ ಹೊಟ್ಟೆ ತುಂಬಿಸುತ್ತಿಲ್ಲ. ಅರೆಹೊಟ್ಟೆ ಊಟ ತಡೆಯದೆ ಸಂತ್ರಸ್ಥರು ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಬಳಕೆ ಮಾಡಿ ಹಚ್ಚಿನ ಆಹಾರ ತಯಾರಿಸುತ್ತಿದ್ದಾರೆ. ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಆರಂಭಿಸಿರುವ ಬಿ.ಬಿ. ಮುಧೋಳ ಶಾಲೆಯಲ್ಲಿನ ಸಂತ್ರಸ್ಥರು ತಮ್ಮ ಅಗತ್ಯ ಅಡುಗೆಗಾಗಿ ಕಾಳಜಿ ಕೇಂದ್ರದಲ್ಲಿಯೇ ಗ್ಯಾಸ್ ಒಲೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎರಡು ಚಪಾತಿ ಸಾಲಲ್ಲ : ಹಳ್ಳಿಗಾಡಿನ ರೈತಾಪಿ ವರ್ಗಕ್ಕೆ ಹೊಟ್ಟೆ ತುಂಬಾ ರೊಟ್ಟಿ ತಿಂದಾಗ …
Read More »ಗುಡ್ಡ ಕುಸಿತದಿಂದ ಸ್ಥಗಿತಗೊಂಡ ಅಂಕೋಲಾ – ಕುಮಟಾ ರಾ.ಹೆ 66 ಪುನರಾರಂಭ
ಅಂಕೋಲಾ: ಶಿರೂರು ಬಳಿ ಗುಡ್ಡ ಕುಸಿದ ಪರಿಣಾಮ ಕೆಲ ದಿನಗಳಿಂದ ವಾಹನ ಸಂಚಾರ ಬಂದ್ ಆಗಿದ್ದ ರಾಷ್ಟ್ರೀಯ ಹೆದ್ದಾರಿ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಜುಲೈ 16ರಂದು ಶಿರೂರು ಬಳಿ ಹೆದ್ದಾರಿಯಲ್ಲಿ ಭೀಕರವಾಗಿ ಗುಡ್ಡಕುಸಿತ ಉಂಟಾಗಿ ಮಂಗಳೂರು – ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಹೆದ್ದಾರಿಯ ಮಧ್ಯೆ ಮಣ್ಣಿನ ರಾಶಿ ಬಿದ್ದು ಮತ್ತು ,11 ಜನ ಕಣ್ಮರೆಯಾಗಿದ್ದರು. ಅದರಲ್ಲಿ 8 ಜನರ ಮೃತದೇಹ ದೊರೆತಿತ್ತು. ಇನ್ನುಳಿದವರಿಗಾಗಿ …
Read More »ಸೋರುತ್ತಿರುವ ದಾಂಡೇಲಿಯ ಸಾರಿಗೆ ಬಸ್ ನಿಲ್ದಾಣ:
ದಾಂಡೇಲಿ : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಚಾಪನ್ನ ಮೂಡಿಸುತ್ತಿರುವ ದಾಂಡೇಲಿ ನಗರದ ಕೇಂದ್ರ ಬಸ್ ನಿಲ್ದಾಣ ಮಾತ್ರ ಸೋರುವ ಮೂಲಕ ಎಲ್ಲರ ಗಮನ ಸೆಳೆಯತೊಡಗಿದೆ. ಸಾರಿಗೆ ಬಸ್ ನಿಲ್ದಾಣದ ಒಳಗಡೆ ಛತ್ರಿ ಬಿಡಿಸಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಚಾರಿ ನಿಯಂತ್ರಕರ ಕೊಠಡಿಯಲ್ಲಂತೂ ನೀರು ತುಂಬಿಕೊಂಡಿರುತ್ತದೆ. ನಿಲ್ದಾಣದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಂತೂ ನೀರು ನಿಂತಿರುವುದರಿಂದ ವಿಶ್ರಾಂತಿ ಮಾಡಲು ಹೋದವರಿಗೆ ವಾಂತಿ ಬರುವಂತಹ ಸ್ಥಿತಿಯಿದೆ. ಬಸ್ ನಿಲ್ದಾಣದ ಗೋಡೆಗಳು ಅಲ್ಲಲ್ಲಿ ಬಿರುಕು …
Read More »JDS ಅಸ್ತಿತ್ವವನ್ನು ಬಿಜೆಪಿ ಕಿತ್ತುಕೊಳ್ಳಲು ಹೇಗೆ ಸಾಧ್ಯ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅವರ ಅಸ್ತಿತ್ವವನ್ನು ಕಿತ್ತುಕೊಳ್ಳಲು ಬಿಜೆಪಿಗೆ ಹೇಗೆ ಸಾಧ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬಿಜೆಪಿ ಪಾದಯಾತ್ರೆ ವಿಚಾರದಲ್ಲಿ ಮೈತ್ರಿಯಲ್ಲಿ ಅಪಸ್ವರ ಮೂಡಿರುವ ಬಗ್ಗೆ ಗುರುವಾರ ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ “ಕುಮಾರಸ್ವಾಮಿ ಆಗಲಿ, ನಾನಾಗಲಿ, ಬಿಜೆಪಿಯವರಾಗಲಿ ಎಲ್ಲರೂ ಅವರವರ ಪಕ್ಷದ ರಾಜಕಾರಣ ಮಾಡುತ್ತಾರೆ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಹಾಗೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ. …
Read More »ವಿವಸ್ತಗೊಳಿಸಿ ಅಮಾನುಷ ಹಲ್ಲೆ: ಐವರು ಮಂಗಳಮುಖಿಯರ ಬಂಧನ
ವಿಜಯಪುರ : ಹೆಣ್ಣಾಗಿ ಜನಿಸಿ ಗಂಡಾಡಿ ಪರಿವರ್ತನೆಗೊಂಡಿದ್ದ ವ್ಯಕ್ತಿಯನ್ನು ಹಾಡುಹಗಲೆ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಕ್ಕಾಗಿ ಪ್ರಕಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿತ್ತು. ಇದರಿಂದ ಎಚ್ಚತ್ತ ಪೊಲೀಸರು ಬಾಧಿತನಿಂದ ದೂರು ಪಡೆದು, ಕೃತ್ಯ ನಡೆಸಿದ ಐವರು ಮಂಗಳಮುಖಿಯರ ವಿರುದ್ಧ ದೂರು ದಾಖಲಿಸಿಕೊಂಡು, ಬಂಧಿಸಿದ್ದಾರೆ. ಇದೀಗ ಇಡೀ ಪ್ರಕರಣ ‘ನಾನವಳಲ್ಲ’ ಎಂಬ ಕಥೆಗೆ ತಿರುಗಿದೆ. ನಗರದ ಬಸ್ ನಿಲ್ದಾಣದ ಪರಿಸರದಲ್ಲಿ …
Read More »ಕರ್ನಾಟಕ ರಾಜಕಾರಣಲ್ಲಿ ಶಕುನಿ ರಾಜಕೀಯ ಜಾಸ್ತಿಯಾಗುತ್ತಿದೆ: ಹೆಬ್ಬಾಳಕರ
ಬೆಳಗಾವಿ: ಕರ್ನಾಟಕ ರಾಜಕಾರಣಲ್ಲಿ ದಿನದಿಂದ ದಿನಕ್ಕೆ ಶಕುನಿ ರಾಜಕೀಯ ಜಾಸ್ತಿಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು. ಸವದತ್ತಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೆಲ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ವೈಮನಸ್ಸು ತಂದಿಡುವುದೇ ಕೆಲಸವಾಗುತ್ತಿದೆ ಎಂದು ಕಿಡಿಕಾರಿದರು. ರಾಜ್ಯಾಧ್ಯಕ್ಷರಿಂದ ಒಳ ಒಪ್ಪಂದದ ರಾಜಕೀಯ ನಡೆಯುತ್ತಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್ ಅವರ ಬಗ್ಗೆ …
Read More »ಇಬ್ಬರು ಬೈಕ್ ಕಳ್ಳರ ಬಂಧನ; 11 ಬೈಕ್ ಪೊಲೀಸರ ವಶಕ್ಕೆ
ಚನ್ನಮ್ಮನ ಕಿತ್ತೂರು : ಚನ್ನಮ್ಮನ ಕಿತ್ತೂರು, ಸವದತ್ತಿ, ಖಾನಾಪುರ,ಬೈಲಹೊಂಗಲ ಸೇರಿ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಗಳನ್ನು ಚನ್ನಮ್ಮನ ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಚನ್ನಮ್ಮನ ಕಿತ್ತೂರು ತಾಲೂಕಿನ ದೇಮಟ್ಟಿ ಗ್ರಾಮದ ಪುಂಡಲೀಕ ಸಿದ್ದಪ್ಪ ಕುರಿ (37) ಹಾಗೂ ಸುಲೇಮಾನ ರೆಹಮಾನಸಾಬ ಹವಾಲ್ದಾರ್(30) ಆರೋಪಿಗಳು. ಬೈಕ್ ಕಳ್ಳತನ ಮಾಡಿ ಬೇರೆ ಬೇರೆ ಗ್ರಾಮಗಳಲ್ಲಿ ಮಾರಾಟ ಮಾಡಿದ್ದ ಪ್ರಕರಣವನ್ನು ಬೆನ್ನತ್ತಿದ ಚನ್ನಮ್ಮನ ಕಿತ್ತೂರು ಪೊಲೀಸರು ಆರೋಪಿಗಳಿಂದ ವಿವಿಧ ಕಂಪನಿಯ ಸುಮಾರು …
Read More »ಭರ್ತಿಯಾಗುವ ಹಂತ ತಲುಪಿದ ಮಲಪ್ರಭಾ ಜಲಾಶಯ
ಬೆಳಗಾವಿ: ಖಾನಾಪುರ ತಾಲೂಕಿನ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಒಟ್ಟು 2079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2075.85 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಈಗ 24400 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವದರಿಂದ ಜಲಾಶಯದ ನೀರಿನ ಮಟ್ಟ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಕ್ರಮೇಣ 15 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ …
Read More »ಅಂಗನವಾಡಿಗಳಿಗೂ ಹೈಟೆಕ್ ಸ್ಪರ್ಶ-ಸಚಿವೆ ಹೆಬ್ಬಾಳಕರ
ಬೆಳಗಾವಿ: ದೇಶ ಬೆಳೆಯುತ್ತಿದೆ; ರಾಜ್ಯವೂ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಹಾಗೆಯೇ ನಮ್ಮ ಅಂಗನವಾಡಿಗಳೂ ಉನ್ನತೀಕರಣ ಆಗಬೇಕೆಂಬ ಆಶಯದಿಂದ ನಮ್ಮ ಇಲಾಖೆ ಅಂಗನವಾಡಿಗಳನ್ನು ಆಧುನೀಕರಣಗೊಳಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಹಾಗೂ ವಿಶೇಷಚೇತನರ ಇಲಾಖೆ ವತಿಯಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ಇದು ಪೈಪೋಟಿ …
Read More »ಕಂಚು ಗೆದ್ದ ಸ್ವಪ್ನಿಲ್‌ಗೆ ₹1 ಕೋಟಿ ಬಹುಮಾನ ಘೋಷಿಸಿದ ಸಿಎಂ ಶಿಂದೆ
ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಳೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ₹1 ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ. ಕುಸಳೆ ಅವರು 50 ಮೀಟರ್ ಶೂಟಿಂಗ್ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರು ಪದಕಗಳು ಒಲಿದಂತಾಗಿದೆ. ಕುಸಳೆ ಅವರ ತಂದೆ ಮತ್ತು ತರಬೇತುದಾರರೊಂದಿಗೆ ಸಿಎಂ ಮಾತುಕತೆ ನಡೆಸಿದ್ದಾರೆ, ಜತೆಗೆ …
Read More »
Laxmi News 24×7