Breaking News

ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

ಮಲ್ಪೆ: ಪ್ರವಾಸಿಗರ ಆಕರ್ಷಣೆಯಲ್ಲೊಂದಾಗಿ ರಾಜ್ಯದಲ್ಲೇ ಪ್ರಥಮ ಎಂಬಂತೆ ತೇಲುವ ಸೇತುವೆ (ಫ್ಲೋಟಿಂಗ್‌ ಬ್ರಿಡ್ಜ್) 2021ರಲ್ಲಿ ಮಲ್ಪೆ ಬೀಚ್‌ನಲ್ಲಿ ಪ್ರಾರಂಭಗೊಂಡಿದ್ದು, ಈ ಬಾರಿ ನ. 6ರಿಂದ ಪ್ರವಾಸಿಗರಿಗೆ ತೆರೆಯಲಾಗಿದೆ. ಇದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಕುತ್ತಿದೆ.   ಸಂಜೆ ಹೊತ್ತಿಗೆ ತಣ್ಣಗಿನ ಗಾಳಿಯನ್ನು ಆಸ್ವಾದಿಸಲು ಸಮುದ್ರ ತೀರದತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 4ರಿಂದ 5 ಸಾವಿರ ಪ್ರವಾಸಿಗರು ಮಲ್ಪೆ ಬೀಚ್‌ಗೆ ಬರುತ್ತಿದ್ದು, ವಾರಾಂತ್ಯದಲ್ಲಿ ಈ ಸಂಖ್ಯೆ 10 ಸಾವಿರವನ್ನು ದಾಟುತ್ತಿದೆ. ಸುಮಾರು …

Read More »

ಬಳ್ಳಾರಿಯಲ್ಲಿ ನಿಮ್ಮ ಅಟ್ಟಹಾಸ ಮುರಿದದ್ದು ಸಿದ್ದರಾಮಯ್ಯ ಅನ್ನೋದು ಮರೀಬೇಡಿ: ಸಿಎಂ

ಬಳ್ಳಾರಿ: ಶಾಸಕ ಜಿ.ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ, ಎಷ್ಟು ವರ್ಷ ಜೈಲಿಗೆ ಹೋಗಿ ಬಂದಿದೀರಿ. ನಿಮ್ಮ ಅಟ್ಟಹಾಸ ಮುರಿದದ್ದು, ಬಳ್ಳಾರಿ ಜಿಲ್ಲೆಯ ಮಹಾ ಜನತೆಯ ಭಯಮುಕ್ತಗೊಳಿಸಿದ್ದು ಇದೇ ಸಿದ್ದರಾಮಯ್ಯ ಅನ್ನೋದು ಮರೀಬೇಡಿ ಎಂದು ಸಿಎಂ ಸಿದ್ದರಾಮಯ್ಯ ಶಾಸಕ ಜನಾರ್ದನರೆಡ್ಡಿಗೆ ಬಹಿರಂಗವಾಗಿಯೇ ನೇರಾ ನೇರ ಎಚ್ಚರಿಕೆ ನೀಡಿದರು.   ಜಿಲ್ಲೆಯ ಸಂಡೂರಿನ ವಿಠಲಾಪುರದಲ್ಲಿ ಶನಿವಾರ ನಡೆದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪರ ಮತಯಾಚಿಸಿ ಮಾತನಾಡಿ ಪ್ರಚಾರ ಸಭೆಯಲ್ಲಿ, ತಮ್ಮ ವಿರುದ್ಧ …

Read More »

ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಮೇಲಿನ ಆರೋಪ: ದೇವಸ್ಥಾನದಲ್ಲಿ ಪ್ರಾರ್ಥನೆ

ಉಡುಪಿ: ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಬ್ಯಾಂಕ್ ಸಿಬಂದಿ, ಅಧಿಕಾರಿಗಳು ಶನಿವಾರ(ನ.9) ರಂದು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಯಾವುದೇ ಆಣೆ-ಪ್ರಮಾಣ ನಡೆದಿಲ್ಲ. ಮಾಜಿ ಶಾಸಕ ಕೆ. ರಘುಪತಿ ‌ಭಟ್ ಮೊದಲಾದವರು ಇದ್ದರು.

Read More »

ಶ್ರೀರಾಮಸೇನೆಯಿಂದ 21ನೇ ವರ್ಷದ ದತ್ತಮಾಲಾ ಅಭಿಯಾನ

ಚಿಕ್ಕಮಗಳೂರು: ಶ್ರೀರಾಮಸೇನೆಯಿಂದ ಹಮ್ಮಿಕೊಂಡಿರುವ 21ನೇ ವರ್ಷದ ದತ್ತಮಾಲಾ ಅಭಿಯಾನ ಭಾನುವಾರ(ನ10) ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದುಕೊಳ್ಳಲಿದ್ದಾರೆ. ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ದತ್ತದೀಪೋತ್ಸವ, ಪಡಿ ಸಂಗ್ರಹ ಕಾರ್ಯಗಳು ನಡೆದಿದ್ದು, ಭಾನುವಾರ ಬೆಳಗ್ಗೆ ನಗರದ ಶಂಕರಮಠ ಸಮೀಪದ ವೇದಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಸ್ವಾಮೀಜಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಸಭೆಯ ನಂತರ ಶಂಕರಮಠ ಸಮೀಪದಿಂದ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ …

Read More »

ಸಲ್ಮಾನ್ ಖಾನ್ ಚಿತ್ರದ ಚಿತ್ರೀಕರಣ ಸ್ಥಳದಲ್ಲಿ ವ್ಯಾಪಕ ಕಟ್ಟೆಚ್ಚರ

ಹೈದರಾಬಾದ್ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅಭಿನಯದ ‘ಸಿಕಂದರ್’ ಚಿತ್ರದ ಶೂಟಿಂಗ್ ಹೈದರಾಬಾದ್‌ನ ಸ್ಟಾರ್ ಹೋಟೆಲ್‌ನಲ್ಲಿ ನಡೆಯುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಟಾಪ್ ಹೀರೋಗೆ ಬಂದಿರುವ ನಿರಂತರ ಬೆದರಿಕೆಗಳ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ನಡೆಸಲಾಗುತ್ತಿದೆ.   ಸಲ್ಮಾನ್ ಖಾನ್ ಅವರು ‘ವೈ ಪ್ಲಸ್’ ವರ್ಗದ ಭದ್ರತೆ ಹೊಂದಿರುವುದರಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಶನಿವಾರ(ನ9) ತಿಳಿಸಿದ್ದು, ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿವೆ.’ಸಿಕಂದರ್’ ಚಿತ್ರದಲ್ಲಿ ‘ರಶ್ಮಿಕಾ …

Read More »

30 ವರ್ಷ ಮೈತ್ರಿಯಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ,ಕಾಂಗ್ರೆಸ್ ಹೇಗಾಗುತ್ತದೆ?

ಛತ್ರಪತಿ ಸಂಭಾಜಿನಗರ: ಬಿಜೆಪಿಯೊಂದಿಗೆ ಮೂರು ದಶಕಗಳ ಮೈತ್ರಿ ಮಾಡಿಕೊಂಡರೂ ಶಿವಸೇನೆ ತನ್ನ ಗುರುತನ್ನು ಕಳೆದುಕೊಂಡಿಲ್ಲ ಮತ್ತು ಈಗ ಅದು ಕಾಂಗ್ರೆಸ್‌ ಆಗಿ ಬದಲಾಗುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ(ನ9)ಹೇಳಿದ್ದಾರೆ.   ನವೆಂಬರ್ 20 ರ ಮಹಾರಾಷ್ಟ್ರ ಚುನಾವಣೆಗೆ ಮುಂಚಿತವಾಗಿ ಕಲಂನೂರಿ, ಹಿಂಗೋಲಿ ಮತ್ತು ವಸ್ಮತ್ ವಿಧಾನಸಭಾ ಕ್ಷೇತ್ರಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಹಿಂಗೋಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಿವಸೇನಾ (ಯುಬಿಟಿ) …

Read More »

ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು

ಬೆಂಗಳೂರು: ‘ಕೋವಿಡ್ -19 ವೇಳೆಯಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ತನಿಖಾ ಆಯೋಗವು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ(ನ9) ಹೇಳಿಕೆ ನೀಡಿದ್ದಾರೆ.   ”ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್ ಸಮಯದಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ ಲೂಟಿ …

Read More »

ಪತ್ನಿ ಹಾಗೂ ಮಗನನ್ನು ಬರ್ಬರವಾಗಿ ಕೊಲೆಗೈದು ಬಳಿಕ ರೈಲಿಗೆ ತಲೆಕೊಟ್ಟು ಪತಿ

ಪತ್ನಿ ಹಾಗೂ ಮಗನನ್ನು ಬರ್ಬರವಾಗಿ ಕೊಲೆಗೈದು ಬಳಿಕ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದೆ. 32 ವರ್ಷದ ಕಾರ್ತಿಕ್ ಭಟ್, ಮುಲ್ಕಿಯಲ್ಲಿನ ಫ್ಲ್ಯಾಟ್ ನಲ್ಲಿ ಪತ್ನಿ ಪ್ರಿಯಾಂಕಾ (28) ಹಾಗೂ 4 ವರ್ಷದ ಮಗ ಹೃದಯ್ ನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಬಳಿಕ ಮುಲ್ಕಿ ಹೊರವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ರೈಲು ಹಳಿ ಬಳಿ …

Read More »

ಕಾರ್ಗಲ್ ನಾಡಕಚೇರಿಯಲ್ಲೇ ದಾಖಲೆ ಒದಗಿಸಲು ಒತ್ತಾಯ

ಸಾಗರ: ಕಾರ್ಗಲ್‌ನ ನಾಡಕಚೇರಿಯಲ್ಲಿನ ದಾಖಲೆಗಳು ಕಾರ್ಗಲ್‌ನಲ್ಲೆ ಸಿಗುವಂತಾಗಬೇಕು ಎಂದು ಒತ್ತಾಯಿಸಿ ಇಲ್ಲಿನ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಶುಕ್ರವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. 2013ನೇ ಸಾಲಿನಲ್ಲಿ ಕಾರ್ಗಲ್‌ನಲ್ಲಿ ನಾಡಕಚೇರಿ ಆರಂಭಿಸಲಾಗಿದೆ. 2019ರಲ್ಲಿ ಅಲ್ಲಿನ ನಾಡಕಚೇರಿಗೆ ನೂತನ ಕಟ್ಟಡ ಕೂಡ ಲಭ್ಯವಾಗಿದೆ. ಆದರೆ, ಪ್ರಸ್ತುತ ಆ ಕಚೇರಿ ವ್ಯಾಪ್ತಿಗೆ ಬರುವ ಗ್ರಾಮಗಳ ದಾಖಲೆಗಳು ಅಲ್ಲಿ ಲಭ್ಯವಿಲ್ಲದೆ ಇರುವುದು ಸುತ್ತಮುತ್ತಲ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ. ಕಾರ್ಗಲ್ …

Read More »

ವಕ್ಫ್‌ ಕಾಯ್ದೆ ರದ್ದಿಗೆ ಆಗ್ರಹಿಸಿ ನ.12ರಂದು ಪ್ರತಿಭಟನಾ ಸಭೆ

ಬೆಳಗಾವಿ: ‘ವಕ್ಫ್‌ ಕಾಯ್ದೆ ರದ್ದುಪಡಿಸಬೇಕು ಒತ್ತಾಯಿಸಿ ಹಾಗೂ ಈ ಕಾಯ್ದೆಯಿಂದ ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಇಲ್ಲಿನ ಸಂಭಾಜಿ ಉದ್ಯಾನದಲ್ಲಿ ನ.12ರಂದು ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದೇವೆ’ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಮುಖಂಡ ಬಸವರಾಜ ಭಾಗೋಜಿ ಹೇಳಿದರು. ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಭೆ ಉದ್ದೇಶಿಸಿ ಮಾತನಾಡುವರು. ಜಿಲ್ಲೆಯ ವಿವಿಧ ಮಠಾಧೀಶರು, ಸಂತರು, …

Read More »