ಬೆಳಗಾವಿ- ಕಳಸಾ, ಬಂಡೂರಿ ಹಾಗೂ ಮಹಾದಾಯಿ ಕಾಮಗಾರಿ ಆರಂಭ ವಿಚಾರ ಕುರಿತು ದೆಹಲಿಗೆ ಹೋಗಲು ವಿಮಾನ ಸೌಲಭ್ಯ ಇಲ್ಲ, ಹೀಗಾಗಿ ಹೋಗಲಾಗಿಲ್ಲ ಶೀಘ್ರದಲ್ಲೇ ರಸ್ತೆಯ ಮೂಲಕವೇ ಅಧಿಕಾರಿಗಳ ಜೊತೆಗೆ ದೆಹಲಿಗೆ ಹೋಗಿ ಕೇಂದ್ರ ಜತೆ ಚರ್ಚೆ ಮಾಡುವದಾಗಿ ಜಲಸಂಪನ್ನೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಜಲಸಂಪನ್ಮೂಲ ಇಲಾಖೆತ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವನಾದ ಬಳಿಕ ರಾಜ್ಯದ ಎಲ್ಲಾ ಜಲಾಶಯಕ್ಕೆ ಭೇಟಿ ನೀಡಿದ್ದೇನೆ. …
Read More »48 ಸಾವಿರದ ಗಡಿಯತ್ತ ಚಿನ್ನ………ತೆರಿಗೆ ಶೇ.12.5 ಹಾಗೂ ಶೇ.3ರಷ್ಟು ಜಿಎಸ್ಟಿ ಸಹ ಸೇರಿದೆ.
ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ಆರ್ಥಿಕತೆ ಬುಡಮೇಲಾಗಿದ್ದು, ಇದರ ಪರಿಣಾಮ ಚಿನ್ನದ ಮೇಲೂ ಬೀರಿದೆ. ಹೀಗಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 47,740 ರೂ. ತಲುಪಿದ್ದು, ಬೆಳ್ಳಿ ಪ್ರತಿ ಕೆಜಿಗೆ 48,190 ರೂ.ಗೆ ಏರಿಕೆಯಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್(ಎಂಸಿಎಕ್ಸ್)ನಲ್ಲಿ ಸೋಮವಾರದ ಚಿನ್ನದ ಬೆಲೆ 47,740 ರೂ. ಗಡಿ ದಾಟಿದ್ದು, ಶುಕ್ರವಾರದಿಂದ ಈವರೆಗೆ ಕೇವಲ ಮೂರು ದಿನಗಳಲ್ಲಿ 10 ರೂ.ಹೆಚ್ಚಾಗಿದೆ. ಇಂದು ಪ್ರತಿ 10 ಗ್ರಾಂ. 22 ಕ್ಯಾರೆಟ್ ಚಿನ್ನದ …
Read More »ರೆಡ್ಝೋನ್ ಬಿಟ್ಟು ಬೇರೆ ಪ್ರದೇಶದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ: ಸವದಿ
ಬೆಂಗಳೂರು: ರೆಡ್ ಝೋನ್ ಮತ್ತು ಕಂಟೈನ್ಮೆಂಟ್ ಪ್ರದೇಶಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಬಸ್ ಸಂಚಾರ ಆರಂಭ ಮಾಡುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಇಂದು ಬಸ್ ಸಂಚಾರದ ಬಗ್ಗೆಜೊತೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಇದೆ. ಸಭೆಯಲ್ಲಿ ಬಸ್ ಸಂಚಾರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬಹುತೇಕ ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಬಸ್ ಸಂಚಾರದ ವಿಚಾರದಲ್ಲಿ …
Read More »Lockdown 4.0: ದೇಶಾದ್ಯಂತ ಲಾಕ್ಡೌನ್ ವಿಸ್ತರಣೆ; ಇಂದು ಸಿಎಂ ಯಡಿಯೂರಪ್ಪ ಮಹತ್ವದ ಸಭೆ
ಬೆಂಗಳೂರು (ಮೇ 17): ಕೇಂದ್ರ ಸರ್ಕಾರದಿಂದ ಮೇ 31ರವರೆಗೂ ಲಾಕ್ಡೌನ್ ವಿಸ್ತರಿಸಲಾಗಿದೆ. 4ನೇ ಹಂತದ ಲಾಕ್ಡೌನ್ ಮಾರ್ಗಸೂಚಿಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಆಯಾ ರಾಜ್ಯಗಳಲ್ಲಿ ಲಾಕ್ಡೌನ್ ಸಡಿಲಗೊಳಿಸುವ ಸ್ವಾತಂತ್ರ್ಯವನ್ನು ಮುಖ್ಯಮಂತ್ರಿಗಳಿಗೆ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರದಿಂದ ಮೇ 31ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಲಾಕ್ ಡೌನ್ 4.0 ಕುರಿತು ಕೇಂದ್ರ ಸರ್ಕಾರ …
Read More »ಸಂಚಾರಕ್ಕೆ ಸಜ್ಜಾಗಿವೆ ಬಸ್ಸುಗಳು; ಶೇ. 30ರಷ್ಟು ಪ್ರಯಾಣ ದರ ಏರಿಕೆಗೆ ಸರ್ಕಾರ ಚಿಂತನೆ
ಬೆಂಗಳೂರು(ಮೇ 18): ಲಾಕ್ ಡೌನ್ ಘೋಷಣೆಯಾದಾಗಿನಿಂದಲೂ ಸಾರ್ವಜನಿಕ ಬಸ್ ಸೇವೆ ಸ್ಥಗಿತಗೊಂಡಿದೆ. ಸರ್ಕಾರ ಯಾವಾಗ ಬೇಕಾದರೂ ಬಸ್ ಸೇವೆ ಪುನಾರಂಭಿಸುವ ಸಾಧ್ಯತೆ ಇದೆ. ರಾಜ್ಯದ ಸಾರಿಗೆ ಸಂಸ್ಥೆಗಳು ಬಸ್ ಸಂಚಾರ ಸೇವೆಗೆ ಸಜ್ಜಾಗಿವೆ. ಸಂಚಾರ ವೇಳೆ, ಕೊರೋನಾ ವೈರಸ್ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಕೈಗೊಂಡಿವೆ. ರಾಜ್ಯದ ಅನುಮತಿಗಷ್ಟೇ ಸಾರಿಗೆ ಸಂಸ್ಥೆಗಳು ಕಾಯುತ್ತಿವೆ. ಇದೇ ವೇಳೆ, ವಿವಿಧ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು …
Read More »ಟೆಸ್ಟ್ ಮಾಡಿಸದೇ ಮನೆಗೆ ಬರ್ಬೇಡ’- ಮಗನನ್ನೇ ಹೊರಗಿಟ್ಟ ಪೋಷಕರು
ಮಂಗಳೂರು: ಹೊಸದಾಗಿ ಮಂಗಳೂರಿನಲ್ಲಿ ದೃಢಪಟ್ಟಿರುವ ರೋಗಿ-1094ನ ಕೊರೊನಾ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ ಹಾಗೂ ಈತನ ಟ್ರಾವಲ್ ಹಿಸ್ಟರಿ ಭಯಾನಕವಾಗಿದೆ. ಮಂಗಳೂರಿನ ಹೊರವಲಯದ ಜೆಪ್ಪುಪಟ್ನದ 31 ವರ್ಷದ ಸೋಂಕಿತ ಕಳೆದು 10 ದಿನಗಳ ಹಿಂದೆ ದೆಹಲಿಯಿಂದ ಮಂಗಳೂರಿಗೆ ಬಂದಿದ್ದಾನೆ. ಲಾಕ್ಡೌನ್ ಇದ್ದರೂ ಕಾಲ್ನಡಿಗೆಯಲ್ಲಿ ದೆಹಲಿಯಿಂದ ಹೊರಟು, ಅಲ್ಲಲ್ಲಿ ಸಿಕ್ಕ-ಸಿಕ್ಕ ವಾಹನಗಳಿಂದ ಡ್ರಾಪ್ ಪಡೆದು, ಚೆಕ್ಪೋಸ್ಟ್ ಗಳಲ್ಲಿ ವಂಚಿಸಿ ಮನೆ ತಲುಪಿದ್ದಾನೆ. ದೆಹಲಿಯಿಂದ ಮನೆಗೆ ಬಂದ ಮಗನನ್ನು ತಂದೆ-ತಾಯಿ ಮನೆಗೆ ಸೇರಿಸಿಲ್ಲ. ಮೊದಲು ಹೋಗಿ …
Read More »ಇನ್ಸ್ಟಾಗ್ರಾಮ್ ತೊರೆದ ಕಣ್ಸನ್ನೆ ಚೆಲುವೆ………..
ತಿರುವನಂತಪುರಂ: ತನ್ನ ಕಣ್ಸನ್ನೆ ಮೂಲಕವೇ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿ, ಕಣ್ಸನ್ನೆ ಚೆಲುವೆ ಎಂದೇ ಖ್ಯಾತಿ ಪಡೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ. ಹೌದು ಕಣ್ಸನ್ನೆ ಮೂಲಕವೇ ಬಾಲಿವುಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಳ್ಳುವ ಮೂಲಕ ಬಹುಬೇಡಿಕೆ ನಟಿಯಾಗಿರುವ ಪ್ರಿಯಾ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು, ಇದರ ಭಾಗವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಕಂಡ ಅವರ …
Read More »ಭಾರತದಲ್ಲಿ ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆ – 24 ಗಂಟೆಯಲ್ಲಿ 5,242 ಹೊಸ ಪ್ರಕರಣ ಪತ್ತೆ
ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 96,169ಕ್ಕೆ ಏರಿಕೆಯಾಗಿದೆ. 3,029 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. 24 ಗಂಟೆಯಲ್ಲಿ 5,242 ಹೊಸ ಪ್ರಕರಣಗಳು ಹಾಗೂ 157 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈವರೆಗೆ ಭಾರತದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು 36,824 ಮಂದಿ ಗುಣಮುಖರಾಗಿದ್ದಾರೆ. 56,316 ಸೋಂಕಿತರು ಇನ್ನೂ ಕೊರೊನಾದಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ …
Read More »ಹಿರಿಯ ರಾಜಕೀಯ ಮುತ್ಸದ್ಧಿ ದೇವೇಗೌಡರ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಾಶಯ
ಬೆಂಗಳೂರು: ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು 88ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು “ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆಯಸ್ಸು ಮತ್ತು ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡುವ ಮೂಲಕ …
Read More »ಲಾಕ್ಡೌನ್ನಿಂದ ಹೆಚ್ಚಾದ ಆರ್ಥಿಕ ಸಮಸ್ಯೆ- ಬೆಂಕಿ ಹಚ್ಚಿಕೊಂಡು 26ರ ಗೃಹಿಣಿ ಆತ್ಮಹತ್ಯೆ
ಹೈದರಾಬಾದ್: ಕೊರೊನಾ ವೈರಸ್ ಎಂಬ ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಹೇರಲಾಗಿತ್ತು. ಆದರೆ ಈ ಲಾಕ್ ಡೌನ್ ನಿಂದಾಗಿ ಸ್ವಲ್ಪ ಮಟ್ಟಿಗೆ ಪ್ರಯೋಜನವಾದರೆ ಇನ್ನೂ ಕೆಲವರ ಬದುಕಿನಲ್ಲಿ ಕತ್ತಲು ಕವಿದಂತಾಗಿದೆ. ಹಾಗೆಯೇ ಆರ್ಥಿಕ ಸಮಸ್ಯೆಯನ್ನು ಎದುರಿಸಲಾಗಿದೆ 26 ವರ್ಷದ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಈ ಘಟನೆ ಹೈದರಾಬಾದ್ ನ ಪರಿಗಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಆರ್ಥಿಕವಾಗಿ ಸರಳ ಕುಟುಂಬ ಹಿಂದುಳಿದಿತ್ತು. ಇದೀಗ …
Read More »