Breaking News

ಮಾಜಿ ಪ್ರಧಾನಿ ದೇವೇಗೌಡ ಹೊರಡಿಸಿರುವ ಪತ್ರಿಕಾ ಪ್ರಕಟಣೆ.

ಬೆಂಗಳೂರು (ಜೂನ್‌ 25); ರಾಜ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರಿಗೆ ಬಿಜೆಪಿ ಸಚಿವರುಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಮನೆಯ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ. ಜೂನ್‌.29 ರಂದು ಧರಣಿ ನಡೆಸಲಿರುವುದಾಗಿ ಸ್ವತಃ ಸಿಎಂ ಗೆ ಎಚ್ಚರಿಕೆ ಪತ್ರ ರವಾನಿಸಿದ್ದಾರೆ.ಸಿಎಂ ಗೆ ಪತ್ರ ಬರೆದಿರುವ ದೇವೇಗೌಡ, “ಸಚಿವ ಕೆ.ಸಿ. ನಾರಾಯಣಗೌಡ ಚುನಾವಣಾ ವೈಷಮ್ಯದ ಹಿನ್ನೆಲೆ ಕೆ.ಆರ್ ಪೇಟೆಯ ಜೆಡಿಎಸ್ ಕಾರ್ಯಕರ್ತ ಹೆಚ್.ಟಿ. …

Read More »

ಕಳೆದ ತಿಂಗಳು ಪಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ‘ಕೊರೋನಾ ವೈರಸ್‌’ ಕಾರಣ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ಇಸ್ಲಾಮಾಬಾದ್(ಜೂ.25): ಕಳೆದ ತಿಂಗಳು ಪಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ‘ಕೊರೋನಾ ವೈರಸ್‌’ ಕಾರಣ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ. ಪಾಕ್‌ ವಿಮಾನ ದುರಂತದಿಂದ ಅನೇಕರನ್ನು ಕಾಪಾಡಿದ ನಮಾಜ್‌! ಹೌದು, ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಪಿಐಎ)ಗೆ ಸೇರಿದ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳು ಅತಿಯಾದ ವಿಶ್ವಾಸದಲ್ಲಿ ವಿಮಾನ ಚಲಾಯಿಸುತ್ತಲೇ ಕೆಲಸದ ಬಗ್ಗೆ ಗಮನ ಕೊಡದೆ ಕೊರೋನಾ ಬಗ್ಗೆ ಚರ್ಚೆಯಲ್ಲಿ ಮುಳುಗಿದ್ದರಿಂದಲೇ ಈ ವಿಮಾನ ದುರಂತ ಸಂಭವಿಸಿದೆ ಎಂದು ಪಾಕಿಸ್ತಾನ ವಿಮಾನಯಾನ ಸಚಿವ …

Read More »

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಾಷ್ ತನ್ನದೇ ಆದ ವಿಶಿಷ್ಟ ರೀತಿಯ ಮಾಸ್ಕ್(ರಕ್ಷಣಾ ಮುಖಗವಸು) ವಿನ್ಯಾಸಗೊಳಿಸಿದೆ..?

ಬೆಂಗಳೂರು(ಜೂ.25): ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಾಷ್ ತನ್ನದೇ ಆದ ವಿಶಿಷ್ಟ ರೀತಿಯ ಮಾಸ್ಕ್(ರಕ್ಷಣಾ ಮುಖಗವಸು) ವಿನ್ಯಾಸಗೊಳಿಸಿದೆ. ಸಂಪೂರ್ಣ ಸ್ವಯಂಚಾಲಿತ ರಕ್ಷಣಾ ಮಾಸ್ಕ್ ಉತ್ಪಾದನಾ ವ್ಯವಸ್ಥೆಯನ್ನು ಬಾಷ್ ತನ್ನ ಬೆಂಗಳೂರಿನ ನಾಗನಾಥಪುರದಲ್ಲಿರುವ ಘಟಕದಲ್ಲಿ ಆರಂಭಿಸಿದೆ. ಇದರೊಂದಿಗೆ ದಿನಕ್ಕೆ 1,00,000 ದಷ್ಟು ಮಾಸ್ಕ್ ಗಳನ್ನು ಉತ್ಪಾದಿಸುವ ಗುರಿಯನ್ನು ಬಾಷ್ ಹೊಂದಿದೆ. ಈ ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಸಮುದಾಯಕ್ಕೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈ ಮಾಸ್ಕ್ ತಯಾರಿಕೆಯಿಂದ ಮಾರುಕಟ್ಟೆಯಲ್ಲಿ ಮಾಸ್ಕ್ …

Read More »

ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಸಿಬಿಎಸ್‌ಇಯ ಹತ್ತನೇ ಹಾಗೂ ಹನ್ನೆರಡನೇ ತರಗತಿಯ ಬಾಕಿ ಉಳಿದಿರುವ ಪರೀಕ್ಷಗಳನ್ನು ರದ್ದುಗೊಳಿಸುತ್ತಿರುವುದಾಗಿ ಸಿಬಿಎಸ್‌ಇ ಮಂಡಳಿ ಸಪ್ರೀಂಕೋರ್ಟ್‌ಗೆ ತಿಳಿಸಿದೆ.

ನವದೆಗಹಲಿ(ಜೂ.25): ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಸಿಬಿಎಸ್‌ಇಯ ಹತ್ತನೇ ಹಾಗೂ ಹನ್ನೆರಡನೇ ತರಗತಿಯ ಬಾಕಿ ಉಳಿದಿರುವ ಪರೀಕ್ಷಗಳನ್ನು ರದ್ದುಗೊಳಿಸುತ್ತಿರುವುದಾಗಿ ಸಿಬಿಎಸ್‌ಇ ಮಂಡಳಿ ಸಪ್ರೀಂಕೋರ್ಟ್‌ಗೆ ತಿಳಿಸಿದೆ. ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಈ ನಿಟ್ಟಿನಲ್ಲಿ ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಪರೀಕ್ಷೆಗಳನ್ನು ಸದ್ಯಕ್ಕೆ ರದ್ದುಗೊಳಿಸುತ್ತಿರುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಒಂದು ಅವಕಾಶ ನೀಡಲಾಗುತ್ತದೆ. ಮುಂದಿನ ದಿನಾಂಕದಂದು …

Read More »

ಜಿಲ್ಲಾ ಪಂಚಾಯ್ತಿ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ್‌ ಮೇಲೆ ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದಲ್ಲೇ ನಡೆದಿದೆ.

ಯಾದಗಿರಿ(ಜೂ.25): ಜಿಲ್ಲಾ ಪಂಚಾಯ್ತಿ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ್‌ ಮೇಲೆ ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕೂಗಳತೆ ದೂರದಲ್ಲೇ ನಡೆದಿದೆ. ಚಿತ್ತಾಪೂರ ರಸ್ತೆತಲ್ಲಿರುವ ಬುದ್ಧ ಬಸವ ನಗರದಲ್ಲಿ ಈ ಘಟನೆ ಜರುಗಿದ್ದು, ಗಂಭೀರ ಗಾಯಗೊಂಡ ಮರಿಲಿಂಗಪ್ಪ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಪುರ ಶಾಸಕ …

Read More »

ಮುಂದಿನ ತಿಂಗಳು ಜುಲೈ 1 ರಿಂದ 15 ವರೆಗೆ ನಡೆಯಬೇಕಿದ್ದ ಸಿಬಿಎಸ್ಇ 10 ಮತ್ತು 12 ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ ಸಿಬಿಎಸ್​ಇ ಬೋರ್ಡ್ ಆದೇಶ ಹೊರಡಿಸಿದೆ.

ಹೊಸದಿಲ್ಲಿ: ಮುಂದಿನ ತಿಂಗಳು ಜುಲೈ 1 ರಿಂದ 15 ವರೆಗೆ ನಡೆಯಬೇಕಿದ್ದ ಸಿಬಿಎಸ್ಇ 10 ಮತ್ತು 12 ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ ಸಿಬಿಎಸ್​ಇ ಬೋರ್ಡ್ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ಭೀತಿ ಲಾಕ್ ಡೌನ್ ಜಾರಿದ ಹಿನ್ನೆಲೆ ಹಲವು ಬಾರಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಜುಲೈ ನಲ್ಲಿ ಪರೀಕ್ಷೆ ನಡೆಸಲು ಬೋರ್ಡ್ ತಯಾರಿ ನಡೆಸಿತ್ತು. ಒಟ್ಟು 36 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಯಾರಿ ನಡೆಸಿದ್ದರು. ಸದ್ಯ ಇದೀಗ ದಿಢೀರ್ ಪರೀಕ್ಷೆ ರದ್ದು …

Read More »

ರಾಕೆಟ್‍ಗಳು, ಉಪಗ್ರಹಗಳು ಮತ್ತು ಉಡಾವಣಾ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಖಾಸಗಿ ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.

ಹೊಸದಿಲ್ಲಿ: ರಾಕೆಟ್‍ಗಳು, ಉಪಗ್ರಹಗಳು ಮತ್ತು ಉಡಾವಣಾ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಖಾಸಗಿ ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ. ದೆಹಲಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್, ನಮ್ಮ ಸಂಸ್ಥೆಯ ಬಾಹ್ಯಾಕಾಶ ಯೋಜನೆಗಳಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ನಿನ್ನೆಯಷ್ಟೆ ಕೇಂದ್ರ ಸಚಿವ ಸಂಪುಟ ಇಸ್ರೋದ ಬಾಹ್ಯಾಕಾಶ ಯೋಜನೆಗಳು ಮತ್ತು ಇತರ ಚಟುವಟಿಕೆಗಳಲ್ಲಿ ಖಾಸಗಿ ಸಂಸ್ಥೆಗಳು ಸಹಭಾಗಿತ್ವ …

Read More »

ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗೆ ಪ್ರಜ್ಞೆ ತಪ್ಪಿ ಅಸ್ವಸ್ಥ,ಆಸ್ಪತ್ರೆಗೆ ದಾಖಲು: ಗೋಕಾಕ

ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗೆ ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಗೋಕಾಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಎಲ್ ಇ ಟಿ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದ್ದು ವಿದ್ಯಾರ್ಥಿಯನ್ನು   ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲೇ ಅಸ್ವಸ್ಥಳಾಗಿದ್ದ ವಿದ್ಯಾರ್ಥಿಯು  ಈಗ ಚೇತರಿಸಿಕೊಂಡಿದ್ದು ಆರೋಗ್ಯವಾಗಿದ್ದಾಳೆ  

Read More »

ಇಂದಿನಿಂದ SSLC ಪರೀಕ್ಷೆ ಆರಂಭ- ವಿದ್ಯಾರ್ಥಿಗಳೇ ಭಯ ಬೇಡ…….

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಈ ಭಯದ ಮಧ್ಯೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ರಾಜ್ಯಾದ್ಯಂತ ಒಟ್ಟು 8,48,203 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲಿದ್ದಾರೆ. ಇಂದಿನಿಂದ ಜುಲೈ 4ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಬೆಳಗ್ಗೆ 10.30 ರಿಂದ 1.30 ವರೆಗೆ ಪರೀಕ್ಷೆ ನಡೆಯಲಿದ್ದು, ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡ್ಕೊಂಡಿದೆ. ಎಲ್ಲಾ ಕಡೆ ಎರಡೆರಡು ಬಾರಿ ಸ್ಯಾನಿಟೈಸ್ …

Read More »

ಜುಲೈ 5ರ ತನಕ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡದಿರಲು ಯಡಿಯೂರಪ್ಪ ತಿರ್ಮಾನಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈ ಮಧ್ಯೆ ಇಂದಿನಿಂದ ಎಸ್‍ಎಸ್‍ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು, ಹೀಗಾಗಿ ಪರೀಕ್ಷೆ ಮಗಿದ ಬಳಿಕವಷ್ಟೇ ಲಾಕ್ ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಹಲವು ಸಚಿವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿರುವ ಸಿಎಂ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿಯುವ ತನಕ ಲಾಕ್ ಡೌನ್ ಎಲ್ಲಿಯೂ …

Read More »