Breaking News

ಅಪ್ಪನಿದ್ದ ಸೆಲ್‌ಗೆ ಮಗ: ಅತ್ಯಾಚಾರ ಕೇಸ್‌ನಲ್ಲಿ 14 ದಿನ ಪ್ರಜ್ವಲ್ ನ್ಯಾಯಾಂಗ ಬಂಧನ

ಬೆಂಗಳೂರು, ಜೂನ್ 10: ಹಾಸನ ಅಶ್ಲೀಲ ವಿಡಿಯೋಗಳಿದ್ದ ಪೆನ್‌ಡ್ರೈವ್ ಪ್ರಕರಣ, ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ 14 ದಿನ ಪ್ರಜ್ವಲ್ ನ್ಯಾಯಾಂಗ ಬಂಧನಕ್ಕೆ ನೀಡಿ ಸೋಮವಾರ ಆದೇಶ ಹೊರಡಿಸಿದೆ. ಎರಡನೇ ಭಾರಿಗೆ ವಶಕ್ಕೆ ಪಡೆದಿದ್ದ ಎಸ್‌ಐಟಿ ಅಧಿಕಾರಿಗಳ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಬಸವನಗುಡಿಯಲ್ಲಿ ಸ್ಥಳ ಮಹಜರು ಬಳಿಕ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದರು. ಪ್ರಜ್ವಲ್ ಮೇಲೆ ಇನ್ನು ಎರಡು ಅತ್ಯಾಚಾರ …

Read More »

ಆಪ್ತ ಸಹಾಯಕನಿಂದಲೇ ಅನ್ನದಾನೇಶ್ವರ ಮಠದ ಸ್ವಾಮೀಜಿಯ ಬರ್ಬರ ಹತ್ಯೆ

ಮೈಸೂರು, ಜೂ.10- ಆಪ್ತ ಸಹಾಯಕನೇ ಅನ್ನದಾನೇಶ್ವರ ಮಠದ ಸ್ವಾಮೀಜಿಯವರನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ನಜರ್‌ಬಾದ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶಿವಾನಂದ ಸ್ವಾಮೀಜಿ(90) ಕೊಲೆಯಾದ ಹಿರಿಯ ಶ್ರೀಗಳು. ಕಳೆದ ಹಲವಾರು ವರ್ಷಗಳಿಂದ ರವಿ ಎಂಬಾತ ಸ್ವಾಮೀಜಿಯವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಶ್ರೀಗಳ ಕೆಲಸ ಕಾರ್ಯಗಳಿಗೆ ನೆರವಾಗಿದ್ದ ಸಿದ್ದಾರ್ಥ ನಗರದಲ್ಲಿರುವ ಮಠದಲ್ಲೇ ನೆಲೆಸಿದ್ದು, ಶ್ರೀಗಳ ಯೋಗಕ್ಷೇಮ, ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಶ್ರೀಗಳನ್ನು ಕೊಲೆ ಮಾಡಿರುವುದು ಸಾಂಸ್ಕೃತಿಕ ನಗರಿಯ ಜನರನ್ನು ಬೆಚ್ಚಿಬೀಳಿಸಿದೆ. …

Read More »

ಕಾಂಗ್ರೆಸ್ ಶಾಸಕರು ಬಾಯಿ ಮುಚ್ಕೊಂಡಿದ್ದರೆ ಒಳ್ಳೆಯದು : ಬಹಿರಂಗವಾಗಿ ವಾರ್ನ್ ಕೊಟ್ಟ ಡಿಸಿಎಂ

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನಗಳನ್ನು ಪಡೆಯದೆ ಇದದರಿಂದ ಇದೀಗ ಕಾಂಗ್ರೆಸ್ ಹಲವು ಶಾಸಕರು ನಾಲಿಗೆ ಹರಿಬಿಡುತ್ತಿದ್ದಿದ್ದು, ಈ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಶಾಸಕರು ಬಾಯಿ ಮುಚ್ಕೊಂಡಿದ್ದರೆ ಒಳ್ಳೆಯದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.   ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 14 ಇಲ್ಲ 15 ಸೀಟ್ ಬರುತ್ತೆ ಅಂತ ನಮಗೆ …

Read More »

ಹೆಬ್ಬಾಳ್ಕರ್ ಕಡೆಗೆ ನೋಡಿ ಸ್ವಾರಿ ಎಂದ ಸಿಎಂ

ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್ಸಿನ ಕೆಲ ನಾಯಕರಲ್ಲಿ ಖುಷಿ ತಂದಿದ್ದರೆ ಇನ್ನೂ ಅನೇಕರಲ್ಲಿ ನೋವುಂಟು ಮಾಡಿದೆ. ಈ ಮಧ್ಯೆ ಬೆಳಗಾವಿಯಿಂದ ತಮ್ಮ ಪುತ್ರನನ್ನು ಕಣಕ್ಕೆ ಇಳಿಸಿದ್ದ ಸಚಿವೆ ಹೆಬ್ಬಾಳ್ಕರ್ ಅವರಿಗೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿರುವ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ಚುನಾವಣಾ ಫಲಿತಾಂಶದ ನಂತರ ಬೆಂಗಳೂರಿಗೆ ತೆರಳಿರುವ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರ ತಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದೆ. ಈ …

Read More »

ಬಗೆಹರಿಯದ ನೀರಿನ ಸಮಸ್ಯೆ: ಸರ್ಕಾರದ ಮಾತಿಗೆ ಇಲ್ಲಿ ಕವಡೆ ಕಾಸಿನ ಬೆಲೆ ಇಲ್ಲ

ರಾಯಚೂರು: ರಾಜ್ಯದಲ್ಲಿ ಯಾವ ಸರ್ಕಾರ ಬಂದರೇನು?, ಹೋದರೇನು? ಸರ್ಕಾರದ ಮಾತಿಗೆ ಜಿಲ್ಲೆಯಲ್ಲಿ ಕವಡೆ ಕಾಸಿನ ಬೆಲೆ ಇಲ್ಲ. ಜಿಲ್ಲೆಯ ಹಲವೆಡೆ ನೀರಿಗಾಗಿ ಪರಿತಪಿಸುತ್ತ ವರ್ಷ ಕಳೆದರೂ ಜಿಲ್ಲಾಡಳಿತ ಗಂಭೀರವಾಗಿಲ್ಲ. ಚುನಾಯಿತ ಪ್ರತಿನಿಧಿಗಳೂ ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನರ ಗೋಳು ಹೆಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಯಾವ ಲೆಕ್ಕಕ್ಕೂ ಇಲ್ಲ. ಅವರು ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ರಾಜ್ಯ …

Read More »

ಮದುವೆಯಾಗುವುದಾಗಿ ನಂಬಿಸಿ ₹ 1.69 ಲಕ್ಷ ವಂಚನೆ

ಧಾರವಾಡ: ಸಂಗೀತಾ ಎಂಬುವರು ‘ಜೀವನ್‌ ಸಾಥಿ’ ಮ್ಯಾಟ್ರಿಮೋನಿ ಆಯಪ್‌ ಮೂಲಕ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ₹1.69 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ‘ಸೆನ್‌’ (ಸೈಬರ್‌, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಕುಂದಗೋಳದ ಕುಶಾಲ್‌ ಅವರು ದೂರು ನೀಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಸಂಗೀತಾ ಮತ್ತು ಶಿವರಾಜಕುಮಾರ ವಿರುದ್ಧ ದೂರು ನೀಡಿದ್ಧಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ (2008), ವಂಚನೆ (ಐಪಿಸಿ 419 ಹಾಗೂ …

Read More »

ಮೋದಿ ಗೆದ್ದಿರುವುದು 1.5 ಲಕ್ಷ ಮತಗಳ ಅಂತರದಲ್ಲಿ ಮಾತ್ರ: ಸಂತೋಷ್ ಲಾಡ್

ಧಾರವಾಡ: ‘ಮೋದಿ ಅಲೆ ಕೆಲವು ಕಡೆ ಮಾತ್ರ ಇದೆ, ಎಲ್ಲ ಕಡೆ ಇಲ್ಲ. ಮೋದಿ ಅವರು ಗೆದ್ದಿರುವುದೇ 1.5 ಲಕ್ಷ ಮತಗಳ ಅಂತರದಲ್ಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕುಟುಕಿದರು. ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಧಾನಿಗಳು 5 ಲಕ್ಷಕ್ಕೂ ಹೆಚ್ಚು ಅಂತರ ಪಡೆದವರೇ ಹೆಚ್ಚು. ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಎರಡನೇ ಪ್ರಧಾನಿ ಮೋದಿ. ಚಂದ್ರಶೇಖರ್ ಅವರು 1.5 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು ಎಂದರು. …

Read More »

ಕಾರು ಚಾಲಕನ ನಿಯಂತ್ರಣ ತಪ್ಪಿ, ಕಬ್ಬಿನ ಗದ್ದೆಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ- ಇಬ್ಬರ ಸಾವು

ಹಂದಿಗುಂದ: ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ಕಬ್ಬಿನ ಗದ್ದೆಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ನಡೆದಿದೆ. ಸಮೀಪದ ಪಾಲಬಾವಿಯ ಮಹಾಲಿಂಗ ನಿಂಗನೂರ(47), ಈರಪ್ಪ ಉಗಾರೆ(32) ಮೃತಪಟ್ಟವರು. ಈ ಘಟನೆಯಲ್ಲಿ ಇಮಾಮ್ ಸನದಿ ಅವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಹಾರೂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಸದ್ದಾಮ್‌ ಪಠಾಣ ಪರಾರಿಯಾಗಿದ್ದಾರೆ. ‘ವೇಗವಾಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ …

Read More »

ಹುಕ್ಕೇರಿ: ಬಕ್ರೀದ್ ಶಾಂತಿ ಸಭೆ

ಹುಕ್ಕೇರಿ: ಬಕ್ರೀದ್ ಹಾಗೂ ಅಕಾನಿಬಾಷಾ ಉರುಸ್ ಶಾಂತಿಪಾಲನಾ ಪೂರ್ವಭಾವಿ ಸಭೆ ಪಾಶ್ಚಾಪುರ ಗ್ರಾಮದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆಯಿತು. ಯಮಕನಮರಡಿ ಪಿ.ಐ. ಮಹಾದೇವ ಶಿರಹಟ್ಟಿ, ಎ.ಎಸ್.ಐ. ಎಸ್.ಬಿ. ಮುರಗೋಡ, ಪೊಲೀಸ್ ಸಿಬ್ಬಂದಿ ಗ್ರಾಮಸ್ಥರ ಕುರಿತು ಚರ್ಚಿಸಿ, ಸಲಹೆ, ಸೂಚನೆ ನೀಡಿದರು.   ಪಾಶ್ಚಾಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ನಜೀರ ಮೊಮೀನ, ರಫೀಕ್ ಪೀರಜಾದೆ, ಅಣ್ಣಾಸಾಹೇಬ ಮಹಾಜನಶೆಟ್ಟಿ, ಅಮರ ಮಹಾಜನಶೆಟ್ಟಿ, ಹಯಾತಚಾಂದ ಸನದಿ, ಮಹೇಶ ಹೂಗಾರ, ಮಹಾಂತೇಶ …

Read More »

ಜಗದೀಶ್ ಶೆಟ್ಟರ್‌ ಮುಂದೆ ಸವಾಲುಗಳ ಸಾಲು…

ಬೆಳಗಾವಿ: ಸಂಸದ ಜಗದೀಶ ಶೆಟ್ಟರ್ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಜನ ‘ಮನೆಯ ಸದಸ್ಯ’ ಎಂದು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕವೇ ಅವರು ಈ ಮಾತಿಗೆ ‘ಠಸ್ಸೆ’ ಹೊಡೆಯಬೇಕಿದೆ. ‘ಬೆಳಗಾವಿಯಲ್ಲಿ ಶೆಟ್ಟರ್‌ಗೆ ಅಡ್ರೆಸ್ಸೇ ಇಲ್ಲ’ ಎಂಬ ಆರೋಪಕ್ಕೆ, ‘ಬೀಗರ ಮನೆಗೆ ಬಂದಿದ್ದೀರಿ ಶೆಟ್ಟರೇ, ಉಂಡು ವಾಪಸ್‌ ಹೋಗಿ’ ಎಂಬ ಮೂದಲಿಕೆಗೆ, ‘ಬೆಳಗಾವಿಗೆ ಮೋಸ ಮಾಡಿದವರಿಗೆ ಮತ ಕೊಡಬೇಕೆ?’ ಎಂಬ ಪ್ರಶ್ನೆಗಳಿಗೆ ಮತದಾರ ಈಗ ಉತ್ತರ ಕೊಟ್ಟಿದ್ದಾನೆ. ಶೆಟ್ಟರ್‌ ರಾಜಕೀಯ ಹೆಜ್ಜೆಯೊಂದನ್ನು …

Read More »