Breaking News

ಸರ್ಕಾರದ ಸೌಲಭ್ಯಕ್ಕಾಗಿ ಒಗ್ಗಟ್ಟಾಗಿ: ಶೆಟ್ಟರ್‌

ರಾಮದುರ್ಗ: ‘ವೀರಶೈವ ಲಿಂಗಾಯತ ಒಳಪಂಗಡಗಳು ಸಮಾಜದ ಪ್ರತಿಭಾವಂತರಿಗೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ಇಲ್ಲಿನ ಕರ್ನಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದ ಸೌಲಭ್ಯಕ್ಕಾದರೂ ಲಿಂಗಾಯತ ಸಮಾಜವನ್ನು ಒಟ್ಟಾಗಿಸುವ ಕಾರ್ಯ ಮಾಡಬೇಕು’ ಎಂದರು.   ‘ರಾಜ್ಯದಲ್ಲಿ ಬಣಜಿಗ ಸಮಾಜದ ಎಲ್ಲ ತಾಲ್ಲೂಕು ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ ರಾಜ್ಯ …

Read More »

ಜಿಎಸ್‌ಟಿಯಲ್ಲಿ ಬದಲಾವಣೆ: ಉದ್ಯಮಿಗಳಿಗೆ ಜಾಗೃತಿ

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ತೆರಿಗೆ ಸಮಿತಿಯಿಂದ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಇತ್ತೀಚಿನ ಬದಲಾವಣೆ ಕುರಿತ ವಿಚಾರ ಸಂಕಿರಣವನ್ನು ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು. ಲೆಕ್ಕಪರಿಶೋಧಕ ಶಂಭುಲಿಂಗಪ್ಪ ಪಾಟೀಲ ಅವರು, ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿ, ಪರಿಷ್ಕೃತ ತೆರಿಗೆ ಪದ್ಧತಿ ಕುರಿತು ಮಾಹಿತಿ ನೀಡಿದರು. ಲೆಕ್ಕಪರಿಶೋಧಕ ಕಿರಣ್‌ ಶಾವಿ ಅವರು, ಜಿಎಸ್‌ಟಿ ಕಾಯ್ದೆಯಲ್ಲಿನ ಬದಲಾವಣೆ ಬಗ್ಗೆ ತಿಳಿಸಿದರು. ಉದ್ದಿಮೆದಾರರೊಂದಿಗೆ ಸಂವಾದ ನಡೆಯಿತು. ಸಂಸ್ಥೆಯ ಅಧ್ಯಕ್ಷ ಎಸ್‌.ಪಿ. ಸಂಶಿಮಠ, …

Read More »

ಆ.24ರಿಂದ ಕನ್ನಡ ವೈದ್ಯ ಬರಹಗಾರರ ಸಮ್ಮೇಳನ

ಬೆಳಗಾವಿ: ಕನ್ನಡ ವೈದ್ಯ ಬರಹಗಾರರ 5ನೇ ರಾಜ್ಯ ಸಮ್ಮೇಳನವು ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಭವನದ ಎಚ್‌.ಬಿ.ರಾಜಶೇಖರ ಸಭಾಂಗಣದಲ್ಲಿ ಆಗಸ್ಟ್ 24 ಮತ್ತು 25ರಂದು ನಡೆಯಲಿದೆ. ವೈದ್ಯ ಸಾಹಿತಿ ಡಾ. ನಾ.ಸೋಮೇಶ್ವರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.   ಕೆಎಲ್‌ಇ ವಿಶ್ವವಿದ್ಯಾಲಯದ ಕನ್ನಡ ಬಳಗ, ಭಾರತೀಯ ವೈದ್ಯಕೀಯ ಸಂಘ ಹಾಗೂ ಕನ್ನಡ ವೈದ್ಯ ಬರಹಗಾರರ ಸಮಿತಿ ಸಹಯೋಗದಲ್ಲಿ ನಡೆಯುವ ಈ ಸಮ್ಮೇಳನವನ್ನು ಸಾಹಿತಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ …

Read More »

ನ್ಯಾಯ ಕೊಡಿ ಇಲ್ಲವೆ ದಯಾಮರಣಕ್ಕೆ ಅನುಮತಿ ಕೊಡಿ: ತಮ್ಮಣ್ಣ ಕಾಂಬಳೆ ಕುಟುಂಬದ ಧರಣಿ

ಬೆಳಗಾವಿ: ‘ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸಂಬಂಧಿಕರು ನಮಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅವಕಾಶ ನೀಡುತ್ತಿಲ್ಲ. ದೈಹಿಕವಾಗಿ ಹಲ್ಲೆಯನ್ನೂ ಮಾಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ. ಇಲ್ಲದಿದ್ದರೆ ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಆಗ್ರಹಿಸಿ ರಾಯಬಾಗ ತಾಲ್ಲೂಕಿನ ನಿಲಜಿಯ ತಮ್ಮಣ್ಣ ಕಾಂಬಳೆ ಕುಟುಂಬಸ್ಥರು ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ) ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ‘ನಮ್ಮ ಮೇಲೆ ಆಗಿರುವ ಅನ್ಯಾಯದ ಕುರಿತು ಕುಡಚಿ ಪೊಲೀಸರಿಗೆ ತಿಳಿಸಿದ್ದೇವೆ. ಆದರೆ, ಯಾವುದೇ ಕ್ರಮ ವಹಿಸಿಲ್ಲ. …

Read More »

ಕೊಲೆ ಪ್ರಕರಣ: ಎರಡು ವಿಶೇಷ ತಂಡ ರಚನೆ

ಬೆಳಗಾವಿ: ತಾಲ್ಲೂಕಿನ ಕರ್ಲೆ ಬಳಿ ವ್ಯಕ್ತಿಯೊಬ್ಬರ ಕೊಲೆ ಮಾಡಿದ ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ. ಕರ್ಲೆ-ಬಾದರವಾಡಿ ರಸ್ತೆಯಲ್ಲಿ ಸೋಮವಾರ ಹೊರಟಿದ್ದ ಮೋಹನ ತಳವಾರ(55) ಅವರನ್ನು ದುಷ್ಕರ್ಮಿಗಳು ತಡೆದು, ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ‘ಮೋಹನ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಎರಡು ವಿಶೇಷ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ’ …

Read More »

600 ಫಲಾನುಭವಿಗಳಿಗೆ ಶೀಘ್ರದಲ್ಲಿ ಸೂರು: ಜೊಲ್ಲೆ

ನಿಪ್ಪಾಣಿ: ‘ನಗರದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ₹ 133 ಕೋಟಿ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಜಿ +2 ಮಾದರಿಯ 2,052 ಮನೆಗಳ ನಿರ್ಮಾಣ ಕಾಮಗಾರಿಯನ್ನು ಬುಧವಾರ ಶಾಸಕಿ ಶಶಿಕಲಾ ಜೊಲ್ಲೆ ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ಕಾಮಗಾರಿಯ ಪ್ರಗತಿ ಕಾರ್ಯವನ್ನು ಪರಿಶೀಲಿಸಿ ಸೂಚನೆಗಳನ್ನು ನೀಡಿದರು. ಬಳಿಕ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಆವಾಸ ಯೋಜನೆಯ ಅಡಿ ಈಗ ಮತ್ತೆ ₹ 21 ಕೋಟಿ ಮಂಜೂರಾಗಿದೆ. 600 ಮನೆಗಳು ಸಿದ್ಧವಾಗಿದ್ದು, ಅಂತಿಮ ಹಂತದಲ್ಲಿವೆ. ಹೆಚ್ಚಿನ ಮೂಲ …

Read More »

ದೌರ್ಜನ್ಯ ತಡೆಯಲು ಸಮನ್ವಯದಿಂದ ಕೆಲಸ ಮಾಡಿ: ಡಾ.ನಾಗಲಕ್ಷ್ಮಿ ಚೌಧರಿ

ಬೆಳಗಾವಿ: ‘ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತಕ್ಷಣವೇ ಸ್ಪಂದಿಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ದೌರ್ಜನ್ಯಕ್ಕೆ ಸಂಬಂಧಿಸಿ ಸವದತ್ತಿ ತಾಲ್ಲೂಕಿನಲ್ಲಿ ಹೆಚ್ಚಿನ ದೂರು ಬಂದಿದ್ದವು. ಹಾಗಾಗಿ ಅಲ್ಲಿಗೆ ಭೇಟಿ …

Read More »

ಕೆಸೆಟ್: ಅರ್ಜಿ ಸಲ್ಲಿಸಲು ಆ. 28ರವರೆಗೆ ಅವಕಾಶ

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್- 2024) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಗಸ್ಟ್ 28ರವರೆಗೆ ವಿಸ್ತರಿಸಿದೆ. ‘ಅರ್ಜಿ ಸಲ್ಲಿಸಲು ಆಗಸ್ಟ್‌ 22 ಕೊನೆ ದಿನವಾಗಿತ್ತು. ಅಭ್ಯರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಿಸಲಾಗಿದೆ. ಶುಲ್ಕ ಪಾವತಿಸಲು ಆ. 30ರವರೆಗೆ ಅವಕಾಶ ನೀಡಲಾಗಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

Read More »

ನಿಮಗೆ ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಆದರೆ ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಕೋಲ್ಕತಾ: ಇಲ್ಲಿನ ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾರೆ. ಲೈಂಗಿಕ ಕಾರ್ಯಕರ್ತ ಮಹಿಳೆ ಕೆಲವು ನಿಮಿಷಗಳ ಕಾಮಕ್ಕಾಗಿ ಮಹಿಳೆಯರನ್ನು ಅತ್ಯಾಚಾರ ಮತ್ತು ಕೊಲ್ಲುವ ಬದಲು ಕೆಂಪು ದೀಪದ ಪ್ರದೇಶಗಳಿಗೆ ಭೇಟಿ ನೀಡುವಂತೆ ಪುರುಷರಿಗೆ ಸಲಹೆ ನೀಡಿದರು.   ನಿನಗೆ ಹೆಂಗಸಿನ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ನಮ್ಮ ಬಳಿಗೆ ಬಾ. ದಯವಿಟ್ಟು ಮಹಿಳೆಯರ …

Read More »

ಆನಂದಪುರದಲ್ಲಿ ಭಾರಿ ಮಳೆ ಅಂಗಡಿಗಳಿಗೆ ನುಗ್ಗಿದ ನೀರು

ಆನಂದಪುರ: ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಮುಂಬಾಳ ಹಾಗು ಸೂಳಗೊಡು ಗ್ರಾಮದಲ್ಲಿ ನಾಟಿ ಮಾಡಿದ ಗದ್ದೆಗಳಿಗೆ ಭಾರಿ ಹಾನಿ ಉಂಟಾಗಿದೆ. ಮತ್ತೆ ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದ ಆನಂದಪುರ ಹಳೆ ಸಂತೆ ಮಾರುಕಟ್ಟೆ ಹಾಗು ಹೆದ್ದಾರಿ ಪಕ್ಕದ ಹೋಟೆಲ್, ದಿನಸಿ ಅಂಗಡಿಗಳಿಗೆ ನೀರು ನುಗ್ಗಿದ್ದು. ಅರ್ಧ ತಾಸಿಗೂ ಅಧಿಕ ಕಾಲ ಸುರಿದ ಭಾರಿ ಮಳೆಯಿಂದ ಹೆದ್ದಾರಿಯಲ್ಲಿಯೂ ಬಾರಿ ಪ್ರಮಾಣದ ನೀರು ಹರಿದು ಜನರಲ್ಲಿ ಆತಂಕ ಉಂಟಾಗಿತ್ತು.

Read More »